ಇಲ್ಲಿ ಮೃತ ವ್ಯಕ್ತಿಗಳೊಂದಿಗೆ ಶಾಸ್ತ್ರ ಬದ್ಧವಾಗಿ ನೆರವೇರುತ್ತದೆ ಮದುವೆ..!

ಮೃತ ವ್ಯಕ್ತಿಗಳೊಂದಿಗಿನ ಮದುವೆಗೆ ಇಲ್ಲಿ ಯಾವ ಅಡೆ ತಡೆಯೂ ಇಲ್ಲ. ಮೃತ ವ್ಯಕ್ತಿಗಳೊಂದಿಗೆ ಕಾನೂನುಬದ್ಧವಾಗಿಯೇ ನೆರವೇರುತ್ತದೆ ವಿವಾಹ...

ಫ್ರಾನ್ಸ್ : ಮದುವೆ ಅನ್ನುವುದು ಜನುಮ ಜನುಮದ ಅನುಬಂಧ. ಮದುವೆ ಅನ್ನೋದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತುಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಒಮ್ಮೊಮ್ಮೆ ಈ ಮಾತುಗಳು ಹೌದೇನೋ ಅನ್ನಿಸಿಯೂ ಇರಬಹುದು. ಆದರೆ ಫ್ರಾನ್ಸಿನಲ್ಲಿ , ಸತ್ತ ವ್ಯಕ್ತಿಗಳೊಂದಿಗೆ ಜೀವಂತವಾಘಿರುವವ ಮದುವೆ ನೆರವೇರುತ್ತದೆ. ಅದು ಕೂಡಾ ಶಾಸ್ತ್ರಬದ್ಧವಾಗಿ. ಇಂಥಹ ಮದುವೆಗೆ ಇಲ್ಲಿಯ ಕಾನೂನಿನಲ್ಲಿಯೂ ಅವಕಾಶವಿದೆ. ವಿಚಿತ್ರ ಎನಿಸಿದರೂ ಇದು ಸತ್ಯ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಹೌದು, ಫ್ರಾನ್ಸ್‌ನಲ್ಲಿ ಇಂತಹ ವಿವಾಹಗಳಿಗೆ ಯಾವುದೇ ನಿರ್ಬಂಧವಿಲ್ಲ . ಇಲ್ಲಿ ಮೃತ ವ್ಯಕ್ತಿಗಳನ್ನು ಮದುವೆಯಾಗಲು ಕಾನೂನಿನಲ್ಲೂ ಅವಕಾಶವಿದೆ. ಆದರೆ ಮೃತ ವ್ಯಕ್ತಿಯನ್ನು ಮದುವೆಯಾಗುವ ಉದ್ದೇಶದ ಹಿಂದೆ ಪ್ರಬಲವಾದ ಕಾರಣವಿರಬೇಕು. ಹಾಗಿದ್ದಲ್ಲಿ ಮಾತ್ರ ರಾಷ್ಟ್ರಪತಿಗಳು ಈ ಮದುವೆಗೆ ಅನುಮತಿ ನೀಡುತ್ತಾರೆ.  

2 /5

ಫ್ರೆಂಚ್ ಕಾನೂನಿನ ಪ್ರಕಾರ, 1950 ರ ದಶಕದಲ್ಲಿ ಜಾರಿಗೆ ಬಂದ ಕಾನೂನಿನ ಪ್ರಕಾರ, ತಮ್ಮ ಪ್ರೇಯಸಿ ಅಥವಾ ಪ್ರಿಯಕರ ಮೃತಪಟ್ಟರೆ, ಅವರ ಸಾವಿನ ನಂತರ ಅವರನ್ನು ಮದುವೆಯಾಗಲು ಫ್ರಾನ್ಸ್ ನಲ್ಲಿ ಅವಕಾಶವಿದೆ.  ಮೃತ ಪ್ರೇಯಸಿ ಅಥವಾ ಪ್ರಿಯಕರನನ್ನು ಕಾನೂನುಬದ್ಧವಾಗಿ ಮದುವೆಯಾಗಬಹುದು. ಆದರೆ ಮದುವೆಗೂ ಮುನ್ನ ರಾಷ್ಟ್ರಪತಿಗಳ ಅನುಮತಿ ಪಡೆಯುವುದು ಅನಿವಾರ್ಯ. 

3 /5

ಮದುವೆ ಸಮಾರಂಭದ ವೇಳೆ, ಮೃತ ವ್ಯಕ್ತಿಯ ಫೋಟೋವನ್ನು ಜೊತೆಯಲ್ಲಿ ಇರಿಸಲಾಗುತ್ತದೆ. ಫೋಟೋವನ್ನು ಜೊತೆಯಲ್ಲಿರಿಸಿಕೊಂಡೇ ಎಲ್ಲಾ ವಿಧಿವಿಧಾನಗಳನ್ನು ನೆರವೆರಿಸಲಾಗುತ್ತದೆ. 

4 /5

ಮೃತ ವ್ಯಕ್ತಿಯೊಂದಿಗೆ ವಿವಾಹವಾಗಲು ಇಚ್ಛಿಸುವ ವ್ಯಕ್ತಿ ಅನೇಕ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮೃತ ವ್ಯಕ್ತಿಯನ್ನು ಮದುವೆಯಾದ ಬಳಿಕ ಮೃತ ವ್ಯಕ್ತಿಯ ಆಸ್ತಿಯ ಮೇಲೆ ಯಾವುದೇ ಅಧಿಕಾರ ಇರುವುದಿಲ್ಲ.

5 /5

ಮೃತ ವ್ಯಕ್ತಿಯನ್ನು ಮದುವೆಯಾಗಲು ಅನುಮತಿ ಕೋರಿ ಪ್ರತಿ ವರ್ಷ ಸರ್ಕಾರದ ಮುಂದೆ ಸಾವಿರಾರು ಅರ್ಜಿಗಳು ಬರುತ್ತವೆ. ಬಂದಿರುವ ಎಲ್ಲಾ ಅರ್ಜಿಗಳಿಗೂ ಸರ್ಕಾರ ಅನುಮತಿ ನೀಡುವುದಿಲ್ಲ. ಮೊದಲೇ ಹೇಳಿದಂತೆ ಪ್ರಬಲವಾದ ಕಾರಣವಿದ್ದರೆ ಮಾತ್ರ ಈ ಮದುವೆಗೆ ಅವಕಾಶ ನೀಡಲಾಗುತ್ತದೆ