Shikhar Dhawan Love Story: ಟೀಂ ಇಂಡಿಯಾದ ಗಬ್ಬರ್ ಎಂದೇ ಖ್ಯಾತಿ ಪಡೆದ ಕ್ರಿಕೆಟರ್ ಶಿಖರ್ ಧವನ್ ಲವ್ ಸ್ಟೋರಿ ಮತ್ತು ವಿಚ್ಛೇದನದ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ,
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಟೀಂ ಇಂಡಿಯಾದ ಗಬ್ಬರ್ ಎಂದೇ ಖ್ಯಾತಿ ಪಡೆದ ಕ್ರಿಕೆಟರ್ ಶಿಖರ್ ಧವನ್ ಲವ್ ಸ್ಟೋರಿ ಮತ್ತು ವಿಚ್ಛೇದನದ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ,
ಶಿಖರ್ ಧವನ್, ಆಯೇಷಾ ಮುಖರ್ಜಿ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದರು. ಆದರೆ 10 ವರ್ಷಗಳ ಸಂಸಾರ ಡಿವೋರ್ಸ್ ಮೂಲಕ ಬೇರ್ಪಟ್ಟಿತ್ತು. ಕಾನೂನುಬದ್ಧವಾಗಿ ದೂರವಾದ ಇವರು, ಇದೀಗ ಬೇರೆ ಬೇರೆ ವಾಸಿಸುತ್ತಿದ್ದಾರೆ.
ಆಯೇಷಾ ಮುಖರ್ಜಿ ಮತ್ತು ಶಿಖರ್ ಧವನ್ ನಡುವಿನ ಸ್ನೇಹ ಶುರುವಾಗಿದ್ದು ಫೇಸ್ ಬುಕ್ ಮೂಲಕ. ಆಯೇಷಾ ಶಿಖರ್’ಗಿಂತ 10 ವರ್ಷ ದೊಡ್ಡವಳು. ಶಿಖರ್ ಜೊತೆಗಿನ ಮದುವೆಗೂ ಮುನ್ನ ಆಕೆಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಮೊದಲ ಪತಿಯಿಂದ ಆಯೇಷಾ ವಿಚ್ಛೇದನ ಪಡೆದಿದ್ದರು.
ಫೇಸ್‌ಬುಕ್’ನಲ್ಲಿ ಆಯೇಷಾಳನ್ನು ನೋಡಿದ ಶಿಖರ್ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಇದರ ನಂತರ ಮಾತುಕತೆ ಪ್ರಾರಂಭವಾಯಿತು. ನಂತರ ಸ್ನೇಹ ಬೆಳೆಯಿತು ಮತ್ತು ಈ ಸ್ನೇಹವು ಸಂಪೂರ್ಣವಾಗಿ ಪ್ರೀತಿಗೆ ತಿರುಗಿತ್ತು/
ಅಂತಿಮವಾಗಿ, ಇಬ್ಬರೂ 2012 ರಲ್ಲಿ ವಿವಾಹವಾದರು. ಇದಾದ ನಂತರ ಟೀಮ್ ಇಂಡಿಯಾದಲ್ಲಿ ಶಿಖರ್ ಧವನ್ ಅವರ ಅತ್ಯುತ್ತಮ ಸಮಯವೂ ಪ್ರಾರಂಭವಾಯಿತು. ಇಬ್ಬರು ಗಂಡು ಮಗುವಿಗೆ ಪೋಷಕರಾದರು. ತನ್ನ ಮಕ್ಕಳ ಶಿಕ್ಷಣದ ಕಾರಣದಿಂದ ಆಸ್ಟ್ರೇಲಿಯಾದಲ್ಲಿ ಆಯೇಷಾ ಮುಖರ್ಜಿ ಉಳಿದಿದ್ದರು.
ಎಲ್ಲವೂ ಸರಿಯಾಗಿ ನಡೆಯುತ್ತಿತ್ತು. ಆದರೆ ಕೊರೊನಾ ನಂತರ ವಿಷಯಗಳು ಬದಲಾಗಲಾರಂಭಿಸಿದವು. ಒಂದು ದಿನ ಶಿಖರ್ ಧವನ್ ಮತ್ತು ಆಯೇಶಾ ಮುಖರ್ಜಿ ಬೇರ್ಪಟ್ಟ ಸುದ್ದಿ ಹೊರಬಂತು. ಪ್ರತ್ಯೇಕತೆಯ ಮಾತುಕತೆಯ ಕೆಲವು ದಿನಗಳ ನಂತರ, ಇಬ್ಬರೂ ಅಧಿಕೃತವಾಗಿ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಮನವಿ ಮಾಡಿದರು. ಇದಾದ ನಂತರ ಮಗುವಿನ ಪಾಲನೆಗಾಗಿ ಬೇಡಿಕೆಯೂ ಬಂದಿತ್ತು.
ವಿಷಯ ನ್ಯಾಯಾಲಯದ ಮೆಟ್ಟಿಲೇರಿದಾಗಲೇ ಶಿಖರ್ ಧವನ್ ತಮ್ಮ ಪತ್ನಿ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿರುವುದು ಬೆಳಕಿಗೆ ಬಂದಿದೆ. ಶಿಖರ್ ಧವನ್ ತನ್ನ ಪತ್ನಿಯ ಕಾರಣದಿಂದ ಮಾನಸಿಕ ಹಿಂಸೆಯನ್ನು ಎದುರಿಸಬೇಕಾಯಿತು ಎಂಬುದು ನ್ಯಾಯಾಲಯದ ತೀರ್ಪಿನಿಂದ ಸ್ಪಷ್ಟವಾಯಿತು.
ಶಿಖರ್ ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ಪ್ರಕರಣವನ್ನು ದಾಖಲಿಸಿದ್ದಾರೆ. ಎರಡೂ ಕಡೆಯವರ ವಾದವನ್ನು ಆಲಿಸಿದ ಬಳಿಕ ದೆಹಲಿ ಹೈಕೋರ್ಟ್ ವಿಚ್ಛೇದನಕ್ಕೆ ಒಪ್ಪಿಗೆ ನೀಡಿತ್ತು.