ಐಪಿಎಲ್ 2022ರ ಸೀಸನ್ ಸಾಕಷ್ಟು ದಾಖಲೆಗಳಿಗೆ ಸಾಕ್ಷಿಯಾಗಿದೆ. ಐಪಿಎಲ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ, ಒಂದು ಸೀಸನ್‌ನಲ್ಲಿ 1000 ಕ್ಕೂ ಹೆಚ್ಚು ಸಿಕ್ಸರ್‌ಗಳು ಬಾರಿಸಲಾಗಿದೆ. ಒಟ್ಟಾರೆ ಈ ಒಂದು ಸೀಸನ್‌ನಲ್ಲಿ ಅಭಿಮಾನಿಗಳು 1054 ಸಿಕ್ಸರ್‌ಗಳನ್ನು ನೋಡಿದ್ದಾರೆ. ಜೋಸ್ ಬಟ್ಲರ್ 45 ಸಿಕ್ಸರ್‌ಗಳನ್ನು ಬಾರಿಸಿದ್ದರು.
ಅದರಲ್ಲಿ 5 ಸಿಕ್ಸರ್‌ಗಳು ಅಭಿಮಾನಿಗಳ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಸಿಕ್ಸರ್‌ಗಳ ಲೆಂಗ್ತ್ ನೋಡಿ ಎಲ್ಲರೂ ಬೆರಗಾಗಿದ್ದಾರೆ. ಇದೀಗ ಈ ಋತುವಿನ 5 ಅತೀ ಉದ್ದದ ಸಿಕ್ಸರ್‌ಗಳು ಯಾವುವು ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.
ಐಪಿಎಲ್ 2022ರ ಅತಿ ಉದ್ದದ ಸಿಕ್ಸರ್ ಅನ್ನು ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಲಿಯಾಮ್ ಲಿವಿಂಗ್ಸ್ಟೋನ್ ಹೊಡೆದಿದ್ದಾರೆ. ಲಿಯಾಮ್ ಲಿವಿಂಗ್‌ಸ್ಟೋನ್, ಮೊಹಮ್ಮದ್ ಶಮಿ ಅವರು ಎಸೆದ ಬಾಲ್‌ನಲ್ಲಿ ಸಿಕ್ಸ್ ಬಾರಿಸಿದ್ದು, ಲೆಂಗ್ತ್ 117 ಮೀಟರ್ ಆಗಿದೆ.
ಮುಂಬೈ ಇಂಡಿಯನ್ಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಈ ಸೀಸನ್‌ನಲ್ಲಿ ಎರಡನೇ ಅತಿ ಉದ್ದದ ಸಿಕ್ಸರ್ ಬಾರಿಸಿದ್ದಾರೆ. ಅವರು ಟಿ ನಟರಾಜನ್ ಎಸೆದ ಬಾಲ್‌ನಲ್ಲಿ ಸಿಕ್ಸರ್ ಬಾರಿಸಿದ್ದು, 114 ಮೀಟರ್ ದೂರ ಸಾಗಿದೆ.
ಅತಿ ಉದ್ದದ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 19 ವರ್ಷದ ಡೆವಾಲ್ಡ್ ಬ್ರೆವಿಸ್ ಕೂಡ ಸೇರಿದ್ದಾರೆ. ರಾಹುಲ್ ಚಹಾರ್ ಎಸೆತದಲ್ಲಿ ಡೆವಾಲ್ಡ್ ಬ್ರೆವಿಸ್ 112 ಮೀಟರ್‌ಗಳ ಸಿಕ್ಸರ್ ಬಾರಿಸಿದ್ದಾರೆ. ರಾಹುಲ್ ಚಹಾರ್ ಅವರು ಒಂದು ಓವರ್‌ನಲ್ಲಿ 4 ಸಿಕ್ಸರ್‌ಗಳನ್ನು ಬಾರಿಸಿ ಐಪಿಎಲ್ ಪ್ರಿಯರ ಗಮನ ಸೆಳೆದಿದ್ದಾರೆ.
ಐಪಿಎಲ್ 2022ರ ನಾಲ್ಕನೇ ಅತಿ ಉದ್ದದ ಸಿಕ್ಸರ್ ಅನ್ನು ಸಹ ಲಿಯಾಮ್ ಲಿವಿಂಗ್ಸ್ಟೋನ್ ಹೊಡೆದಿದ್ದಾರೆ. ಅವರು ಚೆನ್ನೈ ಸೂಪರ್ ಕಿಂಗ್ಸ್ ಬೌಲರ್ ಮುಖೇಶ್ ಚೌಧರಿ ಅವರ ಎಸೆತದಲ್ಲಿ 108 ಮೀಟರ್ ಸಿಕ್ಸರ್ ಬಾರಿಸಿದ್ದರು.
ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಕೂಡ ಈ ಋತುವಿನಲ್ಲಿ 108 ಮೀಟರ್‌ಗಳ ಸಿಕ್ಸರ್ ಬಾರಿಸಿದ್ದರು. ಮಾರಣಾಂತಿಕ ವೇಗದ ಬೌಲರ್ ಎನ್ರಿಕ್ ನಾರ್ಕಿಯಾ ಅವರ ಎಸೆತದಲ್ಲಿ ನಿಕೋಲಸ್ ಪೂರನ್ ಈ ಸುದೀರ್ಘ ಸಿಕ್ಸರ್ ಬಾರಿಸಿದ್ದಾರೆ.