ಶಿವನ ರೂಪ.. ಈ ಪಂಚಮುಖಿ ರುದ್ರಾಕ್ಷಿ ʼಅಕಾಲಿಕ ಮರಣʼದಿಂದ ನಿಮ್ಮನ್ನ ರಕ್ಷಿಸುತ್ತದೆ..! ಆದರೆ ಹೀಗೆ ಧರಿಸಿ..

Panchmukhi Rudraksha benefits : ಪಂಚಮುಖಿ ರುದ್ರಾಕ್ಷವು ಅತ್ಯಂತ ಶಕ್ತಿಶಾಲಿ. ಇದನ್ನು ಭಗವಾನ್‌ ಶಿವನ ರೂಪವೆಂದು ಪರಿಗಣಿಸಲಾಗುತ್ತದೆ. ರುದ್ರಾಕ್ಷವನ್ನು ಧರಿಸುವುದರಿಂದ ನಮ್ಮ ಜೀವನದಲ್ಲಿ ಹಲವಾರು ಬದಲಾವಣೆಗಳು ಜರುಗುತ್ತವೆ.. ನಕಾರಾತ್ಮಕ ಶಕ್ತಿಯಿಂದ ಇದು ನಮ್ಮನ್ನು ದೂರ ಇರಿಸುತ್ತದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

1 /7

ರುದ್ರಾಕ್ಷದಲ್ಲಿ ವಿವಿಧ ವಿಧಗಳಿವೆ. ಇದರಲ್ಲಿ ಪಂಚಮುಖಿ ರುದ್ರಾಕ್ಷವನ್ನು ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಪಂಚಮುಖಿ ರುದ್ರಾಕ್ಷಿಯನ್ನು ಮಹಾದೇವನ ಸ್ವರೂಪ ಎಂದು ನಂಬಲಾಗುತ್ತದೆ. ಈ ರುದ್ರಾಕ್ಷಿಯನ್ನು ಧರಿಸುವುದರಿಂದ ವ್ಯಕ್ತಿಯು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪ್ರಯೋಜನವನ್ನು ಪಡೆಯುತ್ತಾನೆ.   

2 /7

ಪಂಚಮುಖಿ ರುದ್ರಾಕ್ಷವನ್ನು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಆಚರಣೆಯೊಂದಿಗೆ ಧರಿಸಿದರೆ, ಮಹಾದೇವನ ಕೃಪೆ ಮತ್ತು ಶಾಂತಿ, ಸಮೃದ್ಧಿ ಮತ್ತು ಜೀವನದಲ್ಲಿ ಯಶಸ್ಸು ಸಿಗುತ್ತದೆ. ರುದ್ರಾಕ್ಷಕ್ಕೆ ಸಂಬಂಧಿಸಿದ ಈ ಪ್ರಯೋಜನಗಳನ್ನು ಪಡೆಯಲು, ಅದನ್ನು ಧರಿಸುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳಿವೆ.. ಬನ್ನಿ ಈ ಕುರಿತು ತಿಳಿಯೋಣ..  

3 /7

ಮಹಿಳೆಯರು ರುದ್ರಾಕ್ಷವನ್ನು ಧರಿಸಬಹುದು. ರುದ್ರಾಕ್ಷಿಯು ಶಿವನ ಕಣ್ಣೀರಿನಿಂದ ಮಾಡಿದ ಪವಿತ್ರ ಮಣಿ ಎಂಬ ನಂಬಿಕೆ ಇದೆ.. ಶುದ್ಧ ಮನಸ್ಸಿನ ಯಾವುದೇ ವ್ಯಕ್ತಿ ಇದನ್ನು ಧರಿಸಬಹುದು. ಆದರೆ ಮುಟ್ಟಿನ ಸಮಯದಲ್ಲಿ ಮತ್ತು ಲೈಂಗಿಕ ಸಂಭೋಗದ ಸಮಯದಲ್ಲಿ ಮಹಿಳೆಯರು ರುದ್ರಾಕ್ಷವನ್ನು ತೆಗೆಯಬೇಕು.   

4 /7

ರುದ್ರಾಕ್ಷಿಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಅದರೊಳಗೆ ಧೂಳು ಸಂಗ್ರಹವಾಗದಂತೆ ನೋಡಿಕೊಳ್ಳಿ. ಕೊಳಕು ಕೈಗಳಿಂದ ಕೂಡ ರುದ್ರಾಕ್ಷಿಯನ್ನು ಮುಟ್ಟಬೇಡಿ. ಮಾಂಸ ಮತ್ತು ಮದ್ಯದಂತಹ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಬೇಕು. ರುದ್ರಾಕ್ಷಿಯನ್ನು ಧರಿಸಿದ ನಂತರ ಶಿವನ ನಿಯಮಿತ ಪೂಜೆ ಮತ್ತು ಮಂತ್ರ ಪಠಣ ಮಾಡಬೇಕು...   

5 /7

ಸಂಜೆ, ರುದ್ರಾಕ್ಷವನ್ನು ಕುತ್ತಿಗೆಯಿಂದ ತೆಗೆದು ಪವಿತ್ರ ಸ್ಥಳದಲ್ಲಿ ಇರಿಸಿ. ಮರುದಿನ ಬೆಳಿಗ್ಗೆ ಸ್ನಾನ ಮಾಡಿ ರುದ್ರಾಕ್ಷವನ್ನು ಧರಿಸಿ ಓಂ ನಮಃ ಶಿವಾಯ ಮಂತ್ರವನ್ನು ಜಪಿಸಿ. ಮಂತ್ರ ಪಠಣವು ರುದ್ರಾಕ್ಷದ ಶಕ್ತಿಯನ್ನು ಹೆಚ್ಚಿಸುವುದರ ಜೊತೆ ನಿಮಗೆ ಶಕ್ತಿಯನ್ನು ನೀಡುತ್ತದೆ..  

6 /7

ರುದ್ರಾಕ್ಷವನ್ನು ಧರಿಸುವ ಮೊದಲು, ಅದನ್ನು ಗಂಗಾಜಲದಿಂದ ತೊಳೆದು ಶುದ್ಧೀಕರಿಸಿ. ಅದರ ನಂತರ ಪಂಚಮುಖಿ ರುದ್ರಾಕ್ಷಿಯನ್ನು ಶಿವನ ವಿಗ್ರಹ ಅಥವಾ ಚಿತ್ರದ ಮುಂದೆ ಇಟ್ಟು ಓಂ ನಮಃ ಶಿವಾಯ ಮಂತ್ರವನ್ನು ಪಠಿಸಿ. ಜಪ ಮಾಡುತ್ತ, ರುದ್ರಾಕ್ಷವನ್ನು ಪೂಜಿಸಿ ನಂತರ ಕೊರಳಲ್ಲಿ ಧರಿಸಿ. ರುದ್ರಾಕ್ಷ ಯಾವಾಗಲೂ ಬೆಳ್ಳಿ ಅಥವಾ ಚಿನ್ನದಲ್ಲಿ ಧರಿಸಬೇಕು, ಇದಲ್ಲದೆ ಇದನ್ನು ಕೆಂಪು ದಾರದಿಂದ ಕೂಡ ಕಟ್ಟಬಹುದು.   

7 /7

ಪಂಚಮುಖಿ ರುದ್ರಾಕ್ಷಿಯನ್ನು ಧರಿಸಲು ಅತ್ಯಂತ ಮಂಗಳಕರ ದಿನ ಸೋಮವಾರ ಅಥವಾ ಗುರುವಾರ. ಇದಲ್ಲದೇ ಶಿವರಾತ್ರಿಯ ಶುಭ ಸಮಯದಲ್ಲಿ ರುದ್ರಾಕ್ಷವನ್ನು ಧರಿಸುವುದು ಸಹ ಪ್ರಯೋಜನಕಾರಿಯಾಗಿದೆ. ಈ ವಿಷಯಗಳನ್ನು ಗಮನದಲ್ಲಿಟ್ಟು ಪಾಲಿಡಿ.. ಓಂ ನಮಃ ಶಿವಾಯ..