Photos: ಸಾಧಕರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್

   

  • Mar 16, 2019, 17:00 PM IST

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. 

1 /5

ಭಾರತೀಯ ಆಹಾರ ಉದ್ಯಮದ ಐಕಾನ್, ಎಂಡಿಹೆಚ್ ಮಸಾಲಾ ಕಂಪನಿಯ ಮುಖ್ಯಸ್ಥ ಮಹಾಶಯ ಧರ್ಮ ಪಾಲ್ ಗುಲಾಟಿ ಅವರು ವಾಣಿಜ್ಯ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. (ಪೋಟೋ ಕೃಪೆ: Twitter/@rashtrapatibhvn​)

2 /5

ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸರಸ್ವತಿ ನಿಧಿ ಶೋಧ್ ಸಂಸ್ಥಾನದ ಅಧ್ಯಕ್ಷರಾದ ದರ್ಶನ್ ಲಾಲ್ ಜೈನ್ ಅವರು ಸಮಾಜದ ಕಲ್ಯಾಣಕ್ಕಾಗಿ ಮಾಡಿರುವ ಅವಿರತ ಸೇವೆಯನ್ನು ಪರಿಗಣಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. (ಪೋಟೋ ಕೃಪೆ: Twitter/@rashtrapatibhvn​)

3 /5

ಇಸ್ರೋ ವಿಜ್ಞಾನಿ ಶಂಕರಲಿಂಗಮ್ ನಂಬಿ ನಾರಾಯಣನ್ ಅವರು ವಿಜ್ಞಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. (ಪೋಟೋ ಕೃಪೆ: Twitter/@ANI)

4 /5

ಹಿಮಾಲಯ ಪರ್ವತವನ್ನು ಏರಿದ ಮೊಟ್ಟ ಮೊದಲ ಮಹಿಳೆ ಹಾಗೂ ಪರ್ವತಾರೋಹಣ ಮತ್ತು ಸಾಹಸ ಕ್ರೀಡೆಗಳಲ್ಲಿ ಮಹಿಳಾ ವಿಭಾಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಬಚೇಂದ್ರಿ ಪಾಲ್ ಅವರಿಗೆ ಕ್ರೀಡಾ ಕ್ಷೇತ್ರದ ಸಾಧನೆಗಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. (ಪೋಟೋ ಕೃಪೆ: Twitter/@rashtrapatibhvn)

5 /5

ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ ನಿವೃತ್ತ ಐಎಎಸ್ ಅಧಿಕಾರಿ ವಿಜಯಕೃಷ್ಣನ್ ಶುಂಗ್ಲು ಅವರಿಗೆ ನಾಗರಿಕ ಸೇವಾ ವಲಯದಲ್ಲಿ ಮಾಡಿದ ಸಾಧನೆಗಾಗಿ ರಾಷ್ಟ್ರಪತಿ ಕೋವಿಂದ್ ಅವರು ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು. (ಪೋಟೋ ಕೃಪೆ: Twitter/@rashtrapatibhvn​)