Top Multibagger stocks: ಕಳೆದ ವಾರದ ವಹಿವಾಟಿನಲ್ಲಿ ಕೆಲವು ಷೇರುಗಳು ಹೂಡಿಕೆದಾರರಿಗೆ ಭರ್ಜರಿ ಲಾಭವನ್ನು ತಂದುಕೊಟ್ಟಿವೆ. ಈ ಷೇರುಗಳು 52-ವಾರಗಳ ಹೊಸ ಗರಿಷ್ಠ ಮಟ್ಟವನ್ನು ತಲುಪುವ ಮೂಲಕ ಹೂಡಿಕೆದಾರರ ಜೇಬು ಭರ್ತಿ ಮಾಡಿವೆ.
Multibagger stocks: ಕಳೆದ ಶುಕ್ರವಾರ ದೇಶಿಯ ಷೇರುಪೇಟೆ ಸೂಚ್ಯಂಕಗಳು (NSE & BSE) ಇಳಿಕೆಯೊಂದಿಗೆ ಆರಂಭವಾದರೂ, ದಿನದ ಅಂತ್ಯಕ್ಕೆ ಚೇತರಿಕೆ ಕಂಡು ಉತ್ತಮ ಲಾಭದಲ್ಲಿ ವಹಿವಾಟು ಮುಗಿಸಿದವು. ಕಳೆದ ವಾರ ಷೇರುಪೇಟೆ ಹೂಡಿಕೆದಾರರಿಗೆ ಮಿಶ್ರ ಫಲಿತಾಂಶಗಳನ್ನು ನೀಡಿದೆ. ಆದರೆ ಅಸ್ಥಿರ ಮಾರುಕಟ್ಟೆ ಹೊರತಾಗಿಯೂ 8 ಸ್ಮಾಲ್-ಕ್ಯಾಪ್ ಷೇರುಗಳು ಉತ್ತಮ ಪ್ರದರ್ಶನ ನೀಡಿದ್ದು, ಶೇ.37ರಷ್ಟು ಲಾಭ ಗಳಿಸಿವೆ. ಈ ಷೇರುಗಳು 52-ವಾರಗಳ ಹೊಸ ಗರಿಷ್ಠ ಮಟ್ಟ ತಲುಪುವ ಮೂಲಕ ಹೂಡಿಕೆದಾರರಿಗೆ ಭರ್ಜರಿ ಲಾಭ ನೀಡಿವೆ. ಈ 8 ಸ್ಮಾಲ್ ಕ್ಯಾಪ್ ಸ್ಟಾಕ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಸೆಂಟಮ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಳೆದೊಂದು ವಾರದಲ್ಲಿ ಶೇ.37ರಷ್ಟು ಲಾಭ ಗಳಿಸಿದೆ. ಈ ಮೂಲಕ 52 ವಾರಗಳ ಹೊಸ ಗರಿಷ್ಠ ಮಟ್ಟ ₹2,381.20ರಲ್ಲಿ ವಹಿವಾಟು ನಡೆಸುತ್ತಿದೆ. ಕಳೆದ ಶುಕ್ರವಾರದ ವಹಿವಾಟಿನಲ್ಲಿ ಈ ಷೇರು ಶೇ.14.24ರಷ್ಟು ಏರಿಕೆ ಕಂಡಿತ್ತು. ಅಂತಿಮವಾಗಿ 2,280 ರೂ.ಗೆ ಕೊನೆಗೊಂಡಿದೆ. ಈ ಕಂಪನಿಯ ಮಾರುಕಟ್ಟೆ ಮೌಲ್ಯ ಪ್ರಸ್ತುತ 2,940 ಕೋಟಿ ರೂ.ನಷ್ಟಿದೆ.
ಸನ್‌ಫ್ಲಾಗ್ ಐರನ್ ಅಂಡ್ ಸ್ಟೀಲ್ ಕಂಪನಿಯ ಷೇರುಗಳು ಕಳೆದ ವಾರದಲ್ಲಿ ಶೇ.27ರಷ್ಟು ಆದಾಯ ನೀಡಿದೆ. ಈ ಷೇರು 52 ವಾರಗಳ ಹೊಸ ಗರಿಷ್ಠ ಮಟ್ಟವಾದ ₹280ಕ್ಕೆ ತಲುಪಿದೆ. ಕಳೆದ ಶುಕ್ರವಾರದ ವಹಿವಾಟಿನಲ್ಲಿ ಈ ಷೇರು ಶೇ.6.69ರಷ್ಟು ಏರಿಕೆ ಕಂಡು 273.50ಕ್ಕೆ ಸ್ಥಿರವಾಗಿದೆ. ಈ ಕಂಪನಿಯ ಮಾರುಕಟ್ಟೆ ಮೌಲ್ಯ ₹4950 ಕೋಟಿ ರೂ.ನಷ್ಟು ಇದೆ.
ಗೋಕುಲ್ ದಾಸ್ ಎಕ್ಸ್‌ಪೋರ್ಟ್ಸ್ ಕಂಪನಿಯ ಷೇರುಗಳು ಕಳೆದ ವಾರದಲ್ಲಿ ಶೇ.23.4ರಷ್ಟು ಲಾಭ ನೀಡಿವೆ. ಈ ಷೇರು 52 ವಾರಗಳ ಹೊಸ ಗರಿಷ್ಠ ಮಟ್ಟ ₹1,210ರಲ್ಲಿ ವಹಿವಾಟು ನಡೆಸುತ್ತಿದೆ. ಶುಕ್ರವಾರದ ವಹಿವಾಟಿನಲ್ಲಿ ಈ ಷೇರು ಶೇ.6.29ರಷ್ಟು ಏರಿಕೆ ಕಂಡಿದೆ. ಅಂತಿಮವಾಗಿ ₹1201.85ರಲ್ಲಿ ಕ್ಲೋಸ್ ಆಯಿತು. ಈ ಕಂಪನಿಯ ಮಾರುಕಟ್ಟೆ ಮೌಲ್ಯ 8,580 ಕೋಟಿ ರೂ. ಇದೆ.
ಗ್ರೀವ್ಸ್ ಕಾಟನ್ ಸ್ಟಾಕ್ ಕಳೆದ ವಾರದಲ್ಲಿ ಹೂಡಿಕೆದಾರರಿಗೆ ಶೇ.22ರಷ್ಟು ಆದಾಯ ನೀಡಿದೆ. ಕಳೆದ ಶುಕ್ರವಾರ ಈ ಷೇರು ಶೇ.0.32ರಷ್ಟು ಕುಸಿದು 241.24 ರೂ.ಗೆ ವಹಿವಾಟು ಮುಗಿಸಿದೆ. ಶುಕ್ರವಾರ ಈ ಕಂಪನಿಯ ಮಾರುಕಟ್ಟೆ ಮೌಲ್ಯ ₹5,610 ಕೋಟಿಯಷ್ಟಿದೆ.
ಕಳೆದ ವಾರದಲ್ಲಿ ಕೀಟೆಕ್ಸ್ ಗಾರ್ಮೆಂಟ್ಸ್ ಷೇರು ಶೇ.22ರಷ್ಟು ಏರಿಕೆ ಕಂಡಿವೆ. ಈ ಷೇರುಗಳು 52 ವಾರಗಳ ಹೊಸ ಗರಿಷ್ಠ ಮಟ್ಟ ₹879.10ಕ್ಕೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಈ ಷೇರು ಶೇ.5ರಷ್ಟು ಲಾಭ ನೀಡಿದ್ದು, ₹871ಕ್ಕೆ ಕೊನೆಗೊಂಡಿದೆ. ಈ ಕಂಪನಿಯ ಮಾರುಕಟ್ಟೆ ಮೌಲ್ಯ 5,790 ಕೋಟಿ ರೂ.ನಷ್ಟಿದೆ.
ಗುಜರಾತ್ ಇಂಡಸ್ಟ್ರೀಸ್ ಪವರ್ ಲಿ. ಕಂಪನಿಯ ಷೇರುಗಳು ಕಳೆದ ವಾರದಲ್ಲಿ ಶೇ.17.2ರಷ್ಟು ಏರಿಕೆಯಾಗಿದ್ದು, 52 ವಾರಗಳ ಗರಿಷ್ಠ ಮಟ್ಟ ₹270ಕ್ಕೆ ತಲುಪಿತ್ತು. ಕಳೆದ ವಹಿವಾಟಿನ ದಿನದಂದು ಶೇ.0.05ರಷ್ಟು ಏರಿಕೆ ಕಂಡ ಈ ಷೇರು ₹248ರಲ್ಲಿ ಮುಕ್ತಾಯವಾಯಿತು. ಈ ಕಂಪನಿಯ ಮಾರುಕಟ್ಟೆ ಮೌಲ್ಯ 3,750 ಕೋಟಿ ರೂ. ಇದೆ.
ಇಂಡೋ ಕೌಂಟ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಷೇರುಗಳು ಕಳೆದ ವಾರದಲ್ಲಿ ಶೇ.17ರಷ್ಟು ಏರಿಕೆ ಕಂಡಿದೆ. ಇದರೊಂದಿಗೆ ಹೊಸ 52 ವಾರಗಳ ಗರಿಷ್ಠ 450.45 ರೂ. ಮುಟ್ಟಿದೆ. ಕಳೆದ ಶುಕ್ರವಾರದ ವಹಿವಾಟಿನಲ್ಲಿ ಶೇ.4.29ರಷ್ಟು ಏರಿಕೆ ಕಂಡ ಈ ಷೇರು 400 ರೂ.ಗೆ ಮುಕ್ತಾಯವಾಯಿತು. ಈ ಕಂಪನಿಯ ಮಾರುಕಟ್ಟೆ ಮೌಲ್ಯ 7,912 ಕೋಟಿ ರೂ. ಇದೆ.
ವಿಧಿ ಸ್ಪೆಷಾಲಿಟಿ ಫುಡ್ ಇನ್‌ಗ್ರಿಡಿಯೆಂಟ್ಸ್ ಲಿ. ಷೇರು ಕಳೆದ ವಾರದಲ್ಲಿ ಶೇ.15.5ರಷ್ಟು ಲಾಭ ಗಳಿಸಿದೆ. ಈ ಷೇರುಗಳು 52 ವಾರಗಳ ಗರಿಷ್ಠ ಮಟ್ಟ ₹569.55ಕ್ಕೆ ತಲುಪಿದೆ. ಕಳೆದ ಶುಕ್ರವಾರ ಈ ಷೇರು ಶೇ.7.5ರಷ್ಟು ಏರಿಕೆಯೊಂದಿಗೆ 563.40ರಲ್ಲಿ ಕ್ಲೋಸ್ ಆಗಿದೆ. ಈ ಕಂಪನಿಯ ಮಾರುಕಟ್ಟೆ ಮೌಲ್ಯ 2,800 ಕೋಟಿ ರೂ.ನಷ್ಟಿದೆ.