ತನ್ನ ಅಭಿಮಾನಿಗಳಿಗಾಗಿ ಮತ್ತೊಮ್ಮೆ Bold Pics ಹಂಚಿಕೊಂಡ ಬಾಲಿವುಡ್ ಬೆಡಗಿ

ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಕೇಂದ್ರ ಸರ್ಕಾರ ಲಾಕ್ ಡೌನ್ ಅವಧಿಯನ್ನು ಇದೀಗ ಮೇ 31ರವರೆಗೆ ವಿಸ್ತರಿಸಿದೆ. ಹೀಗಾಗಿ ಇನ್ನೂ ಸ್ವಲ್ಪ ಕಾಲ ಬಾಲಿವುಡ್ ಸೆಲಿಬ್ರಿಟಿಗಳು ತಮ್ಮ ಮನೆಯಲ್ಲಿಯೇ ಬಂಧಿಯಾಗಿ ಉಳಿಯಬೇಕಾಗಲಿದೆ. 

May 17, 2020, 08:42 PM IST

ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಕೇಂದ್ರ ಸರ್ಕಾರ ಲಾಕ್ ಡೌನ್ ಅವಧಿಯನ್ನು ಇದೀಗ ಮೇ 31ರವರೆಗೆ ವಿಸ್ತರಿಸಿದೆ. ಹೀಗಾಗಿ ಇನ್ನೂ ಸ್ವಲ್ಪ ಕಾಲ ಬಾಲಿವುಡ್ ಸೆಲಿಬ್ರಿಟಿಗಳು ತಮ್ಮ ಮನೆಯಲ್ಲಿಯೇ ಬಂಧಿಯಾಗಿ ಉಳಿಯಬೇಕಾಗಲಿದೆ. ಏತನ್ಮಧ್ಯೆ ಲಾಕ್ ಡೌನ್ ಜಾರಿಯಾದಾಗಿನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಕ್ರೀಯಲಾಗಿರುವ ಖ್ಯಾತ ಬಾಲಿವುಡ್ ನಟಿ ಊರ್ವಶಿ ರೌತೆಲಾ ಮತ್ತೊಮ್ಮೆ ತನ್ನ ಅಭಿಮಾನಿಗಳನ್ನು ರಂಜಿಸಲು ತನ್ನ ಹಾಟ್ ಫೋಟೋಗಳನ್ನು ಹರಿಬಿಟ್ಟಿದ್ದಾಳೆ. ಹೌದು, ಇತ್ತೀಚೆಗಷ್ಟೇ ತನ್ನ ಹಸಿಬಿಸಿ ಭಾವಚಿತ್ರವನ್ನು ಹಂಚಿಕೊಂಡ ಊರ್ವಶಿ, 'ನಾನು ತುಂಬಾ ಏಕ್ಸ್ಕೂಸಿವ್ ಆಗಿದ್ದೇನೆ ಹಾಗೂ ನಾನು ಇನ್ಸ್ಟಾ ಬ್ಯೂಟಿಕ್ ನಿಂದ ಶಾಪಿಂಗ್ ಮಾಡುವುದಿಲ್ಲ' ಎಂದು ಬರೆದುಕೊಂಡಿದ್ದಾಳೆ. ಆದರೆ, ಊರ್ವಶಿ ತನ್ನ ಈ ರೀತಿಯ ಭಾವಚಿತ್ರಗಳನ್ನು ಹಂಚಿಕೊಳ್ಳುತ್ತಿರುವುದು ಇದೆ ಮೊದಲ ಬಾರಿಗೆ ಅಲ್ಲ. ಕಳೆದ ಹಲವು ದಿನಗಳಿಂದ ಊರ್ವಶಿ ಇಂತಹ ಬೋಲ್ಡ್ ಭಾವಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದು, ಅಭಿಮಾನಿಗಳೂ ಕೂಡ ಅವಳ ಭಾವಚಿತ್ರಗಳಿಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೂ ಮೊದಲು ಊರ್ವಶಿ ತನ್ನ ಮಾಲ್ಡೀವ್ಸ್ ಪ್ರವಾಸದ ಭಾವಚಿತ್ರಗಳನ್ನು ಹಂಚಿಕೊಂಡಿದ್ದಳು. ಈ ಭಾವಚಿತ್ರಗಳಲ್ಲಿ ಅವಳು ಕೇವಲ ಬಿಕಿನಿಯಲಿ ಮಾತ್ರ ಕಾಣಿಸಿಕೊಂಡಿದ್ದಳು. ಅವಳ ಈ ಬ್ಕಿಕಿನಿ ಭಾವಚಿತ್ರಗಳಲ್ಲಿ ಅವಳ ಫಿಟ್ನೆಸ್ ಕೂಡ ಭಾರಿ ಎದ್ದು ಕಾಣಿಸುತ್ತಿತ್ತು. ಆದರೆ, ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಊರ್ವಶಿ ಕೂಡ ತನ್ನ ಸಹಾಯ ಹಸ್ತ ನೀಡಿದ್ದಾಳೆ. ಈ ಮಹಾಮಾರಿಯನ್ನು ತಡೆಗಟ್ಟುವ ಪ್ರಯತ್ನಕ್ಕೆ ಕೈಜೋಡಿಸಿರುವ ಊರ್ವಶಿ 5 ಕೋಟಿ ರೂ. ಕೊಡುಗೆಯನ್ನು ನೀಡಿದ್ದಾಳೆ. ತನ್ನ ಈ ಕೊಡುಗೆಯನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡ ಊರ್ವಶಿ, "ಈ ಹೋರಾಟದಲ್ಲಿ ನಾವು ಒಂದಾಗಿ ಸಾಗುವುದು ಅವಶ್ಯಕವಾಗಿದ್ದು, ಯಾವುದೇ ಕೊಡುಗೆ ಕನಿಷ್ಠವಾಗಿರುವುದಿಲ್ಲ' ಎಂದು ಬರೆದುಕೊಂಡಿದ್ದಳು.

1/6

2/6

3/6

4/6

5/6

6/6