Air charge technology : ಇನ್ನು ವೈಯರ್ ಇಲ್ಲದೆಯೇ ಚಾರ್ಜ್ ಆಗುತ್ತೆ ಮೊಬೈಲ್ ..!

ಮೊಬೈಲ್ ಖರೀದಿಸುವಾಗ, ಸಾಮಾನ್ಯವಾಗಿ ನಾವು ಅದರ ಚಾರ್ಜರ್  ಬಗ್ಗೆಯೂ ತಿಳಿದುಕೊಳ್ಳುತ್ತೇವೆ. .ಶಿಘ್ರದಲ್ಲೇ ಹೊಸ ತಂತ್ರಜ್ಞಾನವೊಂದು ಬರಲಿದೆ. ಇದನ್ನು  ಏರ್ ಚಾರ್ಜ್ ಟೆಕ್ನಾಲಜಿ  ಎಂದು ಕರೆಯಲಾಗುತ್ತಿದೆ. 

Mobile Charging : ಮೊಬೈಲ್ ಖರೀದಿಸುವಾಗ, ಸಾಮಾನ್ಯವಾಗಿ ನಾವು ಅದರ ಚಾರ್ಜರ್ (Charger) ಬಗ್ಗೆಯೂ ತಿಳಿದುಕೊಳ್ಳುತ್ತೇವೆ.  ಮೊಬೈಲ್ ಚಾರ್ಜ್ ಮಾಡುವ ವೇಳೆ ಮೊಬೈಲ್ ಅನ್ನು ತಮ್ಮಿಂದ ದೂರ ಇಡುವುದು ಅದೆಷ್ಟೋ ಜನರಿಗೆ ಕಿರಿಕಿರಿ ಉಂಟು ಮಾಡುತ್ತದೆ. ಇನ್ನು ಮುಂದೆ ಈ ಕಿರಿ ಕಿರಿ ದೂರವಾಗಬಹುದು. ಯಾಕೆಂದರೆ ಮೊಬೈಲ್ ಚಾರ್ಜ್ (Mobile Charge) ಆಗುತ್ತಿರುವಾಗಲೂ ಮೊಬೈಲನ್ನು ನಿಮ್ಮಿಂದ ದೂರ ಇಡಬೇಕಾಗಿಲ್ಲ. ಅಲ್ಲದೆ ಚಾರ್ಜಿಂಗ್ ವೇಳೆ  ವೈಯರ್ ಗೆ ಕನೆಕ್ಟ್ ಮಾಡುವ ಕಿರಿಕಿರಿಯೂ ಇರುವುದಿಲ್ಲ. ಈಗ ವೈಯರ್ ಇಲ್ಲದೆಯೇ ಫೋನ್ ಅನ್ನು ಕೋಣೆಯಲ್ಲಿ ಎಲ್ಲಿ ಬೇಕಾದರೂ ಇರಿಸಿಕೊಂಡು ಚಾರ್ಜ್ ಮಾಡಬಹುದು. 
 

1 /5

ಶಿಘ್ರದಲ್ಲೇ ಹೊಸ ತಂತ್ರಜ್ಞಾನವೊಂದು ಬರಲಿದೆ. ಇದನ್ನು  ಏರ್ ಚಾರ್ಜ್ ಟೆಕ್ನಾಲಜಿ (Air charge technology) ಎಂದು ಕರೆಯಲಾಗುತ್ತಿದೆ. ಇದರ ವಿಶೇಷತೆಯೆಂದರೆ, ನೀವು ಮೊಬೈಲ್ ಅನ್ನು ಚಾರ್ಜಿಂಗ್ ವೈಯರ್ ಗೆ ಕನೆಕ್ಟ್ ಮಾಡಬೇಕಾಗಿಲ್ಲ. ಚಾರ್ಜಿಂಗ್ ವೈಯರ್ ಇಲ್ಲದೆಯೇ ನಿಗದಿತ ದೂರದಲ್ಲಿ ಮೊಬೈಲನ್ನು ಇರಿಸಿ ಚಾರ್ಜ್ ಮಾಡಲು ಸಾಧ್ಯವಾಗುತ್ತದೆ. 

2 /5

ಚೀನಾದ ಮೊಬೈಲ್ ತಯಾರಕ (Xiaomi)ತನ್ನ ಇತ್ತೀಚಿನ ಬ್ಲಾಗ್‌ನಲ್ಲಿ MI Air Charge Technology ಬಗ್ಗೆ ಬಹಿರಂಗಪಡಿಸಿದೆ.  

3 /5

ಈ ತಂತ್ರಜ್ಞಾನದಲ್ಲಿ Space positioning ಮತ್ತು Energy Transmissionಅನ್ನು ಬಳಸಲಾಗಿದೆ. ಇದರಲ್ಲಿ 5 ಫೇಸ್ನ ಅಂಟಾನಾದ ಸಹಾಯದಿಂದ ಮೊಬೈಲ್ ಅನ್ನು ಪತ್ತೆ ಮಾಡಲಾಗುತ್ತದೆ. ನಂತರ Beamforming ಮೂಲಕ ಸಂಪರ್ಕಕಕ್ಕೆ ಬಂದ ಕೂಡಲೇ ಮೊಬೈಲ್ ಚಾರ್ಜ್ ಆಗಲು ಆರಂಭವಾಗುತ್ತದೆ.

4 /5

ಮನೆಯಲ್ಲಿ ಯುಪಿಎಸ್ ಆಕಾರದ ಡಾಕ್ ಅನ್ನು ಇರಿಸಲಾಗುತ್ತದೆ. ಈ ಡಾಕ್‌ನಿಂದ ಚಾರ್ಜ್ ಮಾಡಲು ಸಿಗ್ನಲ್‌ಗಳನ್ನು ಕಳುಹಿಸಲಾಗುತ್ತದೆ. ಈ ಸಿಗ್ನಲ್ ನ ಸಂಪರ್ಕಕ್ಕೆ ಬಂದ ತಕ್ಷಣ ಮೊಬೈಲ್ ಫೋನ್ ಸ್ವಯಂಚಾಲಿತವಾಗಿ ಚಾರ್ಜ್ ಮಾಡಲು ಪ್ರಾರಂಭಿಸುತ್ತದೆ.

5 /5

Apple ಇತ್ತೀಚೆಗೆ ತನ್ನ ಹೊಸ iPhone 12 ನೊಂದಿಗೆ ವೈರ್‌ಲೆಸ್ ಚಾರ್ಜಿಂಗ್ ಅನ್ನು ಪರಿಚಯಿಸಿತ್ತು.  ಈ ತಂತ್ರಜ್ಞಾನದಲ್ಲಿ ಡಾಕ್ ನೀಡಲಾಗಿದ್ದರೂ. ಈ ಡಾಕ್‌ನಲ್ಲಿ ಮೊಬೈಲ್ ಇರಿಸಿದಾಗ ಮಾತ್ರ ಮೊಬೈಲ್ ಚಾರ್ಜ್ ಆಗುತ್ತದೆ.