ನಿಖರ ಬೆಲೆ :

  • Sep 18, 2024, 09:41 AM IST
1 /7

ಜುಲೈ 23 ರಂದು ಮಂಡಿಸಿದ ಸಾಮಾನ್ಯ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಚಿನ್ನದ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದರು.ಇದರ   ಪರಿಣಾಮ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ದಾಖಲಾಯಿತು.   

2 /7

ಇದಾದ ಒಂದರಿಂದ ಎರಡು ದಿನಗಳಲ್ಲಿ 10 ಗ್ರಾಂ ಚಿನ್ನದ ಬೆಲೆ 4,000 ರೂ.ಯಷ್ಟು ಇಳಿಕೆ ಕಂಡಿತು. ಆದರೆ ಈ ಬೆಲೆ ಕುಸಿತವು ಚಿನ್ನದ ಬೇಡಿಕೆಯನ್ನು ದಾಖಲೆ ಮಟ್ಟಕ್ಕೆ ಕೊಂಡೊಯ್ದಿದೆ.ಬೇಡಿಕೆ ಹೆಚ್ಗುತ್ತಿದ್ದ ಹಾಗೆಯೇ ಆಮದು ಸುಂಕ ಕಡಿತದ ಹೊರತಾಗಿಯೂ  ಮಾರುಕಟ್ಟೆ ದರವು ಹಳೆಯ ಮಟ್ಟವನ್ನು ತಲುಪಿದೆ.  

3 /7

ಆಮದು ಸುಂಕ ಇಳಿಕೆಯಲ್ಲದೆ, ಹಬ್ಬದ ಬೇಡಿಕೆಯೂ ಚಿನ್ನದ ಬೇಡಿಕೆ ಹೆಚ್ಚಳಕ್ಕೆ ಕಾರಣ ಎಂದು ಪರಿಗಣಿಸಲಾಗಿದೆ.ಆಮದು ಸುಂಕದಲ್ಲಿ ಭಾರೀ ಕಡಿತ ಮತ್ತು ಹಬ್ಬದ ಬೇಡಿಕೆಯ ಹೆಚ್ಚಳದಿಂದಾಗಿ, ಆಗಸ್ಟ್‌ನಲ್ಲಿ ಚಿನ್ನದ ಆಮದು ದ್ವಿಗುಣಗೊಂಡು ದಾಖಲೆಯ ಮಟ್ಟ  ತಲುಪಿದೆ.   

4 /7

2024-25ರ ಹಣಕಾಸು ವರ್ಷದ ಬಜೆಟ್‌ನಲ್ಲಿ ಸರ್ಕಾರವು ಆಮದು ಸುಂಕವನ್ನು 15 ಪ್ರತಿಶತದಿಂದ 6 ಪ್ರತಿಶತಕ್ಕೆ ಇಳಿಸುವುದಾಗಿ ಘೋಷಿಸಿತ್ತು. ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳಲ್ಲಿ (ಏಪ್ರಿಲ್-ಜುಲೈ) ದೇಶದ ಚಿನ್ನದ ಆಮದು 12.64 ಶತಕೋಟಿ ಡಾಲರ್‌ ತಲುಪಿದೆ.  

5 /7

ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನಿಂದ 16 ಪ್ರತಿಶತಕ್ಕಿಂತ ಹೆಚ್ಚುಚಿನ್ನವನ್ನು ಆಮದು ಮಾಡಿಕೊಳ್ಳಲಾಗಿದೆ. ಚೀನಾದ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕವಾಗಿದೆ.ಈ ಆಮದು ಮುಖ್ಯವಾಗಿ ಆಭರಣ ಉದ್ಯಮದ ಬೇಡಿಕೆಯನ್ನು ಪೂರೈಸುತ್ತದೆ.

6 /7

ಗುಡ್ ರಿಟರ್ನ್ಸ್ ಪ್ರಕಾರ  ಈ ಸುದ್ದಿ ಬರೆಯುವ ಹೊತ್ತಿಗೆ ನಿನ್ನೆ ಮತ್ತು ಇಂದಿನ ಚಿನ್ನದ ಬೆಲೆಯನ್ನು ಹೋಲಿಕೆ ಮಾಡಿ ನೋಡುವುದಾದರೆ ಅಂಥಹ ವ್ಯತ್ಯಾಸವೇನು ಕಂಡು ಬಂದಿಲ್ಲ. 24  ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 7,488 ರೂಪಾಯಿ ಇದೆ. 

7 /7

ಇನ್ನು https://ibjarates.com/ ನಿತ್ಯದ ಬೆಲೆಯನ್ನು ಬಿಡುಗಡೆ ಮಾಡುತ್ತದೆ. ಇಲ್ಲಿ ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟಿದೆ ಎನ್ನುವುದನ್ನು ಕಂಡು ಕೊಳ್ಳಬಹುದು.