ಎಳ್ಳು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಎಳ್ಳಿನಿಂದ ಸಿಹಿಯನ್ನು ಮಾಡಿ ತಿನ್ನಬಹುದು. ಇನ್ನೊಂದೆಡೆ ಹಾಲುಣಿಸುವ ತಾಯಂದಿರಿಗೆ ಹಾಲು ಹೆಚ್ಚಾಗಲು ಸಹಾಯ ಮಾಡುತ್ತದೆ.
ಎಳ್ಳು ಎಂದರೆ ಅನೇಕರಿಗೆ ಇಷ್ಟ, ಆದರೆ ಬಳಕೆ ಮಾಡೋದು ಮಾತ್ರ ಕಡಿಮೆ. ಸಂಕ್ರಾಂತಿ ಸಮಯದಲ್ಲಿ ಎಳ್ಳು ಬೇಕೇ ಬೇಕು. ಇನ್ನು ಈ ಎಳ್ಳಿನಿಂದ ಅನೇಕ ಲಾಭವಿದೆ ಎಂದರೆ ನೀವು ನಂಬಲೇ ಬೇಕು. ಪ್ರತೀ ದಿನ ಎಳ್ಳು ತಿನ್ನೋದ್ರಿಂದ ಆರೋಗ್ಯ ವೃದ್ಧಿಯಾಗುತ್ತೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದ್ರೆ ಎಳ್ಳು ತಿಂದರೆ ಆಗುವ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.
ಎಳ್ಳು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಎಳ್ಳಿನಿಂದ ಸಿಹಿಯನ್ನು ಮಾಡಿ ತಿನ್ನಬಹುದು. ಇನ್ನೊಂದೆಡೆ ಹಾಲುಣಿಸುವ ತಾಯಂದಿರಿಗೆ ಹಾಲು ಹೆಚ್ಚಾಗಲು ಸಹಾಯ ಮಾಡುತ್ತದೆ.
ಎಳ್ಳು ನೋಡಲು ಪುಟ್ಟದಾಗಿರಬಹುದು. ಅದರಲ್ಲಿ ಅಡಗಿರುವ ಅಂಶ ಮಾತ್ರ ಅದ್ಭುತವಾಗಿರುತ್ತದೆ. ಇದರಲ್ಲಿ ಹೆಚ್ಚು ಆ್ಯಂಟಿ ಆಕ್ಸಿಡೆಂಟ್‌ಗಳಿದ್ದು, ಜೀವಕೋಶದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಎಳ್ಳುವಿನಲ್ಲಿ ಎರಡು ವಿಧವಿದೆ. ಕಪ್ಪು ಮತ್ತು ಬಿಳಿ ಎಳ್ಳು ಎಂಬುದು. ಇನ್ನು ಇದರಲ್ಲಿ ಪ್ರೋಟೀನ್, ಜಿಂಕ್ ಮತ್ತು ಐರನ್ ಅಂಶ ಹೆಚ್ಚಾಗಿದ್ದು, ದೇಹಕ್ಕೆ ಮಾತ್ರವಲ್ಲ ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಎಳ್ಳನ್ನು ಸೇವನೆ ಮಾಡುವುದರಿಂದ ಕೂದಲು ದಪ್ಪವಾಗಿ ಬೆಳೆಯುತ್ತದೆ. ಜೊತೆಗ ತಲೆಹೊಟ್ಟು, ಕೂದಲು ಉದುರುವ ಸಮಸ್ಯೆಯೂ ಕಡಿಮೆಯಾಗುತ್ತದೆ.
ಎಳ್ಳು ತಿಂದರೆ ಚರ್ಮದ ಸಮಸ್ಯೆಗಳು ಬೇಗ ಗುಣಮುಖವಾಗುತ್ತದೆ. ಅಷ್ಟೇ ಅಲ್ಲದೆ ಮುಖದ ಸೌಂದರ್ಯ ವೃದ್ಧಿಗೂ ಎಳ್ಳು ಪ್ರಮುಖ ಆಹಾರ. ಎಳ್ಳು ಪುಡಿಯನ್ನು ಮುಖಕ್ಕೆ ಹಚ್ಚಿಕೊಂಡರೆ ಕಲೆಗಳು ಮಾಯವಾಗುತ್ತವೆಯಂತೆ.