ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಮಂಗಳನ ಸಂಕ್ರಮಣವು ಜನರ ಧೈರ್ಯ-ಪರಾಕ್ರಮ, ಭೂಮಿ-ಆಸ್ತಿ, ಸಹೋದರನೊಂದಿಗಿನ ಸಂಬಂಧಗಳು, ಕೋಪ ಇತ್ಯಾದಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರ ಹೊರತಾಗಿ ಮದುವೆಗೆ ಮಂಗಳನ ಸ್ಥಾನ ಬಹಳ ಮುಖ್ಯ. ಇಲ್ಲದಿದ್ದರೆ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
ಮಂಗಳ ಗ್ರಹವು ಪ್ರಸ್ತುತ ಮಿಥುನ ರಾಶಿಯಲ್ಲಿದ್ದು ಮೇ 10 ರಂದು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದೆ. ಹೀಗೆ ಕರ್ಕಾಟಕ ರಾಶಿ ಪ್ರವೇಶಿಸಿದ ಮಂಗಳ ಜುಲೈ 1, 2023 ರವರೆಗೆ ಕರ್ಕ ರಾಶಿಯಲ್ಲಿರುತ್ತಾನೆ. ಕರ್ಕಾಟಕದಲ್ಲಿ ಮಂಗಳನ ಪ್ರವೇಶ ಬಹಳ ಮುಖ್ಯವೆಂದು ಹೇಳಲಾಗುತ್ತದೆ. ಕರ್ಕಾಟಕದಲ್ಲಿ ಮಂಗಳನ ಸಂಚಾರವು ಕೆಲ ರಾಶಿಯವರಿಗೆ ಶುಭ ಫಲವನ್ನೇ ನೀಡಲಿದೆ.
ಮೇಷ ರಾಶಿ : ಮೇಷ ರಾಶಿಯ ಅಧಿಪತಿ ಮಂಗಳ. ಹೀಗಾಗಿ ಮಂಗಳನ ಸಂಚಾರವು ಮೇಷ ರಾಶಿಯವರಿಗೆ ಅತ್ಯಂತ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಯವರ ವೃತ್ತಿ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಆದಾಯದಲ್ಲಿ ಭಾರೀ ಹೆಚ್ಚಳವಾಗುವುದು. ಹೊಸ ವಾಹನ ಖರೀದಿಸುವ ಯೋಗ ಕೂಡಿ ಬರುವುದು. ವೃತ್ತಿಜೀವನಕ್ಕೆಸಂಬಂಧಿಸಿದಂತೆ ತುಂಬಾ ಒಳ್ಳೆಯ ಸಮಯ. ಆದರೆ ಈ ಸಮಯದಲ್ಲಿ, ಪೋಷಕರು ಮತ್ತು ಹಿರಿಯ ಸಹೋದರರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ.
ಕನ್ಯಾ ರಾಶಿ: ಮಂಗಳನ ಸಂಚಾರವು ಕನ್ಯಾ ರಾಶಿಯವರ ಎಲ್ಲಾ ಆಸೆಗಳನ್ನು ಪೂರೈಸುತ್ತದೆ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ. ಖರ್ಚು ಕಡಿಮೆಯಾಗುತ್ತದೆ. ಉದ್ಯೋಗ ಮತ್ತು ವ್ಯವಹಾರ ಎರಡಕ್ಕೂ ಇದು ಉತ್ತಮ ಸಮಯ. ಆತ್ಮೀಯರೊಂದಿಗೆ ಉತ್ತಮ ಸಮಯ ಕಳೆಯುವುದು ಸಾಧ್ಯವಾಗುತ್ತದೆ. ಎದುರಾಳಿಗಳಿಗೆ ಸೋಲಾಗುವುದು.
ಕುಂಭ ರಾಶಿ : ಕುಂಭ ರಾಶಿಯವರ ವೃತ್ತಿಯಲ್ಲಿ ಮಂಗಳ ಸಂಚಾರವು ಲಾಭವನ್ನು ನೀಡುತ್ತದೆ. ನೀವು ಮಾಡುವ ಕೆಲಸಕ್ಕೆ ಪ್ರಶಂಸೆ ಸಿಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಶತ್ರುಗಳ ಯೋಜನೆಗಳು ವಿಫಲಗೊಳ್ಳುತ್ತವೆ. ಕೆಟ್ಟ ಸಹವಾಸ ಮತ್ತು ಅಭ್ಯಾಸಗಳಿಂದ ದೂರವಿದ್ದರೆ, ಈ ಸಮಯವು ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. (ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)