ಪಾಕಿಸ್ತಾನಿ ಸಿನಿಮಾಗಳಲ್ಲಿ ನಟಿಸಿದ ಭಾರತದ ಖ್ಯಾತ ತಾರೆಯರು ಇವರು

Pakistani movies : ಅನೇಕ ಪಾಕಿಸ್ತಾನಿ ನಟರು ಬಾಲಿವುಡ್‌ನಲ್ಲಿ ತಮ್ಮ ನಟನಾ ಕೌಶಲ್ಯವನ್ನು ತೋರಿಸಿದ್ದಾರೆ. ಅಂತೆಯೇ ಭಾರತೀಯ ನಟರು ಸಹ ಪಾಕಿಸ್ತಾನಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇಂದು ನಾವು ಪಾಕಿಸ್ತಾನಿ ಚಿತ್ರಗಳಲ್ಲಿ ತಮ್ಮ ಪ್ರತಿಭೆ ತೋರಿಸಿದ ಭಾರತೀಯ ಸಿನಿ ತಾರೆಯರ ಬಗ್ಗೆ ಹೇಳಲಿದ್ದೇವೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಶ್ವೇತಾ ತಿವಾರಿ: ಭಾರತೀಯ ಟೆಲಿವಿಷನ್ ಉದ್ಯಮದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ನಟಿ ಶ್ವೇತಾ ತಿವಾರಿ ಅವರು ಪಾಕಿಸ್ತಾನಿ ಚಲನಚಿತ್ರಗಳಲ್ಲಿಯೂ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ನಟಿ 2014 ರ ಸುಲ್ತಾನತ್ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವು ಪಾಕಿಸ್ತಾನಿ ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್ ಆಗಿತ್ತು.

2 /5

ನೇಹಾ ಧೂಪಿಯಾ: ತನ್ನ ಸಖತ್ ನಟನೆಗೆ ಹೆಸರುವಾಸಿಯಾಗಿರುವ ನೇಹಾ ಧೂಪಿಯಾ ಪಾಕಿಸ್ತಾನಿ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ವರದಿಗಳ ಪ್ರಕಾರ, ನೇಹಾ ಧೂಪಿಯಾ ಪಾಕಿಸ್ತಾನಿ ಚಿತ್ರ 'ಪ್ಯಾರ್ ನಾ ಕರ್ನಾ'ದಲ್ಲಿ ಐಟಂ ನಂಬರ್ ಮಾಡಿದ್ದಾರೆ.

3 /5

ಕಿರಣ್ ಖೇರ್: ಹಲವು ಚಿತ್ರಗಳು ಮತ್ತು ರಿಯಾಲಿಟಿ ಶೋಗಳಲ್ಲಿ ತಮ್ಮ ಕೈಚಳಕವನ್ನು ತೋರಿಸಿರುವ ಕಿರಣ್ ಖೇರ್, ಪಾಕಿಸ್ತಾನಿ ಚಿತ್ರದಲ್ಲೂ ಕೆಲಸ ಮಾಡಿದ್ದಾರೆ. 2003 ರಲ್ಲಿ ಬಿಡುಗಡೆಯಾದ ಪಾಕಿಸ್ತಾನಿ ಚಲನಚಿತ್ರ ಖಾಮೋಶ್ ಪಾನಿಯಲ್ಲಿ ನಟಿ ಕಾಣಿಸಿಕೊಂಡರು.

4 /5

ಜಾನಿ ಲಿವರ್: ಈ ಪಟ್ಟಿಯಲ್ಲಿ ಅತ್ಯಂತ ಆಶ್ಚರ್ಯಕರ ಹೆಸರು ಜಾನಿ ಲಿವರ್. ಖ್ಯಾತ ಹಾಸ್ಯನಟ ಜಾನಿ ಲಿವರ್ ಅವರು ಪಾಕಿಸ್ತಾನಿ ಚಲನಚಿತ್ರ 'ಲವ್ ಮೇ ಗಮ್' ನಲ್ಲಿ ಕೆಲಸ ಮಾಡಿದ್ದಾರೆ.  

5 /5

ಅರ್ಬಾಜ್ ಖಾನ್: ನಟ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ಅವರು ಪಾಕಿಸ್ತಾನಿ ಚಲನಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ‘ಗಾಡ್ ಫಾದರ್’ ಚಿತ್ರದಲ್ಲಿ ಶಾಕಿರ್ ಖಾನ್ ಪಾತ್ರದಲ್ಲಿ ಅರ್ಬಾಜ್ ಖಾನ್ ನಟಿಸಿದ್ದರು.