Kamakshi Bhaskarla : ಸ್ಟಾರ್ ನಾಯಕಿಯಾಗಿ ಗುರುತಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ನಿರ್ದೇಶಕರು ನೀಡುವ ಪ್ರತಿಯೊಂದು ಪಾತ್ರಕ್ಕೂ ನ್ಯಾಯ ಒದಗಿಸಬೇಕು. ಅಲ್ಲದೆ ಗ್ಲಾಮರ್ ಪಾತ್ರಗಳಿಗಳನ್ನ ಮಾಡಲು ರೆಡಿಯಾಗಬೇಕು.. ಆಗಲೇ ಒಬ್ಬ ಸಂಪೂರ್ಣ ನಟಿಯಾಗಿ ಗುರುತಿಸಿಕೊಳ್ಳಲು ಸಾಧ್ಯ.. ಈ ಚೆಲುವೆಯೂ ಇದೇ ಹಾದಿಯಲ್ಲಿ ಬಂದು ಇಂದು ಸಿನಿರಂಗದಲ್ಲಿ ಶೈನ್ ಆಗುತ್ತಿದ್ದಾಳೆ..
ಇತ್ತೀಚಿನ ದಿನಗಳಲ್ಲಿ ಹೀರೋಯಿನ್ ಗಳು ಕೇವಲ ಗ್ಲಾಮರ್ ಪಾತ್ರಗಳನ್ನಷ್ಟೇ ಅಲ್ಲ, ಡಿ-ಗ್ಲಾಮರೈಸ್ಡ್ ಪಾತ್ರಗಳನ್ನೂ ಮಾಡಿ ಪ್ರೇಕ್ಷಕರಿಂದ ಸೈ ಎನಿಸಿಕೊಳ್ಳುತ್ತಿದ್ದಾರೆ.. ಸ್ಟಾರ್ ಹೀರೋಯಿನ್ ಗಳೆಂದು ಗುರುತಿಸಿಕೊಳ್ಳಬೇಕಾದರೆ.. ಎಲ್ಲ ಪಾತ್ರಗಳಿಗೂ ಸಿದ್ಧರಾಗಿರಬೇಕು.. ಈ ಸಾಲಿಗೆ ನಟಿ ಕಾಮಾಕ್ಷಿ ಭಾಸ್ಕರ್ಲಾ ಸೇರಿಕೊಳ್ಳುತ್ತಾರೆ..
ನಟಿ ಕಾಮಾಕ್ಷಿ ತಮ್ಮ ವೃತ್ತಿಜೀವನದಲ್ಲಿ ಹೆಚ್ಚಾಗಿ ಡಿ-ಗ್ಲಾಮರ್ ಪಾತ್ರಗಳನ್ನು ಮಾಡಿದ್ದಾರೆ. ಆ ಪಾತ್ರಗಳಿಗಾಗಿ ಅನೇಕ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ತೆರೆಯ ಮೇಲೆ ಡೈರೆಕ್ಟರ್ ನೀಡುವ ಎಲ್ಲಾ ಪಾತ್ರಗಳಿಗೂ ನ್ಯಾಯ ಒದಗಿಸುವ ಈ ಚೆಲುವೆ, ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾಳೆ.
ನಟಿ ಕಾಮಾಕ್ಷಿ ಚೀನಾದಲ್ಲಿ ವೈದ್ಯ ಪದವಿ ಪಡೆದ ನಂತರ ಅಪೋಲೋ ಆಸ್ಪತ್ರೆಯಲ್ಲಿ ಕೆಲಕಾಲ ವೈದ್ಯರಾಗಿ ಕೆಲಸ ಮಾಡಿದರು. ಅವರು 2018 ರಲ್ಲಿ ಮಿಸ್ ತೆಲಂಗಾಣ ಪ್ರಶಸ್ತಿಯನ್ನು ಗೆದ್ದರು. ಆ ನಂತರ ಆಕೆಗೆ ಸತತ ಸಿನಿಮಾ ಅವಕಾಶಗಳು ಬಂದವು.
‘ಪ್ರಿಯುರಾಲು’ ಚಿತ್ರದ ಮೂಲಕ ತೆಲುಗು ಸಿನಿರಂಗಕ್ಕೆ ಪರಿಚಯವಾದರು. 'ಮಾ ಉರಿ ಪೊಲಿಮೆರಾ', 'ಇಟ್ಲು ಮರೆಡುಮಿಲ್ಲಿ ಪ್ರಜಾನಿಕಂ', 'ವಿರೂಪಾಕ್ಷ', 'ಪೊಲಿಮೆರಾ 2' ಮತ್ತು 'ಓಂ ಭೀಮ್ ಬುಷ್' ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು.
ಮಾ ಉರಿ ಪೊಲಿಮೆರಾ ಮತ್ತು ಪೊಲಿಮೆರಾ 2 ಸಿನಿಮಾಗಳು ಈ ಸುಂದರಿಗೆ ಒಳ್ಳೆಯ ಹೆಸರು ತಂದುಕೊಟ್ಟವು. ಮತ್ತೊಂದೆಡೆ, 'ಝಾನ್ಸಿ', 'ಸೈತಾನ್' ಮತ್ತು 'ದೂತ' ನಂತಹ ವೆಬ್ ಸರಣಿಗಳಲ್ಲಿ ನಟಿಸಿ ಸಿನಿ ಪ್ರೇಕ್ಷಕರ ಮನಗೆದ್ದರು..
ನಟಿ ಕಾಮಾಕ್ಷಿ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಟ್ ಫೋಟೋಶೂಟ್ಗಳ ಮೂಲಕ ಹುಡುಗರನ್ನು ಮನ ಗೆಲ್ಲುವ ಕೆಲಸ ಮಾಡುತ್ತಿರುತ್ತಾರೆ.. ಇತ್ತೀಚಿಗೆ ನಟಿ ಹಂಚಿಕೊಂಡಿರುವ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿವೆ..