IPL 2023 Mini Auction 2023: ಕಳೆದ ಋತುವಿನಲ್ಲಿ ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದ ಹಲವು ಸ್ಟಾರ್ ಆಟಗಾರರು 2023ನೇ ಸಾಲಿನ ಐಪಿಲ್ ಹರಾಜಿನಲ್ಲಿ ಕಡಿಮೆ ಮೊತ್ತಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.
IPL 2023 Mini Auction 2023: ಐಪಿಎಲ್ ಮುಂದಿನ ಸೀಸನ್‌ಗಾಗಿ ಆಟಗಾರರ ಹರಾಜು ಡಿ.23ರಂದು ಕೊಚ್ಚಿಯಲ್ಲಿ ನಡೆಯಿತು. ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಹಲವು ಅನುಭವಿ ಆಟಗಾರರು ಭಾರೀ ನಷ್ಟವನ್ನು ಎದುರಿಸಬೇಕಾಯಿತು. ಕಳೆದ ಸೀಸನ್‌ನಲ್ಲಿ ಭರ್ಜರಿ ಮೊತ್ತಕ್ಕೆ ಸೇಲ್ ಆಗಿದ್ದ ಐವರು ಸ್ಟಾರ್ ಆಟಗಾರರು ಈ ಬಾರಿ ಕಡಿಮೆ ಮೊತ್ತಕ್ಕೆ ತೃಪ್ತಿಪಡಬೇಕಾಗಿದೆ. ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಗುಜರಾತ್ ಟೈಟಾನ್ಸ್ 2023ನೇ ಸಾಲಿನ ಐಪಿಎಲ್ ಟೂರ್ನಿಗೆ ತಮ್ಮ ತಂಡದಲ್ಲಿ ಕೇನ್ ವಿಲಿಯಮ್ಸನ್ ಅವರನ್ನು ಕೇವಲ 2 ಕೋಟಿ ರೂ. ಮೂಲ ಬೆಲೆಗೆ ಸೇರಿಸಿಕೊಂಡಿದೆ. ಕಳೆದ ಋತುವಿನಲ್ಲಿ ಹೈದರಾಬಾದ್ 16 ಕೋಟಿ ರೂ. ನೀಡಿ ಕೇನ್ ವಿಲಿಯಮ್ಸನ್ ಅವರನ್ನು ಉಳಿಸಿಕೊಂಡಿತ್ತು. ಹೀಗಿರುವಾಗ ಈ ಬಾರಿ ಕಿವೀಸ್ ಆಟಗಾರ ಒಟ್ಟು 14 ಕೋಟಿ ರೂ. ನಷ್ಟ ಅನುಭವಿಸಿದ್ದಾರೆ.
ಕೈಲ್ ಜೇಮಿಸನ್ ಮೂಲ ಬೆಲೆ 1 ಕೋಟಿ ರೂ. ಆಗಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು ಮೂಲ ಬೆಲೆಗೆ ಮಾತ್ರ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಈ ಹಿಂದೆ ಕೈಲ್ ಜೇಮಿಸನ್ 2021ರಲ್ಲಿ 15 ಕೋಟಿ ರೂ.ಗಳೊಂದಿಗೆ RCBಯ ಭಾಗವಾಗಿದ್ದರು. ಈ ಮೂಲಕ ಅವರು 14 ಕೋಟಿ ರೂ. ನಷ್ಟ ಅನುಭವಿಸಿದ್ದಾರೆ.
ಮಯಾಂಕ್ ಅಗರ್ವಾಲ್ ಈ ಬಾರಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡಲಿದ್ದಾರೆ. 8.25 ಕೋಟಿ ರೂ.ಗೆ ಅವರನ್ನು ಖರೀದಿಸಲಾಗಿದೆ. ಕಳೆದ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ಅವರನ್ನು 14 ಕೋಟಿ ರೂ.ಗೆ ಉಳಿಸಿಕೊಂಡಿತ್ತು.
ಗುಜರಾತ್ ಟೈಟಾನ್ಸ್ ಕೂಡ ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಓಡಿಯನ್ ಸ್ಮಿತ್ ಅವರನ್ನು ಕೇವಲ 50 ಲಕ್ಷ ರೂ.ಗೆ ತಮ್ಮ ತಂಡದ ಭಾಗವನ್ನಾಗಿ ಮಾಡಿಕೊಂಡಿದೆ. ಇದು ಅವರ ಮೂಲ ಬೆಲೆಯಾಗಿತ್ತು. ಕಳೆದ ಋತುವಿನಲ್ಲಿ ಓಡಿಯನ್ ಸ್ಮಿತ್ ಅವರನ್ನು ಪಂಜಾಬ್ ಕಿಂಗ್ಸ್ 6 ಕೋಟಿ ರೂ.ಗೆ ಖರೀದಿಸಿತ್ತು.
ವೆಸ್ಟ್ ಇಂಡೀಸ್‌ನ ರೊಮಾರಿಯೊ ಶೆಫರ್ಡ್‌ನ ಮೇಲೆ ಲಕ್ನೋ ಸೂಪರ್ ಜೈಂಟ್ಸ್ ಅವರನ್ನು 50 ಲಕ್ಷ ರೂ.ಗೆ ಬಿಡ್ ಮಾಡುವ ಮೂಲಕ ತಮ್ಮ ತಂಡಕ್ಕೆ ಸೇರಿಸಿಕೊಂಡರು. ರೊಮಾರಿಯೊ ಶೆಫರ್ಡ್ ಕಳೆದ ವರ್ಷ 7.5 ಕೋಟಿ ರೂ.ಗೆ ಸನ್‌ರೈಸರ್ಸ್ ಹೈದರಾಬಾದ್‌ನ ಭಾಗವಾಗಿದ್ದರು.