Parijata Remedies: ಸೌಂದರ್ಯ, ಹಣ, ಆರೋಗ್ಯಕ್ಕೆ ಪಾರಿಜಾತ ಪರಿಹಾರ

Parijata Remedies: ಮನೆಯ ವಾಸ್ತು ದೋಷವನ್ನು ಸರಿಪಡಿಸಲು ಮತ್ತು ಹಣದ ಸಮಸ್ಯೆಯಿಂದ ಹೊರಬರಲು ಪಾರಿಜಾತ ಗಿಡದ ಪರಿಹಾರವು ನಿಮಗೆ ಸಹಕಾರಿ ಆಗಲಿದೆ. ಅಷ್ಟೇ ಅಲ್ಲ ಪಾರಿಜಾತವು ಸೌಂದರ್ಯವರ್ಧಕ ಹಾಗೂ ಆರೋಗ್ಯಕ್ಕೂ ಪ್ರಯೋಜನಕಾರಿ ಆಗಿದೆ. ಪಾರಿಜಾತ ಗಿಡದಿಂದ ಏನೆಲ್ಲಾ ಪ್ರಯೋಜನಗಳು ಲಭ್ಯವಿದೆ ತಿಳಿಯೋಣ...

Parijata Remedies: ಮನೆಯಲ್ಲಿ ಪಾರಿಜಾತ ಗಿಡವನ್ನು ನೆಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಏಕೆಂದರೆ, ಪಾರಿಜಾತ ಗಿಡವನ್ನು ದೇವರ ವಾಸಸ್ಥಾನ ಎಂದು ನಂಬಲಾಗಿದೆ. ಮನೆಯ ಸುತ್ತ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಪಾರಿಜಾತ ಗಿಡವನ್ನು ನೆಡುವುದರಿಂದ ಮನೆಯ ಎಲ್ಲಾ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆಯೂ ಇದೆ. ಅಷ್ಟೇ ಅಲ್ಲ ಪಾರಿಜಾತವು ಸೌಂದರ್ಯವರ್ಧಕ ಹಾಗೂ ಆರೋಗ್ಯಕ್ಕೂ ಪ್ರಯೋಜನಕಾರಿ ಆಗಿದೆ. ಪಾರಿಜಾತ ಗಿಡದಿಂದ ಏನೆಲ್ಲಾ ಪ್ರಯೋಜನಗಳು ಲಭ್ಯವಿದೆ ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಆರೋಗ್ಯಕ್ಕೂ ಪ್ರಯೋಜನಕಾರಿ ಪಾರಿಜಾತ ಹೂ: ಪಾರಿಜಾತ ಹೂವು ಪೂಜೆ ಅಥವಾ ಸಮೃದ್ಧಿಗೆ ಮಾತ್ರ ಪ್ರಯೋಜನಕಾರಿಯಲ್ಲ, ಇದು ಆರೋಗ್ಯಕ್ಕೂ ಅತ್ಯಂತ ಪ್ರಯೋಜನಕಾರಿಯಾಗಿದೆ. ಆಯುರ್ವೇದದ ಪ್ರಕಾರ, ಪಾರಿಜಾತ ಅಥವಾ ಅದರ ರಸವನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ.

2 /5

ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಪಾರಿಜಾತ ಪರಿಹಾರ: ನೀವು ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಕಷ್ಟ ಪಟ್ಟು ದುಡಿದು ಹಣ ಸಂಪಾದಿಸಿದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ಇದಕ್ಕಾಗಿ ಪಾರಿಜಾತ ಪರಿಹಾರವನ್ನು ಒಮ್ಮೆ ಟ್ರೈ ಮಾಡಿ. ಇದಕ್ಕಾಗಿ  ನೀವು 5 ಪಾರಿಜಾತದ ಹೂವುಗಳನ್ನು ತೆಗೆದುಕೊಂಡು ಚೆನ್ನಾಗಿ ಒಣಗಿಸಿ ಹಳದಿ ಬಟ್ಟೆಯಲ್ಲಿ ಕಟ್ಟಿ ಅದನ್ನು ನೀವು ಹಣ ಇಡುವ ಜಾಗದಲ್ಲಿ ಇಡಿ. ಮಂಗಳವಾರದಂದು ಈ ಪರಿಹಾರ ಮಾಡುವುದರಿಂದ ಅಂತಹ ಮನೆಯಲ್ಲಿ ಹಣದ ಮಳೆ ಸುರಿಯಲಿದೆ ಎಂದು ಹೇಳಲಾಗುತ್ತದೆ.

3 /5

ಚರ್ಮದ ಸಮಸ್ಯೆಗಳಿಗೆ ಪರಿಹಾರ : ಪಾರಿಜಾತ ಸಸ್ಯದ ಎಲೆಗಳನ್ನು ರುಬ್ಬಿ ತ್ವಚೆಗೆ ಹಚ್ಚುವುದರಿಂದ ಚರ್ಮದ ಸಮಸ್ಯೆಗಳು ದೂರವಾಗುತ್ತವೆ. ಇದರ ಹೂವನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖ ಕಾಂತಿಯುತವಾಗಿ ಹೊಳೆಯುತ್ತದೆ.

4 /5

ಈ ಆರೋಗ್ಯ ಸಮಸ್ಯೆಗಳಿಗೂ ಪಾರಿಜಾತ ಮದ್ದು : ಸಂಧಿವಾತ, ಸಿಯಾಟಿಕಾ, ಮೂಳೆ ಮುರಿತಗಳು, ಚರ್ಮ ರೋಗಗಳು, ಪೈಲ್ಸ್, ಜ್ವರ, ಡೆಂಗ್ಯೂ, ಮಲೇರಿಯಾ, ಒಣ ಕೆಮ್ಮು, ಮಧುಮೇಹ ಮುಂತಾದ ವಿವಿಧ ಅಸ್ವಸ್ಥತೆಗಳು ಮತ್ತು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಹ ಪಾರಿಜಾತವನ್ನು ಬಳಸಲಾಗುತ್ತದೆ.   

5 /5

ಮಹಿಳೆಯರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ : ಪಾರಿಜಾತವು ಮಹಿಳೆಯರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಒತ್ತಡವನ್ನು ನಿವಾರಿಸುತ್ತದೆ ಮತ್ತು ಆರೋಗ್ಯಕರ ಮತ್ತು ಸಂತೋಷದ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.