ಇಲ್ಲೊಂದು ರಹಸ್ಯಮಯ ದೇವಾಲಯ; ಮಳೆ ಯಾವಾಗ ಸುರಿಯಲಿದೆ ಎಂಬ ನಿಖರ ಮಾಹಿತಿ ಸಿಗುತ್ತಂತೆ

ಈ ದೇವಾಲಯದ ಛಾವಣಿಯಿಂದ ಬೀಳುವ ನೀರ ಹನಿಗಳ ಬಗ್ಗೆ ವಿಜ್ಞಾನಿಗಳು ಮತ್ತು ಪುರಾತತ್ತ್ವಜ್ಞರು ಕೂಡಾ ಪರೀಕ್ಷೆ ನಡೆಸಿದ್ದಾರೆ. ಆದರೆ ಇದುವರೆಗೂ ಈ ರಹಸ್ಯ ರಹಸ್ಯವಾಗಿಯೇ ಉಳಿದಿದೆ. 

ಉತ್ತರಪ್ರದೇಶ : ಉತ್ತರಪ್ರದೇಶದ ಕಾನ್ಪುರ್ ಜಿಲ್ಲೆಯಲ್ಲಿ ಒಂದು ದೇವಾಲಯವಿದೆ. ಇದ್ದಕ್ಕಿದ್ದಂತೆ ಈ ದೇವಾಲಯದ ಛಾವಣಿಯಿಂದ ನೀರು ಬೀಳು ಆರಂಭವಾಗುತ್ತದೆ. ಮಳೆ ಬೀಳುತ್ತಿದ್ದಂತೆ ಮತ್ತೆ ಈ ನೀರ ಹನಿ ನಿಂತು ಬಿಡುತ್ತವೆ.  ಈ ದೇವಾಲಯವು ಕಾನ್ಪುರ ಜಿಲ್ಲೆಯ ಭಿತಾರ್‌ಗಾಂವ್ ಪ್ರದೇಶದಿಂದ ನಿಖರವಾಗಿ ಮೂರು ಕಿಲೋಮೀಟರ್ ದೂರದಲ್ಲಿರುವ ಬೆಹ್ತಾ ಗ್ರಾಮದಲ್ಲಿದೆ. ಈ ಪುರಾತನ ದೇವಾಲಯದಲ್ಲಿ ಜಗನ್ನಾಥನನ್ನು ಪೂಜಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಈ ದೇವಾಲಯದ ಛಾವಣಿಯಿಂದ ಬೀಳುವ ನೀರ ಹನಿಗಳ ಬಗ್ಗೆ ವಿಜ್ಞಾನಿಗಳು ಮತ್ತು ಪುರಾತತ್ತ್ವಜ್ಞರು ಕೂಡಾ ಪರೀಕ್ಷೆ ನಡೆಸಿದ್ದಾರೆ. ಆದರೆ ಇದುವರೆಗೂ ಈ ರಹಸ್ಯ ರಹಸ್ಯವಾಗಿಯೇ ಉಳಿದಿದೆ.  ನಿಜ ಹೇಳಬೇಕೆಂದರೆ ಶತಮಾನಗಳಿಂದ ಈ ದೇವಾಲಯದಲ್ಲಿ ರಹಸ್ಯ ಅಡಗಿದೆ.  

2 /5

 ಈ ದೇವಾಲಯ 5000 ವರ್ಷಗಳಷ್ಟು ಹಳೆಯ ಇತಿಹಾಸವನ್ನು ಹೊಂದಿದೆ. ಇಲ್ಲಿ ಭಗವಾನ್ ಜಗನ್ನಾಥ್, ಬಲರಾಮ ಮತ್ತು ಸುಭದ್ರಾ ದೇವಿಯನ್ನು ಪೂಜಿಸಲಾಗುತ್ತದೆ.  ಇವುಗಳಲ್ಲದೆ ದೇವಾಲಯದಲ್ಲಿ ಪದ್ಮನಾಭ ವಿಗ್ರಹವನ್ನೂ ಸ್ಥಾಪಿಸಲಾಗಿದೆ.  

3 /5

ಸ್ಥಳೀಯ ನಿವಾಸಿಗಳ ಪ್ರಕಾರ, ದೇವಾಲಯದ ಛಾವಣಿಯಿಂದ ಹನಿಗಳು ಬೀಳುತ್ತಿದ್ದಂತೆ ಮುಂಗಾರು ಆಗಮನವಾಗುತ್ತದೆ ಎಂಬ ಸಂದೇಶ ಸಿಗುತ್ತದೆಯಂತೆ. ಈ  ದೇವಾಲಯದ ಛಾವಣಿಯಿಂದ ಬೀಳುವ ಹನಿಗಳ ಪ್ರಕಾರವೇ ಮಳೆ ಕೂಡ ಬೀಳುತ್ತದೆ ಎಂದು ಹೇಳಲಾಗುತ್ತದೆ.   

4 /5

ಈ ದೇವಾಲಯದ ಗುಮ್ಮಟದಿಂದ ಹನಿಗಳು ಯಾವ ಪ್ರಮಾಣದಲ್ಲಿ ಬೀಳುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಮಳೆಯಾಗುತ್ತದೆಯಂತೆ. ಅಂದರೆ ಗುಮ್ಮಟದಿಂದ ಬೀಳುವ ಹನಿ ಕಡಿಮೆಯಾಗಿದ್ದರೆ, ಮಳೆ ಕಡಿಮೆಯಾಗುತ್ತದೆ ಎಂದರ್ಥ. ಅದೇ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಹನಿ ಬೀಳಲು ಶುರು ಮಾಡಿದರೆ, ಆ ವರ್ಷ ಮಳೆ ಕೂಡಾ ಭಾರೀ ಪ್ರಮಾಣದಲ್ಲಿ ಆಗುತ್ತದೆ ಎಂದರ್ಥ. ಇದರ ಪ್ರಕಾರ ಈ ಬಾರಿ ಕಡಿಮೆ ಮಳೆಯಾಗುತ್ತದೆ ಎನ್ನುತ್ತಾರೆ ಈ ದೇವಾಲಯದ ಅರ್ಚಕರು. 

5 /5

ಜಗನ್ನಾಥ ದೇವಾಲಯವು ಪುರಾತತ್ತ್ವ ಇಲಾಖೆಯ ಅಧೀನದಲ್ಲಿದೆ. ಒರಿಸ್ಸಾದ ಪುರಿಯ ಜಗನ್ನಾಥ ದೇವಸ್ಥಾನದಲ್ಲಿ ರಥಯಾತ್ರೆ ಪ್ರಾರಂಭವಾಗುವಂತೆಯೇ, ಅದೇ ರೀತಿ ರಥಯಾತ್ರೆಯನ್ನು ಇಲ್ಲಿಯೂ ನಡೆಸಲಾಗುತ್ತದೆ. ಕಾನ್ಪುರ ಪುರಾತತ್ವ ಇಲಾಖೆಯ ಅಧಿಕಾರಿಯ ಪ್ರಕಾರ, ಈ ದೇವಾಲಯವನ್ನು 11 ನೇ ಶತಮಾನದಲ್ಲಿ ಜೀರ್ಣೋದ್ದಾರಗೊಳಿಸಲಾಗಿತ್ತು.