Mukhesh Ambani Strugggle : ಇಂದು ಮುಖೇಶ್ ಅಂಬಾನಿ ಆಂಟಿಲಿಯಂತಹ ಅರಮನೆಯಲ್ಲಿ ವಾಸವಿದ್ದಾರೆ.ಆದರೆ ಅವರ ಬಾಲ್ಯ ಸವೆದದ್ದು ಮುಂಬಯಿನ ಚಾಲ್ ನ ಒಂದೇ ಕೋಣೆಯ ಪುಟ್ಟ ಮನೆಯಲ್ಲಿ.
Mukhesh Ambani Strugggle :ಮುಖೇಶ್ ಅಂಬಾನಿಯವರ ಬಗ್ಗೆ ಯಾರೇ ಮಾತನಾಡಿದರೂ ಮೊದಲು ಚರ್ಚೆಗೆ ಇಳಿಯುವುದೇ ಅವರ ಬ್ಯಾಂಕ್ ಬ್ಯಾಲೆನ್ಸ್ ನಿಂದ. ಅವರ ಸಂಪತ್ತು ಐಶಾರಾಮಿ ಬದುಕಿನ ಬಗ್ಗೆ ಮಾತನಾಡುವ ನಾವು ಒಮ್ಮೆ ಅವರ ಹೋರಾಟದ ಹಾದಿಯ ಬಗ್ಗೆಯೂ ತಿಳಿದುಕೊಳ್ಳಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಮುಖೇಶ್ ಅಂಬಾನಿ ಮಾತು ಬಂದಾಗಲೆಲ್ಲಾ ರಿಲಯನ್ಸ್ ಇಂಡಸ್ಟ್ರೀಸ್ ನ ಬಹುದೊಡ್ಡ ಸಾಮ್ರಾಜ್ಯ, ಏಷ್ಯಾದ ಸಿರಿವಂತ, ಕೋಟ್ಯಂತರ ಸಂಪತ್ತು, ಐಷಾರಾಮಿ ಬದುಕು ಈ ವಿಷಯಗಳೇ ನಮ್ಮ ಕಣ್ಣ ಮುಂದೆ ಬರುವುದು. ಆದರೆ ಬಿಲಿಯನೇರ್ ಆಗಿರುವ ಹಿಂದೆ ಅವರ ವರ್ಷಗಳ ಪರಿಶ್ರಮ,ಪ್ರತಿ ದಿನದ ಶ್ರಮ ಅಡಗಿದೆ.
ಮುಖೇಶ್ ಅಂಬಾನಿ,ಧೀರೂಭಾಯಿ ಅಂಬಾನಿಯವರ ಹಿರಿಯ ಮಗ.ಇಂದು ಅವರು ಆಂಟಿಲಿಯಂತಹ ಅರಮನೆಯಲ್ಲಿ ವಾಸವಿದ್ದಾರೆ. ಕೈಗೊಂದು ಕಾಲಿಗೊಂದು ಎನ್ನುವಂತೆ ಆಳುಗಳಿದ್ದಾರೆ. ಆದರೆ ಅವರ ಬಾಲ್ಯ ಸವೆದದ್ದು ಮುಂಬಯಿನ ಚಾಲ್ ನ ಒಂದೇ ಕೋಣೆಯ ಪುಟ್ಟ ಮನೆಯಲ್ಲಿ. ಆ ಮನೆಯಲ್ಲಿ 9 ಜನರ ಕುಟುಂಬ ವಾಸವಾಗಿರಬೇಕಿತ್ತು.
ಧೀರೂಭಾಯಿ ಅಂಬಾನಿ ಮಕ್ಕಳನ್ನು ಶಿಸ್ತಿನ ಸಿಪಾಯಿಯಂತೆ ಬೆಳೆಸಿದ್ದರು. ತಪ್ಪು ಮಾಡಿದಾಗ ಶಿಕ್ಷೆ ತಪ್ಪಿದ್ದಲ್ಲ. ಒಮ್ಮೆ ಮನೆಗೆ ಅತಿಥಿಗಳು ಬಂದಾಗ, ಮುಖೇಶ್ ಮತ್ತು ಅನಿಲ್ ಅಂಬಾನಿ ಅತಿಥಿಗಳಿಗೆ ತಯಾರಿಸಿದ ತಿಂಡಿ ತಿಂದರು ಎನ್ನುವ ಕಾರಣಕ್ಕೆ ಎರಡು ದಿನ ಗ್ಯಾರೇಜ್‌ನಲ್ಲಿ ಇರುವ ಶಿಕ್ಷೆ ಪಡೆದಿದ್ದರಂತೆ.
ತಂದೆ ರಿಲಯನ್ಸ್ ಅನ್ನು ದೊಡ್ಡ ಮಟ್ಟಕ್ಕೆ ಬೆಳೆಸಲು ಹೆಣಗಾಡುತ್ತಿದ್ದಾಗ,ಮುಖೇಶ್ ಅಂಬಾನಿ ಆ ಹೋರಾಟವನ್ನು ಹತ್ತಿರದಿಂದ ನೋಡಿದ್ದಾರೆ.ಅಲ್ಲಿಂದಲೇ ಅವರ ಜೀವನ ಪಾಠ ಶುರುವಾಗಿತ್ತು.
ಮುಖೇಶ್ ಅಂಬಾನಿ ಅವರ ಜೀವನದಲ್ಲಿ ಅತ್ಯಂತ ಕಷ್ಟಕರವಾದ ಸಮಯವೆಂದರೆ ಅವರ ತಂದೆ ಇದ್ದಕ್ಕಿದ್ದಂತೆ ಪಾರ್ಶ್ವವಾಯುವಿಗೆ ಒಳಗಾಗಿದ್ದು. ಫೆಬ್ರವರಿ 1986 ರಲ್ಲಿ, ಧೀರೂಭಾಯಿ ಅಂಬಾನಿ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಒಳಗಾದರು.ಈ 24 ಗಂಟೆಗಳು ಅಂಬಾನಿ ಕುಟುಂಬಕ್ಕೆ ತುಂಬಾ ಕಷ್ಟಕರವಾಗಿತ್ತು.
ಮುಖೇಶ್ ಅಂಬಾನಿ ಎಂದಿಗೂ ಹಣದ ಬಗ್ಗೆ ಹೆಮ್ಮೆಪಡಲಿಲ್ಲ.ಅವರು ಮೊದಲಿನಿಂದಲೂ ಓದಿನಲ್ಲಿ ಮುಂದಿದ್ದರು. ಜೀವನದಲ್ಲಿ ಹೆಚ್ಚು ಹಣ ಗಳಿಸುವುದು ಅವರ ಗುರಿಯಾಗಿರಲೇ ಇಲ್ಲ. ಬದಲಿಗೆ ಅವರು ಸವಾಲುಗಳನ್ನು ತೆಗೆದುಕೊಳ್ಳುವುದನ್ನು ನಂಬಿದ್ದರು.
ತನ್ನ ತಂದೆಯ ವ್ಯವಹಾರದ ಜವಾಬ್ದಾರಿ ವಹಿಸಿಕೊಂಡಾಗಿನಿಂದ ಅದನ್ನು ಎತ್ತರಕ್ಕೆ ಬೆಳೆಸುವುದಷ್ಟೇ ಅವರ ಗುರಿಯಾಗಿತ್ತು. ಇಷ್ಟೆಲಾ ಇದ್ದರೂ ತನ್ನ ಕುಟುಂಬಕ್ಕೆ ಸಮಯ ನೀಡುವುದನ್ನು ಕೂಡಾ ಅವರು ಎಂದಿಗೂ ಮರೆಯಲಿಲ್ಲ.
ಮುಖೇಶ್ ಅಂಬಾನಿ ತಮ್ಮ ಕಾಲೇಜು ದಿನಗಳಿಂದಲೂ ರಿಲಯನ್ಸ್ ಇಂಡಸ್ಟ್ರೀಸ್ ಕಚೇರಿಯಲ್ಲಿ ಕೆಲಸ ಕಲಿಯಲು ಪ್ರಾರಂಭಿಸಿದರು.ಬೆಳಗ್ಗೆ ಕಾಲೇಜು ಮುಗಿಸಿ ರಿಲಯನ್ಸ್ ಕಚೇರಿ ತಲುಪಿ ಅಲ್ಲಿನ ಕೆಲಸ ಕಲಿಯುತ್ತಿದ್ದರು.
ಕಾಲೇಜಿನಲ್ಲಿ ಗೆಳೆಯರು ಹೊರಗೆ ಸುತ್ತಾಡಲು ಹೋಗುತ್ತಿದ್ದರೆ, ಮುಖೇಶ್ ರಿಲಯನ್ಸ್‌ನಲ್ಲಿ ಕೆಲಸ ಕಲಿಯುತ್ತಿದ್ದರು.ಇವರಿಗೆ ತಮ್ಮ ತಂದೆಯೇ ರೋಲ್ ಮಾಡೆಲ್.ಅವರು ತೋರಿಸಿದ ಮಾರ್ಗವನ್ನು ಅನುಸರಿಸಿದರು.
ಮುಖೇಶ್ ಅಂಬಾನಿ ಗುಜರಾತಿ ಕುಟುಂಬದಿಂದ ಬಂದವರು,ಆದರೆ ಅವರು ದಕ್ಷಿಣ ಭಾರತದ ಖಾದ್ಯಗಳನ್ನು ಇಷ್ಟಪಡುತ್ತಾರೆ.