ಸನ್‌ ಬರ್ನ್‌ನಿಂದ ದೇಹದ ಅಂದ ಕಡಿಮೆಯಾಗಿದೆಯೇ? ಹಾಗಾದ್ರೆ ಈ ಟಿಪ್ಸ್‌ ಪಾಲಿಸಿ

ಬೇಸಿಗೆಯಲ್ಲಿ ಬಿಸಿಲಿನ ತಾಪವು 45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದಾಗ, ಚರ್ಮದ ಮೇಲೆ ನೇರ ಸೂರ್ಯನ ಬೆಳಕಿನ ಕಿರಣಗಳು ಪರಿಣಾಮ ಬೀರಲು ಪ್ರಾರಂಭವಾಗುತ್ತದೆ. ಹೀಗಂತ ನಾವು ಮನೆಯಲ್ಲಿಯೇ ಕುಳಿತು ಕೆಲಸ ಮಾಡಲು ಸಾಧ್ಯವಿಲ್ಲ. ಸುಡುವ ಬಿಸಿಲಿನಲ್ಲಿಯೂ ನೀವು ಹೊರಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಆ ಬಳಿಕ ದೇಹದಲ್ಲಿ ಕಂಡುಬರುವ ಸನ್‌ಬರ್ನ್‌ಗಳನ್ನು ಕಡಿಮೆಗೊಳಿಸಬೇಕಾದರೆ ಕೊಂಚ. ಹೀಗಾಗಿ ಇಲ್ಲಿ ಕೆಲ ಸಲಹೆಗಳನ್ನು ನೀಡುತ್ತಿದ್ದೇವೆ. ಈ ಮೂಲಕ ದೇಹದಲ್ಲಿ ಕಂಡುಬರುವ ಸನ್‌ಬರ್ನ್‌ಗಳನ್ನು ಶೀಘ್ರವಾಗಿ ಗುಣಪಡಿಸಬಹುದು. 
 

1 /4

ಅನೇಕ ಬಾರಿ ಜನರು ಬೀಚ್ ವಿಹಾರಕ್ಕೆ ಹೋಗುತ್ತಾರೆ. ಆದರೆ ಆ ಸಂದರ್ಭದಲ್ಲಿ ಬಿಸಿಲಿನ ಶಾಖ ನೇರವಾಗಿ ಚರ್ಮಕ್ಕೆ ಬಿದ್ದು ಟ್ಯಾನ್‌ ಆಗುತ್ತದೆ. ಈ ಸಂದರ್ಭದಲ್ಲಿ ಅಲೋವೆರಾ ಜೆಲ್‌ನ್ನು ಚರ್ಮಕ್ಕೆ ಹಚ್ಚಬೇಕು. ಇದು ಚರ್ಮದ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. 

2 /4

ಜೇನುತುಪ್ಪವು ಚರ್ಮದ ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಸನ್ಬರ್ನ್ ಮತ್ತು ಟ್ಯಾನಿಂಗ್ ಅನ್ನು ನಿವಾರಿಸುತ್ತದೆ. ಚರ್ಮದ ಮೇಲೆ ಜೇನುತುಪ್ಪವನ್ನು ಮಸಾಜ್ ಮಾಡಿ, ಬಳಿಕ ಸ್ವಲ್ಪ ಸಮಯದವರೆಗೆ ಅದನ್ನು ಬಿಟ್ಟು ಶುದ್ಧ ನೀರಿನಿಂದ ತೊಳೆಯಿರಿ. 

3 /4

ಮುಖದ ಮೇಲೆ ಉಂಟಾಗುವ ಬರ್ನಿಂಗ್, ನೋವು ಮತ್ತು ಊತವನ್ನು ಐಸ್‌ ಕ್ಯೂಬ್‌ ಬಳಸಿ ಕಡಿಮೆ ಮಾಡಬಹುದು.  ಐಸ್ ಕ್ಯೂಬ್‌ಗಳನ್ನು ಬಟ್ಟೆಯಲ್ಲಿ ಸುತ್ತಿ ಮುಖಕ್ಕೆ ಚೆನ್ನಾಗಿ ಉಜ್ಜಿದರೆ ತ್ವರಿತ ಪರಿಹಾರ ಕಂಡುಕೊಳ್ಳಬಹುದು. 

4 /4

ತೆಂಗಿನ ಎಣ್ಣೆ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದನ್ನು ಚರ್ಮದ ಟ್ಯಾನಿಂಗ್‌ ಹೋಗಲಾಡಿಸಲು ಬಳಸಬಹುದು.