ಲಕ್ಷ್ಮಿದೇವಿ ನೆಲೆಸಿರುವ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಜೀವನದಲ್ಲಿ ಸಂಪತ್ತು ಇರುತ್ತದೆ ಎಂದು ನಂಬಲಾಗಿದೆ.
ನವದೆಹಲಿ: ತಾಯಿ ಲಕ್ಷ್ಮಿದೇವಿಯನ್ನು ಸಂಪತ್ತು ಮತ್ತು ವೈಭವದ ದೇವತೆ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿದೇವಿ ನೆಲೆಸಿರುವ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಜೀವನದಲ್ಲಿ ಸಂಪತ್ತು ಇರುತ್ತದೆ ಎಂದು ನಂಬಲಾಗಿದೆ. ಇಂದಿನ ಕಾಲಘಟ್ಟದಲ್ಲಿ ಲಕ್ಷ್ಮೀದೇವಿಯ ಆಶೀರ್ವಾದ ಸದಾ ಇರಲಿ ಎಂಬುದು ಪ್ರತಿಯೊಬ್ಬರ ಆಶಯ. ಇದಕ್ಕಾಗಿ ಜನರು ಅನೇಕ ರೀತಿಯ ಪರಿಹಾರಗಳನ್ನು ಮತ್ತು ಪೂಜೆಗಳನ್ನು ಮಾಡುತ್ತಾರೆ. ತಾಯಿ ಲಕ್ಷ್ಮಿದೇವಿಯು ತನ್ನ ಭಕ್ತರಿಗೆ ಹೇಗೆ ಅನುಗ್ರಹ ನೀಡುತ್ತಾಳೆ ಅನ್ನೋದನ್ನು ತಿಳಿಯಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಶುಕ್ರವಾರದಂದು ತಾಯಿ ಲಕ್ಷ್ಮಿದೇವಿಗೆ 108 ಬಾರಿ ‘ಓಂ ಶ್ರೀ ಶ್ರೀಯೇ ನಮಃ’ ಎಂದು ಜಪಿಸಿ. ಈ ದಿನ ವಿಷ್ಣುವಿಗೆ ದಕ್ಷಿಣಾವರ್ತಿ ಶಂಖದಲ್ಲಿ ನೀರು ತುಂಬಿ ಅಭಿಷೇಕ ಮಾಡಬೇಕು. ಸಂಜೆ ಹಸುವಿನ ತುಪ್ಪದ ದೀಪವನ್ನು ಹಚ್ಚಿ ಮತ್ತು ಆ ದೀಪಕ್ಕೆ ಸ್ವಲ್ಪ ಕುಂಕುಮವನ್ನು ಹಾಕಿ. ಅಷ್ಟೇ ಅಲ್ಲ ಶುಕ್ರವಾರ ಬಡವರಿಗೆ ಅನ್ನದಾನ ಮಾಡಬೇಕು.
ಶ್ವೇತವರ್ಣದ ಬೆಂಡು-ಬತ್ತಾಸು(Bendu Battasu) ತಾಯಿ ಲಕ್ಷ್ಮಿದೇವಿಗೆ ಬಹಳ ಪ್ರಿಯ. ಹೀಗಾಗಿ ಶುಕ್ರವಾರ ದೇವಿಗೆ ಈ ಮಿಠಾಯಿಗಳನ್ನು ಅರ್ಪಿಸಬೇಕು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮಿದೇವಿಗೆ ಬಿಳಿ ಬಣ್ಣ ತುಂಬಾ ಪ್ರಿಯ. ಆದ್ದರಿಂದ ಶುಕ್ರವಾರ ದೇವಿಗೆ ಬಿಳಿ ಬಣ್ಣದ ವಸ್ತುಗಳನ್ನು ಮಾತ್ರ ನೀಡಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮಿದೇವಿಗೆ ಮಖಾನಾ(Prickly water lily) ಅರ್ಪಿಸಿ. ಮಖಾನಾವನ್ನು ಕಮಲದ ಹೂವಿನ ಬೀಜಗಳಿಂದ ತಯಾರಿಸಲಾಗುತ್ತದೆ ಎಂದು ನಂಬಲಾಗಿದೆ. ಇದಕ್ಕಾಗಿಯೇ ಇದನ್ನು ಫೂಲ್ ಮಖಾನಾ ಎಂದೂ ಕರೆಯುತ್ತಾರೆ. ಇವುಗಳನ್ನು ಅರ್ಪಿಸಿದರೆ ಲಕ್ಷ್ಮಿದೇವಿ ಸಂತೋಷಪಡುತ್ತಾಳೆ.
ಶಾಸ್ತ್ರಗಳ ಪ್ರಕಾರ ಬಿಳಿ ಬಣ್ಣದ ವಸ್ತುಗಳು ತಾಯಿ ಲಕ್ಷ್ಮಿಗೆ ಬಹಳ ಪ್ರಿಯವಾಗಿವೆ. ಶುಕ್ರವಾರದಂದು ಖೀರ್, ಬರ್ಫಿ, ಮಖಾನಾ ಕಿ ಖೀರ್ ಮುಂತಾದ ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ದೇವಿಗೆ ಅರ್ಪಿಸಬಹುದು. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿಯು ತುಂಬಾ ಸಂತೋಷಪಡುತ್ತಾಳೆ ಮತ್ತು ಭಕ್ತರ ಮೇಲೆ ಸಾಕಷ್ಟು ಕೃಪೆಯ ಮಳೆ ಸುರಿಸುತ್ತಾಳೆ. ಇದಲ್ಲದೆ ಲಕ್ಷ್ಮಿದೇವಿಗೆ ಸಕ್ಕರೆ ಮಿಠಾಯಿಯನ್ನು ಸಹ ಅರ್ಪಿಸಬಹುದು.