ಫೋಟೋ: ಸರಳತೆ, ಸಜ್ಜನಿಕೆಯಿಂದ ಜನಪ್ರಿಯರಾಗಿದ್ದ ಅಪರೂಪದ ರಾಜಕಾರಣಿ ಮನೋಹರ್ ಪರ್ರಿಕರ್

ಮಾಜಿ ರಕ್ಷಣಾ ಸಚಿವ ಮತ್ತು ನಾಲ್ಕು ಬಾರಿ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್(63) ಭಾನುವಾರ (ಮಾರ್ಚ್ 17) ಮೃತಪಟ್ಟರು. 

  • Mar 18, 2019, 12:31 PM IST

ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ವಿರುದ್ಧ ಸತತವಾಗಿ ಹೋರಾಟ ನಡೆಸಿ ಭಾನುವಾರ ಇಹಲೋಕ ತ್ಯಜಿಸಿದ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್, ತಮ್ಮ ಕೊನೆ ಉಸಿರಿರುವರೆಗೂ ಜನತೆಗಾಗಿ ದುಡಿಯಬೇಕು ಎಂದಿದ್ದರಂತೆ.

1 /5

ಡಿಸೆಂಬರ್‌ 13, 1955ರಲ್ಲಿ ಗೋವಾದ ಮಾಪುಸಾದಲ್ಲಿ ಜನಿಸಿದ ಮನೋಹರ್‌ ಪರಿಕ್ಕರರಿಗೆ ಬಾಲ್ಯದಿಂದಲೇ ಆರ್‌ಎಸ್ಎಸ್‌ ಜೊತೆ ಅವಿನಾಭಾವ ನಂಟು ಹೊಂದಿದ್ದರು. ಗೋವಾ ಮುಖ್ಯಮಂತ್ರಿ ಮತ್ತು ಮಾಜಿ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ 2018 ರ ಫೆಬ್ರವರಿಯಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

2 /5

ಐಐಟಿ-ಬಾಂಬೆ ವಿದ್ಯಾರ್ಥಿಯಾಗಿದ್ದ ಪರ್ರಿಕರ್, ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಆರ್‌ಎಸ್ಎಸ್‌ನಲ್ಲಿ ಸಕ್ರಿಯರಾಗಿದ್ದರು.  1994 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪಣಜಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮನೋಹರ್ ಪರ್ರಿಕರ್ ಜಯ ಸಾಧಿಸಿದ್ದರು.

3 /5

ನಾಲ್ಕು ಬಾರಿ ಗೋವಾ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಮನೋಹರ್ ಪರ್ರಿಕರ್, 2014 ರಿಂದ 2017ರವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿದ್ದರು.

4 /5

ತಮ್ಮ ಸರಳತೆ, ಸಜ್ಜನಿಕೆಯಿಂದ ಜನಪ್ರಿಯರಾಗಿದ್ದ ಅಪರೂಪದ ರಾಜಕಾರಣಿ ಮನೋಹರ್ ಪರ್ರಿಕರ್, ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಿಂದಲೂ ಮೆಚ್ಚುಗೆ ಪಡೆದಿದ್ದರು.

5 /5

ಮನೋಹರ್ ಪರ್ರಿಕರ್ ನಿಧಾನಕ್ಕೆ ಗೋವಾ ಸರ್ಕಾರ ತೀವ್ರ ಶೋಕ ವ್ಯಕ್ತಪಡಿಸಿದ್ದು, ಅಗಲಿದ ನಾಯಕನ ಗೌರವಾರ್ಥ ರಾಜ್ಯದಲ್ಲಿ ಏಳು ದಿನಗಳ ಶೋಕಾಚರಣೆ ನಡೆಸಲಾಗುವುದು ಎಂದು ತಿಳಿಸಿದೆ.