ಇನ್ನು ಕರ್ನಾಟಕದಲ್ಲೂ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 156 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,884ಕ್ಕೆ ಏರಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸಾಮಾಜಿಕ ಜಾಲತಾಣ ʼಕೂʼನಲ್ಲಿ ತಿಳಿಸಿದ್ದಾರೆ.
ಮನೆಯೊಂದರ ಬಳಿ ಕಳೆದ ಎರಡು ವರ್ಷಗಳಿಂದ ಅಂಬಾಸಿಡರ್ ಕಾರೊಂದನ್ನು ನಿಲ್ಲಿಸಲಾಗಿತ್ತು. ಕಾರಿನ ಮಾಲೀಕ ಮನೆ ಬೇರೆ ಕಡೆಗೆ ಶಿಫ್ಟ್ ಮಾಡುವಾಗ ಈ ಕಾರನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆಂದು ಸ್ಥಳೀಯರು ಹೇಳುತ್ತಾರೆ. ಇನ್ನು ಈ ಕಾರಿನೊಳಗಿಂದ ಕೆಟ್ಟ ವಾಸನೆ ಬರಲು ಆರಂಭಿಸಿದ್ದು, ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿಗೆ ರಸ್ತೆ ಗುಂಡಿಯಿಂದ ಯಾವಾಗ ಮುಕ್ತಿ ಸಿಗುತ್ತೆ ಅನ್ನೋ ಪ್ರಶ್ನೆ ಸಾಕಷ್ಟು ವರ್ಷಗಳಿಂದ ಇದೆ. ಇದಕ್ಕೆ ಮುಕ್ತಿ ಎಂಬುವುದು ಒಂದು ಯಕ್ಷ ಪ್ರಶ್ನೆಯಾಗೇ ಉಳಿದಿದೆ. ಈಗ ಬಿಬಿಎಂಪಿ ಪವರ್ ಸೆಂಟರ್ ಗೆ ಹೊಸ ಸಾರಥಿ ಬಂದಿದ್ದರೂ, ನಗರದಲ್ಲಿ ಸಾಲು ಸಾಲು ಗುಂಡಿಗಳಿವೆ. ಇದಕ್ಕೊಂದು ಅಂತ್ಯ ಕಾಣಿಸಲು ಈಗ ಹೊಸ ಪ್ಲ್ಯಾನ್ ರೂಪಿಸಿಕೊಂಡಿದ್ದು, ಶೀಘ್ರವೇ ರಸ್ತೆ ಗುಂಡ ಮುಕ್ತವಾಗಲಿದೆ ರಾಜಧಾನಿ ಎಂಬ ಭರವಸೆ ಮೂಡಿದೆ.
ಒಟಿಟಿ ಪ್ಲಾಟ್ಫಾರ್ಮ್ ರೇಸ್ನಲ್ಲಿ ಜೀ5 ಕೂಡ ಮುಂದಿದೆ.ಸ್ಟಾರ್ ಹೀರೋಗಳ ಬ್ಲಾಕ್ ಬಸ್ಟರ್ ಸಿನಿಮಾಗಳ ಜೊತೆಗೆ ಸದಾಭಿರುಚಿ ಸಿನಿಮಾಗಳನ್ನು ಪ್ರೇಕ್ಷಕರಿಗೆ ಉಣಬಡಿಸ್ತಿರುವ ಜೀ5 ಒಟಿಟಿ ಈಗ ವೀಕೆಂಡ್ ನಲ್ಲಿ ಪ್ರೇಕ್ಷಕರಿಗೆ ಭರ್ಜರಿ ಧಮಾಕ ನೀಡಿದೆ.ಭಾರತದ ಸೆನ್ಸೇಷನಲ್ ಸೃಷ್ಟಿಸಿದ್ದ ಕಾಶ್ಮೀರಿ ಫೈಲ್ಸ್, ಕನ್ನಡದ ಸೂಪರ್ ಹಿಟ್ ಸಿನಿಮಾಗಳಾದ ಮುಗಿಲ್ ಪೇಟೆ ಹಾಗೂ ತಲೆದಂಡ ಸಿನಿಮಾಗಳು ಇದೇ ಮೇ 13ಕ್ಕೆ ಜೀ5 ಒಟಿಟಿಗೆ ಲಗ್ಗೆ ಇಡ್ತಿವೆ.
ಇದನ್ನೂ ಓದಿ: ಜೂನ್ 24 ರಂದು ಬೆಳ್ಳಿತೆರೆಗೆ ಬರಲಿದ್ದಾನೆ 'ತ್ರಿವಿಕ್ರಮ'
ನಾವು ಸಾಮಾನ್ಯವಾಗಿ ಪ್ರಾಣಿಗಳನ್ನು ಮೂಕ ಪ್ರಾಣಿಗಳು ಎಂದು ಆಗಾಗ ಹೇಳುತ್ತಿರುತ್ತೇವೆ,ಆದರೆ ಕೆಲವೊಮ್ಮೆ ಅದರ ವರ್ತನೆಗಳು ಮನುಷ್ಯರನ್ನು ಕೂಡ ಮೀರಿಸುತ್ತವೆ.
ಈಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಕೋತಿಯೊಂದು ತನ್ನ ಸತ್ತ ಮರಿಯನ್ನು ಹೊತ್ತುಕೊಂಡು ತಿರುಗುತ್ತಿರುವ ದೃಶ್ಯವೊಂದು ಈಗ ಕ್ಯಾಮರಾದಲ್ಲಿ ಸೆರೆಯಾಗಿದೆ.
ರಾಜಧಾನಿ ಬೆಂಗಳೂರಿನ ಜನತೆಗೆ ಮತ್ತೊಂದು ಕಹಿ ಸುದ್ದಿ ಎದುರಾಗ್ತಿದೆ. ಕೋವಿಡ್ ನಾಲ್ಕನೇ ಅಲೆಯ ಭೀತಿಯ ನಡುವೆಯು ತೈಲಬೆಲೆ ಗಗನಕಕ್ಕೆರಿದೆ, ಅಡುಗೆ ಎಣ್ಣೆ ಬೆಲೆ ಏರಿಕೆಯಲ್ಲಿ ತನ್ನ ನಾಗಲೋಟ ಮುಂದುವರೆಸಿದೆ.
ರಾಜಾಜಿನಗರ ಕೆಂಪೇಗೌಡ ಸಮುದಾಯಭವನದಲ್ಲಿ ಜನ ಜಾಗೃತಿ ಸಮಿತಿಯಿಂದ ಆಯೋಜನೆ ಮಾಡಿರುವ ಹಿಂದೂ ರಾಷ್ಟ್ರ ಅಧಿವೇಶನ ಸಭೆಯಲ್ಲಿ ಪ್ರಶಾಂತ್ ಸಂಬರಗಿ ಸೇರಿದಂತೆ ಹಿಂದೂ ಮುಖಂಡರು ಭಾಗಿಯಾಗಿದ್ದಾರೆ.
ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಬೆಸ್ಕಾಂನಿಂದ ಜನಸಾಮಾನ್ಯರಿಗೆ ಡೆಪಾಸಿಟ್ ಶಾಕ್ ನೀಡಿದೆ.ನೀವೇನಾದ್ರೂ ಈ ಡೆಪಾಸಿಟ್ ಹಣವನ್ನು ಪಾವತಿ ಮಾಡದೆ ಇದ್ರೆ ನಿಮ್ಮ ಮನೆಯ ಪವರ್ ಕಟ್ ಆಗೋದು ಗ್ಯಾರಂಟಿ.
ಬಿಬಿಎಂಪಿಗೆ ನೂತನ ಸಾರಥಿಯಾಗಿ ಹಿರಿಯ IAS ಅಧಿಕಾರಿ ತುಷಾರ್ ಗಿರಿನಾಥ್ ಮುಖ್ಯ ಆಯುಕ್ತರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ತುಷಾರ್ ಅವರಿಗೆ ಬೆಳ್ಳಿ ಗದೆ ನೀಡುವ ಮೂಲಕ ಗೌರವ್ ಗುಪ್ತ ಅಧಿಕಾರ ಹಸ್ತಾಂತರಿಸಿದರು.
ತರಬೇತಿ ವಿಭಾಗದ ಡಿಜಿಪಿಯಾಗಿ ಡಾ.ಪಿ. ರವೀಂದ್ರನಾಥ್, ಡಿಸಿಆರ್‌ಇ ಎಡಿಜಿಪಿಯಾಗಿ ಅರುಣ್ ಚಕ್ರವರ್ತಿ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಎಡಿಜಿಪಿಯಾಗಿ ಹರಿಶೇಖರನ್ ಅವರನ್ನು ನೇಮಕಗೊಳಿಸಲಾಗಿದೆ.
ಪರಿಷ್ಕೃತ ಸೂಚನಾ ಪತ್ರ ಹೊರಡಿಸಿರುವ ಸಚಿವ ಸಂಪುಟ ವಿಭಾಗದ ಜಂಟಿ ಕಾರ್ಯದರ್ಶಿ ಆರ್. ಚಂದ್ರಶೇಖರ್, ವಿಧಾನಸೌಧದ ಸಚಿವ ಸಂಪುಟ ಸಭಾಂಗಣದಲ್ಲಿ ಗುರುವಾರ ಬೆಳಿಗ್ಗೆ 11.30ಕ್ಕೆ ಸಂಪುಟ ಸಭೆ ನಿಗದಿಯಾಗಿತ್ತು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯ 6.16 ಲಕ್ಷ ಸ್ವತ್ತುಗಳು ಬಿ ಖಾತದಲ್ಲಿವೆ. ಬಿ ಯಿಂದ ಎ ಖಾತಾಗೆ ಸ್ವತ್ತುಗಳು ವರ್ಗಾವಣೆಗೊಂಡರೆ ಪಾಲಿಕೆಗೆ ಆದಾಯ ಕೂಡ ಹೆಚ್ಚಾಗಲಿದ್ದು ಇದರಿಂದ 2,500 ಕೋಟಿಗೂ ಅಧಿಕ ಆದಾಯದ ನಿರೀಕ್ಷಿಸಲಾಗಿದೆ.
ರಾಜ್ಯಕ್ಕೆ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಭೇಟಿ ನೀಡಿದ್ದಾರೆ. ಇಂದು ಸಂಜೆ ಕಂಠೀರಣ ಹೊರಾಂಗಣ ಕ್ರೀಡಾಂಗಣದಲ್ಲಿ ಜರುಗಲಿರುವ ಖೋಲೊ ಇಂಡಿಯಾ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ.