ಹಾರ್ದಿಕ್ ಪಾಂಡ್ಯ ಜೊತೆ ನತಾಶಾ VIRAL PICS

ಈ ವೈರಲ್ ಫೋಟೋಗಳಲ್ಲಿ ನತಾಶಾ ಅವರು ಹಾರ್ದಿಕ್ ಪಾಂಡ್ಯ ಜೊತೆಗೆ ಬೀಚ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Jan 15, 2020, 01:28 PM IST

ನವದೆಹಲಿ: ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಅವರು ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡರು. ಇದೀಗ ಪಾಂಡ್ಯ ತಮ್ಮ ಗರ್ಲ್ ಫ್ರೆಂಡ್ ನತಾಶಾ ಸ್ಟಾಂಕೋವಿಕ್ (Natasa Stankovic) ಅವರ ಕೆಲವು ಚಿತ್ರಗಳು ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈ ಫೋಟೋಗಳನ್ನು ನತಾಶಾ ಸೋಮವಾರ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ವೈರಲ್ ಫೋಟೋಗಳಲ್ಲಿ ನತಾಶಾ ತನ್ನ ನಿಶ್ಚಿತ ವರ ಹಾರ್ದಿಕ್ ಪಾಂಡ್ಯ ಜೊತೆಗೆ ಬೀಚ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 
 

1/5

ಜನವರಿ 1 ರಂದು ನಿಶ್ಚಿತಾರ್ಥ ಮಾಡಿಕೊಂಡ ಜೋಡಿ

ಹಾರ್ದಿಕ್ ಪಾಂಡ್ಯ ಜನವರಿ 1 ರಂದು ಸೆರ್ಬಿಯಾದ ನಟಿ ನತಾಶಾ ಸ್ಟಾಂಕೋವಿಕ್ ಅವರೊಂದಿಗೆ ನಿಶ್ಚಿತಾರ್ಥದ ಸುದ್ದಿ ನೀಡುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.

2/5

ಸೋಷಿಯಲ್ ಮೀಡಿಯಾ ಮೂಲಕ ಪ್ರಕಟ

ನತಾಶಾ ಅವರೊಂದಿಗಿನ ನಿಶ್ಚಿತಾರ್ಥವನ್ನು ಪಾಂಡ್ಯ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಪ್ರಕಟಿಸಿದ್ದಾರೆ.

3/5

ಇನ್ಸ್ಟಾ ಪೋಸ್ಟ್ನಲ್ಲಿ...

ನತಾಶಾ ಅವರ ಚಿತ್ರವನ್ನು ತನ್ನ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಹಾರ್ದಿಕ್, "ಮೇ ತೇರಾ, ತು ಮೇರಿ, ಜಾನೆ ಸಾರಾ ಹಿಂದೂಸ್ತಾನ್ 01.01.2020. ನಿಶ್ಚಿತಾರ್ಥ" ಎಂದು ಬರೆದಿದ್ದಾರೆ.  

4/5

ಇನ್ಸ್ಟಾಗ್ರಾಮ್ನಲ್ಲಿ ಸಕ್ರಿಯರಾಗಿರುವ ನತಾಶಾ

ನತಾಶಾ ಸ್ಟಾಂಕೋವಿಚ್ ಇನ್ಸ್ಟಾಗ್ರಾಮ್ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ಹಲವು ಫೋಟೋಗಳನ್ನೂ ಅದರಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

5/5

13 ಲಕ್ಷ ಇನ್ಸ್ಟಾ ಅನುಯಾಯಿಗಳು

ನತಾಶಾ ಹಂಚಿಕೊಂಡ ಕೂಡಲೇ, ಆಕೆಯ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ ಮತ್ತು ಈ ಬಾರಿ ಕೂಡ ಅವರು ತಮ್ಮ ಚಿತ್ರವನ್ನು ಹಂಚಿಕೊಂಡಾಗ, ಅದು ಕೂಡ ಹೆಚ್ಚು ವೈರಲ್ ಆಯಿತು. ನತಾಶಾ 13 ಲಕ್ಷ ಇನ್ಸ್ಟಾ ಫಾಲೋವರ್ಸ್ ಹೊಂದಿದ್ದಾರೆ. (ಫೋಟೊ ಕೃಪೆ: ಈ ಗ್ಯಾಲರಿಯಲ್ಲಿ ಬಳಸಲಾದ ಎಲ್ಲಾ ಫೋಟೋಗಳನ್ನು ನತಾಶಾ ಸ್ಟಾಂಕೋವಿಚ್ ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದ ತೆಗೆದುಕೊಳ್ಳಲಾಗಿದೆ)