ಈ ರಾಶಿಯಲ್ಲಿ ಗಜ ಲಕ್ಷ್ಮೀ ರಾಜಯೋಗ! ಭರಪೂರವಾಗಿರುತ್ತದೆ ಲಕ್ಷ್ಮೀ ಕಟಾಕ್ಷ

ಎಲ್ಲಾ ಗ್ರಹಗಳು ತಮ್ಮ ಚಲನೆ, ಸಂಚಾರದ ಮೂಲಕ ರಾಶಿಯನ್ನು ಬದಲಾಯಿಸುತ್ತಿರುತ್ತದೆ. ಇವುಗಳ ಪ್ರಭಾವವು ಎಲ್ಲಾ ರಾಶಿಯವರ ಜಾತಕದ ಮೇಲೆ ತೋರುತ್ತದೆ. ಕೆಲವು ರಾಶಿಗಳಿಗೆ ಶುಭ ಫಲಗಳನ್ನು ನೀಡಿದರೆ ಇನ್ನು ಕೆಲವು ರಾಶಿಯವರಿಗೆ ಇದು ಅಶುಭ ಫಲವನ್ನು ನೀಡುತ್ತದೆ. ಈ ಬದಲಾವಣೆಗಳ ಜೊತೆಗೆ ಶುಭ ಮತ್ತು ಅಶುಭ ಯೋಗಗಳೂ ಉಂಟಾಗುತ್ತವೆ. 

ಬೆಂಗಳೂರು : ಎಲ್ಲಾ ಗ್ರಹಗಳು ತಮ್ಮ ಚಲನೆ, ಸಂಚಾರದ ಮೂಲಕ ರಾಶಿಯನ್ನು ಬದಲಾಯಿಸುತ್ತಿರುತ್ತದೆ. ಇವುಗಳ ಪ್ರಭಾವವು ಎಲ್ಲಾ ರಾಶಿಯವರ ಜಾತಕದ ಮೇಲೆ ತೋರುತ್ತದೆ. ಕೆಲವು ರಾಶಿಗಳಿಗೆ ಶುಭ ಫಲಗಳನ್ನು ನೀಡಿದರೆ ಇನ್ನು ಕೆಲವು ರಾಶಿಯವರಿಗೆ ಇದು ಅಶುಭ ಫಲವನ್ನು ನೀಡುತ್ತದೆ. ಈ ಬದಲಾವಣೆಗಳ ಜೊತೆಗೆ ಶುಭ ಮತ್ತು ಅಶುಭ ಯೋಗಗಳೂ ಉಂಟಾಗುತ್ತವೆ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

 ಗಜಲಕ್ಷ್ಮಿ ಯೋಗ : ಗುರು ಗ್ರಹವು ಏಪ್ರಿಲ್ 22 ರಂದು ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ.  ಸದ್ಯ ಗುರು ಮೀನ ರಾಶಿಯಲ್ಲಿದ್ದು, ಏಪ್ರಿಲ್‌ನಲ್ಲಿ ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಆ ಸಮಯದಲ್ಲಿ ಚಂದ್ರ ಕೂಡಾ ಮೇಷ ರಾಶಿಯನ್ನು ಪ್ರವೇಶಿಸುವುದರಿಂದ ಗಜಲಕ್ಷ್ಮಿ ಯೋಗ ರೂಪುಗೊಳ್ಳುತ್ತದೆ. 

2 /5

 ಗಜಲಕ್ಷ್ಮಿ ಯೋಗ ಪರಿಣಾಮ  :  ಗಜಲಕ್ಷ್ಮಿ ಯೋಗವು ಶನಿಯ ಸಾಡೇ ಸಾತಿಯ ಪ್ರಭಾವವನ್ನು ಕೂಡಾ ಕಡಿಮೆ ಮಾಡುತ್ತದೆ. ಈ ಯೋಗದ ಪ್ರಯೋಜನವು ಎಲ್ಲಾ ರಾಶಿಯವರ ಜೀವನದ ಮೇಲೆ ಕಂಡು ಬರುತ್ತದೆ. ಅದರಲ್ಲೂ ಗಜಲಕ್ಷ್ಮಿ ಯೋಗದ ರಚನೆಯು 3 ರಾಶಿಯವರಿಗೆ ಅಪಾರ ಪ್ರಮಾಣದ ಲಾಭವನ್ನು ನೀಡಲಿದೆ.    

3 /5

ಮೇಷ ರಾಶಿ : ಈ ರಾಶಿಯ ಉದ್ಯೋಗಾಕಾಂಕ್ಷಿಗಳು ಈ ಬಾರಿ ತಮ್ಮ ಮನಸ್ಸಿಗೆ ಬೇಕಾದ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ನೀವು ಯಾವ ಕೆಲಸವನ್ನು ಮಾಡಬೇಕು ಎಂದು ಅಂದುಕೊಳ್ಳುತ್ತಿರೋ ಆ ಕೆಲಸವನ್ನು ಈ ಸಮಯದಲ್ಲಿ ಮಾಡಿ ಮುಗಿಸಬಹುದು. ಆದಾಯ ಹೆಚ್ಚಲಿದೆ. ಅದೃಷ್ಟದ ಸಹಾಯದಿಂದ, ನೀವು ಮಾಡುವ ಎಲ್ಲಾ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ಪ್ರೇಮ ಜೀವನ ಚೆನ್ನಾಗಿರುತ್ತದೆ. ದಾಂಪತ್ಯ ಜೀವನದಲ್ಲೂ ಸಂತೋಷ ಇರುತ್ತದೆ.  

4 /5

ಮಿಥುನ ರಾಶಿ : ಈ ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗವು ಅನೇಕ ಲಾಭಗಳನ್ನು ತರುತ್ತದೆ. ಆದಾಯದಲ್ಲಿ ಹೆಚ್ಚಳವಾಗಲಿದೆ. ವ್ಯಾಪಾರಿಗಳಿಗೆ ಭಾರೀ ಲಾಭವಾಗಲಿದೆ. ಬಡ್ತಿ ಪಡೆದು ವೇತನ ಹೆಚ್ಚಳವಾಗುವ ಅವಕಾಶ ಇರಲಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. 

5 /5

ಧನು ರಾಶಿ: ಈ ರಾಶಿಯವರಿಗೆ ಕೂಡಾ ಗಜಲಕ್ಷ್ಮಿ ಯೋಗವು ಹಠಾತ್ ಆರ್ಥಿಕ ಲಾಭವನ್ನು ತರುತ್ತದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ.  ಹೂಡಿಕೆಯಿಂದ ಲಾಭವಾಗಲಿದೆ. ವ್ಯಾಪಾರ ವ್ಯವಹಾರ ಕೈ ಹಿಡಿಯಲಿದೆ.  ಯಾವುದೇ ಹೊಸ ಕೆಲಸ ಆರಂಭಿಸುವುದಾದರೂ ಇದು ಉತ್ತಮ ಸಮಯವಾಗಿರುತ್ತದೆ.     ( ಸೂಚನೆ :  ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)