B-town Queens Fees : ಈ ಬಾಲಿವುಡ್ ಹಾಟ್ ಬೆಡಗಿಯರ ಸಂಭಾವನೆ ಎಷ್ಟು ಕೋಟಿ ಗೊತ್ತಾ?

ಫೈಲ್ ಫೋಟೋಗಳು)

'ಗಂಗೂಬಾಯಿ ಕಥಿವಾಡಿ' ಚಿತ್ರದಲ್ಲಿನ ಆಲಿಯಾ ಭಟ್‌ನಿಂದ ಹಿಡಿದು 'ಮಣಿಕರ್ಣಿಕಾ'ದ ಕಂಗನಾ ರಣಾವತ್‌ವರೆಗೆ, ಬಾಲಿವುಡ್‌ನ ಪ್ರಮುಖ ನಟಿಯರು ತಮ್ಮದೇ ಆದ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ನೀಡಿದ್ದಾರೆ. ಹೀಗಾಗಿ ಅವರು ಬಾಲಿವುಡ್ ನಲ್ಲಿ ಅಪಾರ ಹಣ ಗಳಿಸಿದ್ದಾರೆ. ಇಂದು, ಇಂದು ನಾವು ಬಾಲಿವುಡ್ ನಲ್ಲಿ ಅತಿ ಹೆಚ್ಚು  ಸಂಭಾವನೆ ಪಡೆಯುತ್ತಿರುವ ನಟಿಯರ ಬಗ್ಗೆ ಮಾಹಿತಿ ಹೊತ್ತು ತಂದಿದ್ದೇವೆ.  ಇಲ್ಲಿ ನೀಡಲಾದ ಎಲ್ಲಾ ಅಂಕಿಅಂಶಗಳು BollywoodLife.com ನ ವರದಿಗಳನ್ನು ಆಧರಿಸಿವೆ. (ಎಲ್ಲಾ ಫೋಟೋ : ಫೈಲ್ ಫೋಟೋಗಳು)

 

1 /5

ಕತ್ರಿನಾ ಕೈಫ್ : ವರದಿಗಳ ಪ್ರಕಾರ, ಕತ್ರಿನಾ ಕೈಫ್ ಪ್ರತಿ ಚಿತ್ರಕ್ಕೆ ಸುಮಾರು 15-21 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ಕತ್ರಿನಾ ಕೊನೆಯದಾಗಿ 'ಸೂರ್ಯವಂಶಿ' ಕಾಪ್ ಡ್ರಾಮಾದಲ್ಲಿ ಅಕ್ಷಯ್ ಕುಮಾರ್ ಜೊತೆ ಕಾಣಿಸಿಕೊಂಡಿದ್ದಾರೆ ಮತ್ತು ಸಲ್ಮಾನ್ ಖಾನ್ ಬಹುನಿರೀಕ್ಷಿತ ಸಿನಿಮಾ 'ಟೈಗರ್ 3' ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಹಾರರ್-ಕಾಮಿಡಿ 'ಫೋನ್ ಬೂತ್' ಮತ್ತು ಮಿಸ್ಟರಿ ಥ್ರಿಲ್ಲರ್ 'ಮೆರ್ರಿ ಕ್ರಿಸ್‌ಮಸ್' ಅನ್ನು ಈ ವರ್ಷ ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ.

2 /5

ಕರೀನಾ ಕಪೂರ್ ಖಾನ್ : ಕರೀನಾ ಕಪೂರ್ ಖಾನ್ ಇತ್ತೀಚೆಗೆ ಇನ್ನೂ ಹೆಸರಿಸದ ಚೊಚ್ಚಲ OTT ನೆಟ್‌ಫ್ಲಿಕ್ಸ್ ಥ್ರಿಲ್ಲರ್‌ ಸಿರೀಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಗಸ್ಟ್ 11 ರಂದು ಬಿಡುಗಡೆಯಾಗಲಿರುವ ಅಮೀರ್ ಖಾನ್ ಜೊತೆ ನಟಿಸಿರುವ 'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ, ಕರೀನಾ ಪ್ರತಿ ಚಿತ್ರಕ್ಕೆ 20 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇದು, 2018 ರ ಎಲ್ಲಾ ತಾರೆಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿಯಾಗಿದ್ದಾರೆ.

3 /5

ಆಲಿಯಾ ಭಟ್ : ವರದಿಗಳ ಪ್ರಕಾರ, ಆಲಿಯಾ ಪ್ರತಿ ಚಿತ್ರಕ್ಕೆ 22 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಆಲಿಯಾ ಭಟ್ ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅಲಿಯಾ 2012 ರಲ್ಲಿ 'ಸ್ಟೂಡೆಂಟ್ ಆಫ್ ದಿ ಇಯರ್' ಸಿನಿಮಾ ಮೂಲಕ ಸಿನಿ ಲೋಕಕ್ಕೆ ಪಾದಾರ್ಪಣೆ ಮಾಡಿದ ಹತ್ತು ವರ್ಷಗಳಲ್ಲಿ ಈ ಹಂತವನ್ನು ತಲುಪಿದ್ದಾರೆ. ಈ ವರ್ಷ 'ಗಂಗೂಬಾಯಿ ಕಥಿಯಾವಾಡಿ' ಮೂಲಕ ಭರ್ಜರಿ ಸಡ್ಡು ಮಾಡಿದ್ದಾರೆ. ಆಲಿಯಾ ತನ್ನ ಮೊದಲ ಹಾಲಿವುಡ್ ಸಿನಿಮಾವಾದ ಗಾಲ್ ಗಡೋಟ್‌ 'ಹಾರ್ಟ್ ಆಫ್ ಸ್ಟೋನ್' ಎಂದು ಘೋಷಿಸಿದ್ದಾರೆ.

4 /5

ದೀಪಿಕಾ ಪಡುಕೋಣೆ : ದೀಪಿಕಾ ಪಡುಕೋಣೆ ಪ್ರತಿ ಚಿತ್ರಕ್ಕೆ 26 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇತ್ತೀಚಿನ ಕಾಂಪ್ಲಿಕೇಟೆಡ್ ಸಂಬಂಧದ ಸಿನಿಮಾವಾದ 'ಗೆಹ್ರಾಯನ್' ಅಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮದುವೆಗೆ ಮೊದಲು ಬಿಡುಗಡೆಯಾದ 2018 ರ ಹಿಟ್ ಸಿನಿಮಾ 'ಪದ್ಮಾವತ್' ಸಿನಿಮಾಗೆ, ರಣವೀರ್ ಸಿಂಗ್ ಗಿಂತ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಅವರು ಮುಂದಿನ ಆಕ್ಷನ್ ಸಿನಿಮಾ 'ಪಠಾಣ್' ನಲ್ಲಿ ಶಾರುಖ್ ಖಾನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.

5 /5

ಕಂಗನಾ ರನೌತ್ : ಪ್ರಸ್ತುತ ಹದಿಮೂರು ವಿವಾದಾತ್ಮಕ ಸೆಲೆಬ್ರಿಟಿಗಳೊಂದಿಗೆ ತನ್ನ ರಿಯಾಲಿಟಿ ಶೋ 'ಲಾಕ್ ಅಪ್' ಅನ್ನು ಹೋಸ್ಟ್ ಮಾಡುವಲ್ಲಿ ನಿರತರಾಗಿರುವ ಕಂಗನಾ ರನೌತ್, ಪ್ರತಿ ಚಿತ್ರಕ್ಕೆ 27 ಕೋಟಿ ರೂ. ಅವರು ಮುಂದಿನ ಆಕ್ಷನ್-ಎಂಟರ್ಟೈನರ್ 'ಧಕಡ್' ಮತ್ತು 'ತೇಜಸ್' ನಲ್ಲಿ ಭಾರತೀಯ ವಾಯುಪಡೆಯ ಪೈಲಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ, ಅವರು 'ರಂಗೂನ್' ನಲ್ಲಿ ಶಾಹಿದ್ ಕಪೂರ್ ಮತ್ತು ಸೈಫ್ ಅಲಿ ಖಾನ್‌ಗಿಂತ ದೊಡ್ಡ ಸಂಭಾವನೆಯನ್ನು ಪಡೆದರು.