Why Beggars Hair Is Strong: ಸಾಮಾನ್ಯವಾಗಿ ನೀವು ನೋಡಿರಬಹುದು. ಭಿಕ್ಷುಕರು, ಸಾಧುಗಳ ಕೂದಲು ಸಖತ್ ಸ್ಟ್ರಾಂಗ್ ಆಗಿರುತ್ತದೆ. ಅದಕ್ಕೆ ಕಾರಣ ಏನೆಂದು ತಿಳಿದರೆ ನಿಮಗೆ ಶಾಕ್ ಆಗೋದು ಖಂಡಿತ.
ಸಾಮಾನ್ಯವಾಗಿ ನೀವು ನೋಡಿರಬಹುದು. ಭಿಕ್ಷುಕರು, ಸಾಧುಗಳ ಕೂದಲು ಸಖತ್ ಸ್ಟ್ರಾಂಗ್ ಆಗಿರುತ್ತದೆ. ಅದಕ್ಕೆ ಕಾರಣ ಏನೆಂದು ತಿಳಿದರೆ ನಿಮಗೆ ಶಾಕ್ ಆಗೋದು ಖಂಡಿತ.
ಊರಿಡೀ ಸುತ್ತುತ್ತಾರೆ, ಧೂಳುಗಳು ತಾಕುತ್ತದೆ, ತಲೆಗೆ ಎಣ್ಣೆಯನ್ನುಹಾಕೋದಿಲ್ಲ, ಶಾಂಪೂ ಬಳಕೆ ಕೂಡ ಮಾಡಲ್ಲ. ಆದ್ರೂ ಅವರ ಕೂದಲು ಸ್ಟ್ರಾಂಗ್ ಆಗಿರುತ್ತದೆ. ಇದು ಹೇಗೆ ಸಾಧ್ಯ ಎಂದು ನಿಮ್ಮ ಮನಸ್ಸಿಗೆ ಬಂದಿರಬಹುದು. ಈ ವಿಚಿತ್ರ ರಹಸ್ಯದ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
ಅಲೋಪತಿ ಅಥವಾ ಆಧುನಿಕ ವಿಜ್ಞಾನದಲ್ಲಿ ಈ ಪ್ರಶ್ನೆಗೆ ಉತ್ತರವಿಲ್ಲ. ಆದರೆ ಆಯುರ್ವೇದ ಪುಸ್ತಕದಲ್ಲಿ ಬರೆದಿರುವಂತೆ, ಇವರಲ್ಲಿ ಹೆಚ್ಚು ರೋಗನಿರೋಧಕ ಶಕ್ತಿ ಇರುತ್ತದೆ.
ಜೊತೆಗೆ ಇವರಲ್ಲಿರುವ ಜೀರ್ಣಶಕ್ತಿಯೇ ಇದಕ್ಕೆ ಕಾರಣ. ಸಿಕ್ಕಿದನ್ನೆಲ್ಲಾ ತಿನ್ನುವ ಇವರಿಗೆ ಆಹಾರವನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯವು ಹೆಚ್ಚಾಗಿಯೇ ಇರುತ್ತದೆ ಎಂದು ಹೇಳಲಾಗುತ್ತದೆ.
ಸಾಮಾನ್ಯವಾಗಿ ಮುಂಜಾನೆ ಬೇಗ ಏಳುತ್ತಾರೆ ಮತ್ತು ಸಂಜೆ ಬೇಗ ಮಲಗುತ್ತಾರೆ. ಜೊತೆಗೆ ಬಿಸಿಲ ಬೇಗೆ ತಪ್ಪಿಸಲು ಮರದ ಕೆಳಗೆ ಕುಳಿತುಕೊಳ್ಳುತ್ತಾರೆ. ಅವರಿಗೆ ಒತ್ತಡಗಳ ಜಂಜಾಟ ಇರುವುದಿಲ್ಲ. ಇದೇ ಕಾರಣಕ್ಕೆ ಅವರ ಕೂದಲು ಸ್ಟ್ರಾಂಗ್ ಆಗಿ ಇರುತ್ತದೆ ಎಂದು ಹೇಳಲಾಗುತ್ತದೆ.
ಇನ್ನು ಆಯುರ್ವೇದದ ಮಾತ್ರವಲ್ಲ, ಜ್ಯೋತಿಷ್ಯದಲ್ಲಿಯೂ ಈ ಸಂಬಂಧ ಉತ್ತರವನ್ನು ಹೇಳಲಾಗಿದೆ. ಯಾರ ಜಾತಕದಲ್ಲಿ ಶನಿ ಅಂಶವು ಬಲವಾಗಿ, ಮಂಗಳ ಮತ್ತು ಸೂರ್ಯನ ಅಂಶಗಳು ಬಲಹೀನವಾದರೆ ಆ ವ್ಯಕ್ತಿಯು ಸೋಮಾರಿಯಾಗುತ್ತಾನೆ. ಬಳಿ ತನ್ನ ಆರೋಗ್ಯದ ಬಗ್ಗೆ ಆತ ಕಾಳಜಿ ವಹಿಸುವುದಿಲ್ಲ. ಈ ಕಾರಣದಿಂದ ಅಂತಹ ಜನರಿಗೆ ಇತರರಿಗಿಂತ ಬಲವಾದ ಕೂದಲು ಮತ್ತು ಉಗುರುಗಳು ಬರುತ್ತವೆಯಂತೆ. ಕೆಲವೊಮ್ಮೆ ಅಂತಹ ಜನರ ಕೂದಲು ಬೆಳ್ಳಗಾಗುವುದಿಲ್ಲ ಎಂದೂ ಹೇಳಲಾಗುತ್ತದೆ.