ನಿಮ್ಮ ಮಕ್ಕಳಲ್ಲಿ ಕಂಡು ಬರುವ ಇಂತಹ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ

ಈ ಓಟದ ಜೀವನ ಶೈಲಿಯಲ್ಲಿ ಮಕ್ಕಳ ಜೀವನವನ್ನು, ತಮ್ಮ ಭವಿಷ್ಯವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಹಗಲಿರುಳೆನ್ನದೆ ದುಡಿಯುವ ಪೋಷಕರು ತಮಗೆ ಗೊತ್ತೋ ಗೊತ್ತಿಲ್ಲದೆಯೂ ಮಕ್ಕಳಲ್ಲಿ ಕಂಡು ಬರುವ ಕೆಲವು ಲಕ್ಷಣಗಳನ್ನು ನಿರ್ಲಕ್ಷಿಸುತ್ತೇವೆ. 

ಮಕ್ಕಳ ಸ್ವಭಾವವು ಇದ್ದಕ್ಕಿದ್ದಂತೆ ಬದಲಾಗುವುದು ಸಹಜವೇ. ಮಕ್ಕಳ ಸುತ್ತಮುತ್ತಲಿನ ವಾತಾವರಣ ಮಕ್ಕಳ ಮನಸ್ಸಿನ ಮೇಲೆ ತುಂಬಾ ಬಲವಾದ ಪರಿಣಾಮವನ್ನು ಬೀರುತ್ತದೆ. ಇದು ಮಕ್ಕಳ ನಡವಳಿಕೆಯ ಮೇಲೂ ಕಂಡು ಬರುತ್ತದೆ. ಆದರೆ, ಇಂದಿನ ಬಿಡುವಿಲ್ಲದ ದಿನಚರಿಯಲ್ಲಿ, ಪೋಷಕರಿಗೆ ತಮ್ಮ ಮಕ್ಕಳೊಂದಿಗೆ ಸಮಯ ಕಳೆಯಲು ಸಾಕಷ್ಟು ಸಮಯವಿಲ್ಲ. ಆದರೆ, ಇದರಿಂದಾಗಿ ಮಕ್ಕಳಲ್ಲಿ ಕಂಡುಬರುವ ರೋಗ ಲಕ್ಷಣಗಳ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಈ ಫೋಟೋ ಗ್ಯಾಲರಿಯಲ್ಲಿ ಅಂತಹ ಕೆಲವು ಸಂಗತಿಗಳ ಬಗ್ಗೆ ತಿಳಿಸಲಿದ್ದೇವೆ. ನಿಮ್ಮ ಮಕ್ಕಳಲ್ಲಿಯೂ ಇಂತಹ ಲಕ್ಷಣಗಳು ಕಂಡು ಬಂದರೆ ಇದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ನಿಮ್ಮ ಮಕ್ಕಳು ಟೆನ್ಷನ್‌ನಲ್ಲಿ ಇರುವುದನ್ನು ನೀವು ಗಮನಿಸಿದರೆ ಮಗುವಿನ ಜೊತೆ ಕುಳಿತು ಸಮಾಧಾನದಿಂದ ಅವರ ಒತ್ತಡಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ಪ್ರಯತ್ನಿಸಿ. ಒಂದೆರಡು ಬಾರಿಗೆ ಮಕ್ಕಳು ನಿಮಗೆ ಸರಿಯಾಗಿ ಉತ್ತರಿಸದೇ ಇರಬಹುದು. ಹಾಗಂತ ಅವರನ್ನು ಸುಮ್ಮನೆ ಬಿಡಬೇಡಿ, ಮಕ್ಕಳೊಂದಿಗೆ ಮಗುವಾಗಿ ಬೆರೆತರೆ ಖಂಡಿತ ಅವರು ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳುತ್ತಾರೆ. 

2 /5

ಕೆಲವೊಮ್ಮೆ ಮಕ್ಕಳು ತಮಗೆ ಗಮನ ಕೊಡುತ್ತಿಲ್ಲ ಎಂದು ಭಾವಿಸಿದಾಗ, ಇಲ್ಲವೇ ತಕ್ಷಣವೇ ನಾವು ಹೇಳಿದ್ದನ್ನು ಕೇಳಬೇಕು ಎಂಬ ಉದ್ದೇಶದಿಂದ ನಾಟಕೀಯ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಜೋರಾಗಿ ಅಳುವುದು, ಕೂಗುವುದು ಹೀಗೆ ಬೇರೆ ಬೇರೆ ರೀತಿಯಲ್ಲಿ ಪೋಷಕರ ಗಮನ ಸೆಳೆಯುತ್ತಾರೆ. ಇದು  ನೀವು ಮಗುವಿನ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದರ ಸಂಕೇತವಾಗಿದೆ. ಇದನ್ನು ತಪ್ಪಿಸಲು ಮಕ್ಕಳಿಗೆ ಸಮಯವನ್ನು ನೀಡಿ, ಅವರೊಂದಿಗೆ ಮಾತನಾಡಿ, ಸರಿ-ತಪ್ಪುಗಳ ಬಗ್ಗೆ ನಿಧಾನವಾಗಿ ಅವರಿಗೆ ಅರಿವು ಮೂಡಿಸುವುದು ಹೆಚ್ಚು ಪ್ರಯೋಜನಕಾರಿ ಆಗಿದೆ. 

3 /5

ಪೋಷಕರು ಕೆಲಸಕ್ಕೆ ಹೋಗುವುದನ್ನು ತಪ್ಪಿಸಲು, ಇಲ್ಲವೇ ತಮ್ಮ ತಂದೆ-ತಾಯಿ ತಮ್ಮೊಂದಿಗೇ  ಹೆಚ್ಚಿನ ಸಮಯ ಕಳೆಯಬೇಕು ಎಂಬ ಆಸೆಯಿಂದ ಮಕ್ಕಳು ಹೆಚ್ಚಾಗಿ ಸುಮ್ಮ ಸುಮ್ಮನೆ ಅನಾರೋಗ್ಯದ ನೆಪ ಒಡ್ಡುತ್ತಾರೆ. ನಿಮ್ಮ ಮಗು ಕೂಡ ಈ ರೀತಿ ಮಾಡುತ್ತಿದ್ದರೆ, ನೀವು ಪ್ರೀತಿಯಿಂದ ಮಗುವಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸಿ. ಮಾತ್ರವಲ್ಲ, ಮಗುವಿಗೆ ನಿಮ್ಮ ಅತಿಯಾದ ಅವಶ್ಯಕತೆ ಇದೆ ಎಂಬುದನ್ನೂ ಅರ್ಥ ಮಾಡಿಕೊಂಡು, ಸಾಧ್ಯವಾದಷ್ಟು ಅವರಿಗೆ ಹೆಚ್ಚಿನ ಸಮಯವನ್ನು ನೀಡಿ. 

4 /5

ತಂದೆ ತಾಯಿಗೆ ಪ್ರೀತಿ ಸಿಗದಿದ್ದಾಗ ಮಗು ಮನೆಯ ಇತರ ಮಕ್ಕಳ ಬಗ್ಗೆ ಅಸೂಯೆ ಪಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮಗು ತನ್ನ ಸ್ವಂತ ಸಹೋದರ ಅಥವಾ ಸಹೋದರಿಯ ಬಗ್ಗೆಯೂ ಹೊಟ್ಟೆ ಕಿಚ್ಚನ್ನು ಹೊಂದಿರಬಹುದು. ಮಕ್ಕಳಲ್ಲಿ ಕಂಡು ಬರುವ ಇಂತಹ ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಬದಲಿಗೆ ಅವರಿಗೆ ನೀತಿ ಪಾಠಗಳ ಮೂಲಕ ಸರಿ ತಪ್ಪುಗಳ ಬಗ್ಗೆ ಅರ್ಥ ಮಾಡಿಸಿ. ಮಕ್ಕಳ ಬಗ್ಗೆ ಗಮನ, ಅವರಿಗೆ ಪ್ರೀತಿ ನೀಡುವುದರಿಂದ ಮಾತ್ರವೇ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು. 

5 /5

ಮಕ್ಕಳು ಪೋಷಕರ ಮಾತನ್ನು ಕೇಳುವುದು ಒಳ್ಳೆಯದು. ಇದಕ್ಕಾಗಿ, ಮಕ್ಕಳನ್ನು ಸ್ವಲ್ಪ ಬೆದರಿಕೆಯಲ್ಲಿ ಬೆಳೆಸುವುದು ಕೂಡ ತಪ್ಪಲ್ಲ. ಹಾಗಂತ, ಮಕ್ಕಳು ಯಾವುದೇ ಕೆಲಸ ಮಾಡುವಾಗ ಆಟವಾಡುವಾಗ, ಬೇರೆ ಮಕ್ಕಳೊಂದಿಗೆ ಮಾತನಾಡುವಾಗ ಹೀಗೆ ಎಲ್ಲಾದಕ್ಕೂ ಪೋಷಕರ ಅನುಮತಿ ಪಡೆಯುವುದು ಮಕ್ಕಳ ಆತ್ಮವಿಶ್ವಾಸದ ಕೊರತೆಯನ್ನು ತೋರಿಸುತ್ತದೆ. ಪೋಷಕರ ಮೇಲಿನ ಅತಿಯಾದ ಭಯವೂ ಕೊಡೋಯ ಇದಕ್ಕೆ ಕಾರಣವಾಗಿರಬಹುದು. ಮಕ್ಕಳು ನಿಮಗೆ ಹೆದರುವಂತಿರಬೇಕು. ಆದರೆ, ಯಾವ ವಿಷಯಕ್ಕೆ ಅವರು ಹೆದರಬೇಕು? ಎಲ್ಲಿ ಅವರಿಗೆ ಸ್ವತಂತ್ರವಿರಬೇಕು ಎಂಬುದರ ಬಗ್ಗೆಯೂ ಪೋಷಕರು ಕಾಳಜಿ ವಹಿಸಿ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.