ಬೆಲೆ ಏರಿಕೆಯಿಂದ ಬಸವಳಿದ ಜನತೆಗೆ ನಮ್ಮ ಗೃಹಲಕ್ಷ್ಮಿ ಯೋಜನೆ ನೆರವಾಗಿ ನಿಲ್ಲಲಿದೆ. ಪ್ರತಿ ಕುಟುಂಬದ ಶಕ್ತಿಯೇ ಹೆಣ್ಣು, ಆ ಹೆಣ್ಣುಮಕ್ಕಳ ಕೈ ಬಲಪಡಿಸುವುದೇ ನಮ್ಮ ಉದ್ದೇಶವೆಂದು ಕಾಂಗ್ರೆಸ್ ಹೇಳಿದೆ.
ಉದ್ಯೋಗವನ್ನು ಕೊಡುತ್ತೇವೆ, ಉದ್ಯೋಗ ಸಿಗುವವರೆಗೆ ನಿರುದ್ಯೋಗ ಭತ್ಯೆಯನ್ನು ಕೊಡುತ್ತೇವೆ. ನಿರುದ್ಯೋಗದಿಂದ ಕಂಗೆಟ್ಟಿರುವ ಯುವಜನತೆಗೆ ಯುವನಿಧಿಯ ಮೂಲಕ ನೆರವು ನೀಡಲಾಗುವುದು ಎಂದು ಕಾಂಗ್ರೆಸ್ ಸರ್ಕಾರ ಹೇಳಿದೆ.
ವಿದ್ಯಾರ್ಥಿನೀಯರಿಗೆ, ಉದ್ಯೋಗಸ್ಥ ಮಹಿಳೆಯರಿಗೆ ನೆರವಾಗುವ ಹಾಗೂ ಸ್ತ್ರೀ ಸಬಲೀಕರಣಕ್ಕೆ ಒತ್ತು ನೀಡುವ ಉಚಿತ ಪ್ರಯಾಣ ಯೋಜನೆ ಸಾಮಾಜಿಕ ಕ್ರಾಂತಿಗೆ ಕಾರಣವಾಗಲಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
200 ಯೂನಿಟ್ ಉಚಿತ ವಿದ್ಯುತ್ ನೀಡುವ ಮೂಲಕ ನಮ್ಮ ಸರ್ಕಾರ ರಾಜ್ಯದ ಜನತೆಯ ಮೇಲಿನ ಆರ್ಥಿಕ ಹೊರೆಯನ್ನು ಇಳಿಸುವ ಪ್ರಯತ್ನ ಮಾಡಿದೆ ನಮ್ಮ ಸರ್ಕಾರ. ನಾವು ನುಡಿದಂತೆ ನಡೆದಿದ್ದೇವೆ ಎಂದು ಕಾಂಗ್ರೆಸ್ ಹೇಳಿದೆ.
ರಾಜ್ಯದ ಶ್ರಮಜೀವಿ ವರ್ಗಕ್ಕೆ, ಬಡವರಿಗೆ ಅನ್ನಭಾಗ್ಯ ಯೋಜನೆಯಲ್ಲಿ 10 ಕೆಜಿ ಅಕ್ಕಿ ನೀಡುವ ಮೂಲಕ ಜಗಜ್ಯೋತಿ ಬಸವಣ್ಣನವರ ದಾಸೋಹ ತತ್ವದ ಆಶಯವನ್ನು ಸಾಕಾರಗೊಳಿಸುತ್ತಿದೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿದೆ.