Happy New Year 2023: ದೇಶದಾದ್ಯಂತ ಹೊಸ ವರ್ಷಾಚರಣೆಯ ಸಂಭ್ರಮ ಹೇಗಿತ್ತು ನೋಡಿ

Happy New Year 2023: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ದೇಶದಾದ್ಯಂತ ಹೊಸ ವರ್ಷವನ್ನು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಬರಮಾಡಿಕೊಳ್ಳಲಾಯಿತು. 12 ಗಂಟೆಯ ಬೆಲ್ ಬಾರಿಸುತ್ತಿದ್ದಂತೆಯೇ ಲಕ್ಷಾಂತರ ಜನರು 2022ಕ್ಕೆ ಗುಡ್ ಬೈ ಹೇಳಿ 2023ನೇ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಿದರು.

Happy New Year celebration 2023: ದೇಶದಾದ್ಯಂತ ವಿಜೃಂಭಣೆಯಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಯಿತು. ಜನರು ಕುಣಿದು ಕುಪ್ಪಳಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದರು. ಕೋವಿಡ್‌ನಿಂದಾಗಿ 2 ವರ್ಷ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿತ್ತು. ಆದರೆ 2022ಕ್ಕೆ ಗುಡ್‍ ಬೈ ಹೇಳುವ ಸಮಯದಲ್ಲಿ ದೇಶದ ವಿವಿಧ ಮಹಾನಗರಗಳಲ್ಲಿ ಲಕ್ಷಾಂತರ ಜನರು ಅತ್ಯಂತ ಸಂಭ್ರಮ-ಸಡಗರದಿಂದ ಹೊಸ ವರ್ಷವನ್ನು ಬರಮಾಡಿಕೊಂಡರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಕೇರಳದ ಕೊಚ್ಚಿ ನಗರದಲ್ಲಿ ಹೊಸ ವರ್ಷಾಚರಣೆಯಂದು ಅಪಾರ ಜನಸ್ತೋಮ ನೆರೆದಿತ್ತು. ಈ ಸಂದರ್ಭದಲ್ಲಿ ಫೋರ್ಟ್ ಕೊಚ್ಚಿಯಲ್ಲಿ ಆಯೋಜಿಸಲಾಗಿದ್ದ ‘ಕೊಚ್ಚಿನ್ ಕಾರ್ನಿವಲ್’ನಲ್ಲಿ ನೂರಾರು ಜನರು ಭಾಗವಹಿಸಿದ್ದರು. ರಾತ್ರಿ 12 ಗಂಟೆಯ ಹೊತ್ತಿಗೆ ಇಡೀ ಕೊಚ್ಚಿ ಸಂಭ್ರಮದಲ್ಲಿ ಮುಳುಗೆದ್ದಿತು.

2 /7

ಗೋವಾದ ರಾಜಧಾನಿ ಪಣಜಿಯಲ್ಲಿ ಹೊಸ ವರ್ಷಾಚರಣೆಯ ಸಂಭ್ರಮ- ಸಡಗರದಿಂದ ಕೂಡಿತ್ತು. ಉತ್ತರ ಭಾರತದ ಕೊರೆಯುವ ಚಳಿಗೆ ವ್ಯತಿರಿಕ್ತವಾಗಿ ಗೋವಾದಲ್ಲಿ ಜನರು ಆಹ್ಲಾದಕರ ವಾತಾವರಣದ ನಡುವೆ ಹೊಸ ವರ್ಷವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಪಣಜಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಜನರು ಸಂಗೀತ ರಾತ್ರಿಯನ್ನು ಆಸ್ವಾದಿಸಿ, ಕುಣಿದು ಕುಪ್ಪಳಿಸಿದರು.

3 /7

ಪರ್ವತಗಳ ರಾಣಿ ಎಂದು ಕರೆಯಲ್ಪಡುವ ಮಸ್ಸೂರಿಯಲ್ಲಿ ವಿಪರಿತ ಚಳಿ ಇದೆ.  ಹೊಸ ವರ್ಷಾಚರಣೆಗೆ ಬಂದಿದ್ದ ಜನರ ಉತ್ಸಾಹವನ್ನು ಈ ಮೈಕೊರೆಯುವ ಚಳಿ ಕುಗ್ಗಿಸಲು ಸಾಧ್ಯವಾಗಲಿಲ್ಲ. ಜನರು ಮಾಲ್ ರಸ್ತೆಯಲ್ಲಿ ತಡರಾತ್ರಿ ಹಾಡು, ನೃತ್ಯದ ಮೂಲಕ 2023ರ ಹೊಸ ವರ್ಷವನ್ನು ಬರಮಾಡಿಕೊಂಡು ಸಂಭ್ರಮಿಸಿದರು.

4 /7

ಮುಂಬೈನ ಮೆರೈನ್ ಡ್ರೈವ್ ಪ್ರದೇಶದಲ್ಲಿ ಸಾವಿರಾರು ಜನರು ಹೊಸ ವರ್ಷವನ್ನು ಆಚರಿಸಿದರು. ಆಹ್ಲಾದಕರ ವಾತಾವರಣದ ನಡುವೆ ಸಂಗೀತ ಸಂಜೆಯಲ್ಲಿ ಜನರು ತಡರಾತ್ರಿಯವರೆಗೂ ನೃತ್ಯ ಮಾಡಿದರು. 12 ಗಂಟೆಯ ಬೆಲ್ ಹೊಡೆಯುತ್ತಿದ್ದಂತೆಯೇ ಜನರು ಹರ್ಷೋದ್ಗಾರದ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದರು.

5 /7

ಹಿಮಾಚಲ ಪ್ರದೇಶದ ಮನಾಲಿಯಲ್ಲಿಯೂ ಇತ್ತೀಚಿನ ದಿನಗಳಲ್ಲಿ ವಿಪರಿತ ಚಳಿ ಹೆಚ್ಚುತ್ತಿದೆ. ಚಳಿಯನ್ನು ಲೆಕ್ಕಿಸದೆ ಸಾವಿರಾರು ಪ್ರವಾಸಿಗರು ಅಲ್ಲಿಗೆ ಭೇಟಿ ನೀಡಿದ್ದು, ಮಧ್ಯರಾತ್ರಿ ಹೊಸ ವರ್ಷಕ್ಕೆ ವೆಲ್‍ಕಮ್‍ ಮಾಡಿ ಸಂಭ್ರಮಿಸಿದರು. ಈ ಸಂದರ್ಭವನ್ನು ಸ್ಮರಣೀಯವಾಗಿಸಲು ಹೆಚ್ಚಿನ ಹೋಟೆಲ್‌ಗಳಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಹಾಡು-ಡ್ಯಾನ್ಸ್ ಮಾಡುವ ಮೂಲಕ ಜನರು ಹೊಸ ವರ್ಷವನ್ನು ಬರಮಾಡಿಕೊಂಡರು.

6 /7

ಭದ್ರತಾ ಪಡೆಗಳ ಯೋಧರೂ ಸಹ ಹೊಸ ವರ್ಷಾಚರಣೆಯಲ್ಲಿ ಹಿಂದೆ ಬಿದ್ದಿಲ್ಲ. ಛತ್ತೀಸ್‌ಗಢದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ನಿಯೋಜಿಸಲಾಗಿರುವ ಸಿಆರ್‌ಪಿಎಫ್‌ನ 74ನೇ ಬೆಟಾಲಿಯನ್‌ನ ಯೋಧರು 2023ರ ಹೊಸ ವರ್ಷವನ್ನು ವಿಶೇಷವಾಗಿ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಬೆಟಾಲಿಯನ್ ವತಿಯಿಂದ ವಿವಿಧ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.   

7 /7

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಲಕ್ಷಾಂತರ ಜನರು ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಹೊಸ ವರ್ಷಾಚರಣೆ ಹಿನ್ನೆಲೆ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ಕಮರ್ಷಿಯಲ್ ಸ್ಟ್ರೀಟ್‌ಗಳು ವಿಶೇಷ ವಿದ್ಯುತ್ ದೀಪಗಳಿಂದ ಕಂಗೊಳಿಸಿದವು. ಆಕಾಶದಲ್ಲಿ ಸಿಡಿದ ಪಟಾಕಿಗಳು ಚಿತ್ತಾರ ಮೂಡಿಸಿದವು. ಹಾಡು, ನೃತೃ, ಶಿಳ್ಳೆ ಚಪ್ಪಾಳೆಯ ಮೂಲಕ ‘ಹ್ಯಾಪಿ ನ್ಯೂ ಇಯರ್’, ‘ಹೊಸ ವರ್ಷದ ಶುಭಾಶಯಗಳು’ ಎಂದು ಹರ್ಷೋದ್ಗಾರದ ಮೂಲಕ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಯಿತು.