ವಿಶ್ವದ 5 ಅತೀ ಅಪಾಯಕಾರಿ ಶ್ವಾನ: ಇವುಗಳ ಬಳಿ ಹೋಗೋಕು ಮುನ್ನ ಒಮ್ಮೆ ಯೋಚಿಸಿ

ನಾಯಿಗಳು ನಮಗೆಲ್ಲ ಅಚ್ಚುಮೆಚ್ಚಿನ ಪ್ರಾಣಿ. ನಾಯಿಗಳನ್ನು ಮನುಷ್ಯನ ನಿಜವಾದ ಸ್ನೇಹಿತ ಎಂದು ಪರಿಗಣಿಸಲಾಗುತ್ತದೆ. ಅಂತಹ ಕೆಲವು ನಾಯಿಗಳು ಜಗತ್ತಿನಲ್ಲಿ ಕಂಡುಬರುತ್ತವೆಯಾದರೂ, ಅವು ತುಂಬಾ ಅಪಾಯಕಾರಿ. ಈ ನಾಯಿಗಳು ಅಪಾಯದ ಸಣ್ಣದೊಂದು ಚಿಹ್ನೆಯನ್ನೂ ಮುಂಚೆಯೇ ಗ್ರಹಿಸಬಲ್ಲದು.  ಈ ಜಾತಿಗಳ ನಾಯಿಯನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟ ಎಂದು ಪರಿಗಣಿಸಲಾಗಿದೆ. ಈ ಜಾತಿಯ ನಾಯಿಗಳು ನಿಮ್ಮ ಜೊತೆ ವಾಸಿಸುತ್ತಿದ್ದರೆ, ನೀವು ಜಾಗರೂಕರಾಗಿರಬೇಕು.

1 /5

ಪ್ರಿಸಾ ಕೆನಾರಿಯೊ ಜಾತಿಯ ನಾಯಿಗಳು ಆಫ್ರಿಕಾದಲ್ಲಿ ಕಂಡುಬರುತ್ತವೆ. ಈ ಜಾತಿಯ ನಾಯಿಗಳು ಮಾನವನ ತೂಕಕ್ಕೆ ಸಮಾನವಾಗಿರುತ್ತವೆ. ಅವುಗಳು 60 ಕೆಜಿ ವರೆಗೆ ತೂಗುತ್ತವೆ ಮತ್ತು ತುಂಬಾ ಅಪಾಯಕಾರಿ. ಈ ಜಾತಿಯ ನಾಯಿಗಳು ಯಾರನ್ನಾದರೂ ಆಕ್ರಮಣ ಮಾಡಿದರೆ, ಅವರು ಬದುಕುವುದು ಭಾರೀ ಕಷ್ಟ ಎಂದೇ ಹೇಳಲಾಗುತ್ತದೆ. 

2 /5

 ರೋಟ್ವೀಲರ್ ನಾಯಿಗಳು ವಿಶ್ವದ ಅತ್ಯಂತ ಅಪಾಯಕಾರಿ ನಾಯಿ ಜಾತಿಗಳಲ್ಲಿ ಸೇರಿವೆ. ರೊಟ್ವೀಲರ್ ನಾಯಿಗಳು ತುಂಬಾ ಸ್ನಾಯುವಿನ ದೇಹ ಮತ್ತು ಬಲವಾದ ದವಡೆಗಳನ್ನು ಹೊಂದಿರುತ್ತವೆ. ಅಪರಿಚಿತರನ್ನು ಮತ್ತು ಇತರ ಜಾತಿಗಳ ನಾಯಿಗಳನ್ನು ಅತಿಯಾಗಿ ದ್ವೇಷಿಸುವ ನಾಯಿಯೆಂದರೆ ರೋಟ್ವೀಲರ್‌ ಎನ್ನಬಹುದು. 

3 /5

ಪಿಟ್ಬುಲ್ ಜಾತಿಯ ನಾಯಿಗಳು ತುಂಬಾ ಆಕ್ರಮಣಕಾರಿ. ತಮ್ಮ ಆಕ್ರಮಣಕಾರಿ ವರ್ತನೆಗೆ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಅತ್ಯಂತ ಅಪಾಯಕಾರಿಯಾದ ಕಾರಣ, ಪಿಟ್‌ಬುಲ್ ಜಾತಿಯ ನಾಯಿಗಳು ಕೆಲವೊಮ್ಮೆ ಯಾರನ್ನಾದರೂ ಅನಗತ್ಯವಾಗಿ ಆಕ್ರಮಣ ಮಾಡುತ್ತವೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಬೆಳೆಸಿದರೆ ಉತ್ತಮ ಸ್ನೇಹಿತರಾಗಿಯೂ ಅವುಗಳು ಜೀವಿಸುತ್ತದೆ. 

4 /5

ಜರ್ಮನ್ ಶೆಫರ್ಡ್ ಜಾತಿಯ ನಾಯಿಗಳನ್ನು ನೀವು ಅನೇಕರ ಮನೆಗಳಲ್ಲಿ ನೋಡಿರಬೇಕು. ಈ ನಾಯಿಗಳು ಜರ್ಮನಿಯಿಂದ ಬಂದವು. ಈ ನಾಯಿಗಳು ತಮ್ಮ ಶಕ್ತಿ ಮತ್ತು ನಿರ್ಭಯತೆಯಿಂದಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಇವು ನಿರಂತರವಾಗಿ ದೈಹಿಕ ಚಟುವಟಿಕೆಗಳನ್ನು ಮಾಡುತ್ತವೆ. ಸಣ್ಣದೊಂದು ಗಾಯಗಳಾದರೂ ಇದು ದ್ವೇಷ ಸಾಧಿಸದೆ ಬಿಡದು. 

5 /5

ಚೌ-ಚೌ ಜಾತಿಯ ನಾಯಿಗಳು ಚೀನಾದಲ್ಲಿ ಕಂಡುಬರುತ್ತವೆ. ಈ ನಾಯಿಗಳು ನೋಟದಲ್ಲಿ ತುಂಬಾ ಶಾಂತವಾಗಿ ತೋರುತ್ತದೆಯಾದರೂ, ಅವು ತುಂಬಾ ಅಪಾಯಕಾರಿ. ಅವುಗಳನ್ನು ವಿಶ್ವದ ಅತ್ಯಂತ ಅಪಾಯಕಾರಿ ನಾಯಿಗಳೆಂದು ಪರಿಗಣಿಸಲಾಗಿದೆ.