Budh Asta 2024: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಎಂದು ಬಣ್ಣಿಸಲ್ಪಡುವ ಬುಧನು ನಾಳೆ ಎಂದರೆ ಏಪ್ರಿಲ್ 04ರಂದು ಅಸ್ತಮ ಸ್ಥಿತಿಗೆ ಜಾರಲಿದ್ದಾನೆ. ಇದರ ಪ್ರಭಾವ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಐದು ರಾಶಿಯ ಜನರು ಮಾತ್ರ ಹೆಜ್ಜೆ ಹೆಜ್ಜೆಗೂ ಎಚ್ಚರಿಕೆಯಿಂದ ಇರಬೇಕು ಎನ್ನಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಬುದ್ದಿವಂತಿಕೆ, ವ್ಯವಹಾರ, ಮಾತಿನ ಅಂಶ ಎಂದು ನಂಬಲಾಗಿರುವ ಬುಧ ಏಪ್ರಿಲ್ 04ರಂದು ಮೇಷ ರಾಶಿಯಲ್ಲಿ ಅಸ್ತಮ ಸ್ಥಿತಿಗೆ ಜಾರಲಿದ್ದಾನೆ. ಬಳಿಕ ಮೇ 01ರಂದು ಬುಧ ಉದಯಿಸಲಿದ್ದಾನೆ. ಈ ಸಮಯದಲ್ಲಿ ಐದು ರಾಶಿಯ ಜನರಿಗೆ ವೃತ್ತಿ-ವ್ಯವಹಾರದಲ್ಲಿ ಸವಾಲುಗಳು ಹೆಚ್ಚಾಗಬಹುದು. ಹಾಗಾಗಿ ಅವರು ಹೆಜ್ಜೆ ಹೆಜ್ಜೆಗೂ ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತಿದೆ. ಆ ರಾಶಿಗಳೆಂದರೆ...
ಸ್ವ ರಾಶಿಯಲ್ಲಿಯೇ ಬುಧ ಅಸ್ತಮವು ಮೇಷ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ತೊಂದರೆಗಳನ್ನು ಹೆಚ್ಚಿಸಲಿದ್ದಾನೆ. ಈ ಸಮಯದಲ್ಲಿ ನೀವು ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ನಿರ್ಧಾರಗಳನ್ನು ಮುಂದೂಡುವುದು ಒಳ್ಳೆಯದು.
ಮಿಥುನ ರಾಶಿಯ ಉದ್ಯೋಗಸ್ಥರಿಗೆ ಈ ಸಮಯ ಅಷ್ಟು ಉತ್ತಮವಾಗಿಲ್ಲ. ಉದ್ಯೋಗ ಕ್ಷೇತ್ರದಲ್ಲಿ ಕೆಲಸದ ಹೊರೆ ಹೆಚ್ಚಾಗುವುದರಿಂದ ಒತ್ತಡಕ್ಕೆ ಒಳಗಾಗಬಹುದು. ಇದು ನಿಮ್ಮ ಆತ್ಮಸ್ಥೈರ್ಯದ ಮೇಲೂ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡಬಹುದು.
ಕನ್ಯಾ ರಾಶಿಯವರಿಗೆ ಬುಧನ ಹಿಮ್ಮುನ ಚಲನೆಯಿಂದ ವೃತ್ತಿ ರಂಗದಲ್ಲಿ ಹಲವು ಸವಾಲುಗಳು ಎದುರಾಗಬಹುದು. ಆದಾಗ್ಯೂ, ಎಂತಹುದ್ದೇ ಸಂದರ್ಭದಲ್ಲಿ ನಿಮ್ಮ ನಕಾರಾತ್ಮಕ ಆಲೋಚನೆಗಳನ್ನು ತಡೆಯುರಿ. ಕಷ್ಟಪಟ್ಟು ಹಿಡಿದ ಕೆಲಸವನ್ನು ಸಾಧಿಸುವತ್ತ ಗಮನಹರಿಸಿ.
ವೃಶ್ಚಿಕ ರಾಶಿಯವರೇ ಬುಧನ ಹಿಮ್ಮುಖ ಚಲನೆಯ ಈ ಸಮಯದಲ್ಲಿ ನೀವು ವಿಶೇಷವಾಗಿ ಕಚೇರಿಯಲ್ಲಿ ಯಾರೊಂದಿಗೂ ಸಹ ಅನಗತ್ಯ ವಾದಗಳಲ್ಲಿ ತೊಡಗುವುದನ್ನು ತಪ್ಪಿಸಿ. ಕೆಲಸದ ಒತ್ತಡದ ನಡುವೆ ಆತುರಾತುರವಾಗಿ ಯಾವುದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
ಈ ಸಮಯದಲ್ಲಿ ಧನು ರಾಶಿಯ ಜನರು ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸಬೇಕಾಗಬಹುದು. ಕಚೇರಿಯಲ್ಲಿ ಅನಗತ್ಯ ವಿಷಯಗಳು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ಇದನ್ನು ತಪ್ಪಿಸಲು ಬುದ್ದಿವಂತಿಕೆಯಿಂದ ವಿಷಯಗಳನ್ನು ಇತ್ಯರ್ಥಪಡಿಸಿ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.