Sudeep acted Kannada Serial: ನಟ ಕಿಚ್ಚ ಸುದೀಪ್ ಇಂದು ವಿಶ್ವಾದ್ಯಂತ ಚಿರಪರಿಚಿತ ಹೆಸರು. ಭಾರತದ ಉತ್ತಮ ನಟರಲ್ಲಿ ಒಬ್ಬರಾಗಿರುವ ಸುದೀಪ್ ಅವರಿಗೆ ಅಭಿಮಾನಿಗಳು ಪ್ರೀತಿಯಿಂದ ಅಭಿನಯ ಚಕ್ರಚರ್ತಿ ಎಂಬ ಬಿರುದನ್ನು ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಟ ಸುದೀಪ್ ವೃತ್ತಿ ಜೀವನದ ಮಹತ್ವದ ದಿನ ಇಂದು. ಸುದೀಪ್ ಬಣ್ಣದ ಲೋಕಕ್ಕೆ ಬಂದು 28 ವರ್ಷಗಳು ಕಳೆದಿವೆ. ನಟನಾಗುವ ಹಂಬ ಹೊಂದಿದ್ದ ಸುದೀಪ್ ಆರಂಭದಲ್ಲಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದರು.
ಸುದೀಪ್ ಮೊದಲು ನಟಿಸಿದ್ದು ಕನ್ನಡದ ಧಾರಾವಾಹಿಯಲ್ಲಿ. ಸುಧಾಕರ್ ಭಂಡಾರಿ ನಿರ್ದೇಶನದ 'ಪ್ರೇಮದ ಕಾದಂಬರಿ' ಧಾರಾವಾಹಿಯಲ್ಲಿ ನಟಿಸಿದರು. ಅದಾದ ಬಳಿಕ ಬೆಳ್ಳಿತೆರೆಗೆ ಸುದೀಪ್ ಎಂಟ್ರಿಕೊಟ್ಟರು.
ಬ್ರಹ್ಮ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಚಿತ್ರ ರಿಲೀಸ್ ಆಗಲಿಲ್ಲ. ಆಮೇಲೆ ತಾಯವ್ವ, ಪ್ರತ್ಯರ್ಥ ಸಿನಿಮಾ ಮೂಲಕ ಸುದೀಪ್ ಬೆಳ್ಳಿತೆರೆ ಮೇಲೆ ಕಂಡರು. ಅವಕಾಶಗಳಿಗಾಗಿ ಕಾಯುತ್ತಿದ್ದ ಸುದೀಪ್ ಪಾಳಿಗೆ ವರವಾದದ್ದು ಸ್ಪರ್ಶ ಸಿನಿಮಾ.
ಸುದೀಪ್ ಸಿನಿ ಕರಿಯರ್ ಗೆ ಬೇಕಿದ್ದ ಆ ಗೆಲುವನ್ನು ಸ್ಪರ್ಶ ಸಿನಿಮಾ ನೀಡಿತು. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಈ ಚಿತ್ರ 100 ದಿನ ಓಡಿತ್ತು.
ಓಂ ಪ್ರಕಾಶ್ ರಾವ್ ನಿರ್ದೇಶನದ ಹುಚ್ಚ ಸಿನಿಮಾ ಸುದೀಪ್ ವೃತ್ತಿಜೀವನಕ್ಕೆ ಟರ್ನಿಂಗ್ ಪಾಯಿಂಟ್ ಆಯಿತು. ಸುದೀಪ್ ಅದ್ಭುತ ನಟನೆಗೆ ಜನರು ಮಾರು ಹೋದರು, ಆ ಸಿನಿಮಾದಿಂದಲೇ ಸುದೀಪ್ ಹೆಸರಿನ ಜೊತೆ ಕಿಚ್ಚ ಎಂಬ ಪದವೂ ಸೇರಿಕೊಂಡಿತು.
ಕನ್ನಡದ ಜೊತೆ ಸುದೀಪ್ ಫೂಂಕ್, ಫೂಂಕ್ 2, ರಣ್, ರಕ್ತ ಚರಿತ್ರ, ರಕ್ತ ಚರಿತ್ರ 2, ದಬಾಂಗ್ 3 ಬಾಲಿವುಡ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ದಬಾಂಗ್ 3 ಸಿನಿಮಾದಲ್ಲಿ ಸಲ್ಮಾನ್ ಖಾನ್ ಎದುರು ಖಳನಾಯಕನಾಗಿ ಅಬ್ಬರಿಸಿದ್ದಾರೆ.
ಎಸ್.ಎಸ್ ರಾಜಮೌಳಿ ನಿರ್ದೇಶನದ 'ಈಗ' ಸಿನಿಮಾದಲ್ಲಿ ಸುದೀಪ್ ನಟನೆ ಬೇರೆ ಲೆವೆಲ್‌ನಲ್ಲಿದೆ. 'ಈಗ' ಸಿನಿಮಾದಲ್ಲಿ ಸುದೀಪ್ ಅವರ ಅಭಿನಯವನ್ನು ಜನರು ಇಂದು ಕೂಡ ಹಾಡಿ ಹೊಗಳುತ್ತಾರೆ.
ಮೈ ಆಟೋಗ್ರಾಫ್, ಕಿಚ್ಚ, ಸ್ವಾತಿಮುತ್ತು, ಕೋಟಿಗೊಬ್ಬ 2, ಕೆಂಪೇಗೌಡ, ರನ್ನ, ವಿಷ್ಣುವರ್ಧನ, ಬಚ್ಚನ್, ಚಂದು, ವಾಲಿ, ಹೆಬ್ಬುಲಿ, ಕೋಟಿಗೊಬ್ಬ3, ಕಬ್ಜ, ವಿಕ್ರಾಂತ್ ರೋಣ, ಹೀಗೆ ಸಾಕಷ್ಟು ಹಿಟ್ ಸಿನಿಮಾಗಳನ್ನು ಕನ್ನಡದಲ್ಲಿ ಸುದೀಪ್ ನೀಡಿದ್ದಾರೆ.