ನೂತನ ರಾಜ್ಯಸಭಾ ಸದಸ್ಯ ಡಾ.ಡಿ ವೀರೇಂದ್ರ ಹೆಗ್ಗಡೆರಿಗೆ ಶುಭಾಶಯ ಸಲ್ಲಿಸಿದ ಕಿಚ್ಚ ಸುದೀಪ್‌

ಸದ್ಯ ಸಿನಿ ಇಂಡಸ್ಟ್ರಿಯಲ್ಲಿ ಕಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣಾ ಸಿನಿಮಾ ಸದ್ದು ಮಾಡುತ್ತಿದೆ. ಅಭಿಮಾನಿಗಳ ಮನಗೆದ್ದ ಸಿನಿಮಾ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುತ್ತಿದೆ. ಇನ್ನು ನವದೆಹಲಿಯಲ್ಲಿ ಸಂಸದರಿಗಾಗಿ ವಿಕ್ರಾಂತ್ ರೋಣ ಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುದೀಪ್‌ ಮತ್ತು ತಂಡ ಭಾಗವಹಿಸಿತ್ತು. ಇದೇ ವೇಳೆ ನೂತನ ರಾಜ್ಯಸಭಾ ಸದಸ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ್ದಾರೆ. 

1 /5

ನೂತನವಾಗಿ ರಾಜ್ಯಸಭೆಗೆ ಆಯ್ಕೆ ಆಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದ ಕಿಚ್ಚ ಸುದೀಪ್‌, ಪ್ರಿಯಾ ಸುದೀಪ್‌ ಮತ್ತು ತಂಡ ಶುಭಾಶಯ ತಿಳಿಸಿದ್ದಾರೆ.

2 /5

 ನೂತನ ರಾಜ್ಯಸಭಾ ಸದಸ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಜೊತೆ ಫೋಟೋ ತೆಗೆಸಿಕೊಂಡಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

3 /5

ಕಳೆದ ದಿನ ದೆಹಲಿಯಲ್ಲಿ ಸಂಸದರಿಗಾಗಿ ಏರ್ಪಡಿಸಿದ್ದ ವಿಕ್ರಾಂತ್ ರೋಣ ಚಿತ್ರ ಪ್ರದರ್ಶನಕ್ಕೆಂದು ಸುದೀಪ್ ದಂಪತಿ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದು ಬಂದಿದ್ದಾರೆ.   

4 /5

ವಿಕ್ರಾಂತ್‌ ರೋಣ’ ಸಿನಿಮಾ ಸುಮಾರು 3 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ರಿಲೀಸ್‌ ಆಗಿ ಅದ್ದೂರಿ ಪ್ರದರ್ಶನ ಕಾಣುತ್ತಿದೆ.   

5 /5

3D ಹಾಗೂ 2D ವರ್ಶನ್‌ನಲ್ಲಿ 'ವಿಕ್ರಾಂತ್‌ ರೋಣ' ರಿಲೀಸ್‌ ಆಗಿದ್ದು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.