7th Pay Commission: 50 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ (Central Government Employees) ಹಾಗೂ 61 ಲಕ್ಷ ಪಿಂಚಣಿಧಾರಾಕಾರ ಮೊಗದಲ್ಲಿ ಶೀಘ್ರವೇ ನಗು ಕಾಣಲು ಸಿಗಲಿದೆ.
7th Pay Commission: 50 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ (Central Government Employees) ಹಾಗೂ 61 ಲಕ್ಷ ಪಿಂಚಣಿಧಾರಾಕಾರ ಮೊಗದಲ್ಲಿ ಶೀಘ್ರವೇ ನಗು ಕಾಣಲು ಸಿಗಲಿದೆ. ಹೌದು, ಪ್ರಸ್ತುತ ಇರುವ ಶೇ.28 ರಷ್ಟು ಹಣದುಬ್ಬರವನ್ನು ಆಧರಿಸಿ ಕೇಂದ್ರ ಸರ್ಕಾರ ನೌಕರರ DA ಹಾಗೂ DRಗಳನ್ನು ನೀಡಲಿದೆ. ಈ ಎರಡೂ ರೀತಿಯ ಭತ್ಯೆಗಳು ಕಳೆದ ದೀರ್ಘಕಾಲದಿಂದ ಪರಿಷ್ಕರಿಸಲಾಗಿಲ್ಲ. ಕೊರೊನಾ ವೈರಸ್ ಹಿನ್ನೆಲೆ ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುತ್ತಿದ್ದ ತುಟ್ಟಿಭತ್ಯೆಯನ್ನು ತಡೆಹಿಡಿಯಲಾಗಿತ್ತು.
ಇದನ್ನು ಓದಿ-Dearness Allowance:ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೊಂದು ಸಂತಸದ ಸುದ್ದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ವರದಿಗಳ ಪ್ರಕಾರ ಕೇಂದ್ರ ಸರ್ಕಾರಿ ನೌಕರರ ಹಾಗೂ ಕಾರ್ಮಿಕರ ಸಂಘಟನೆ, ಕೇಂದ್ರ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಮುಂದೆ ಪ್ರಸ್ತುತ ಸರ್ಕಾರಿ ಖಜಾನೆಯೇ ಕುರಿತಾದ ಲೆಕ್ಕ ಪತ್ರದ ವರದಿ ನೀಡಿದೆ ಎನ್ನಲಾಗಿದೆ. ಇದರ ಜೊತೆಗೆ ಎಲ್ಲ ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ ತುಟ್ಟಿ ಭತ್ಯೆಯನ್ನು ಶೇ.28 ರಷ್ಟು ಹಣದುಬ್ಬರವನ್ನು ಪರಿಗಣಿಸಿ ಹೆಚ್ಚಿಸುವಂತೆ ಮನವಿ ಮಾಡಿದೆ. ಕೊರೊನಾ ಕಾಲದಲ್ಲಿ ಡ್ಯೂಟಿ ಮಾಡುವ ವೇಳೆ ಹಲವು ನೌಕರರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ವಿತ್ತ ಸಚಿವರು ಎಲ್ಲ ನೌಕರರ ಹಾಗೂ ಪಿಂಚಣಿದಾರರ ಅವರ ಜನವರಿ 2020ರ ಪೆಂಡಿಂಗ್ ತುಟ್ಟಿ ಭತ್ಯೆ ಹಾಗೂ ಭತ್ಯೆಯ ಪರಿಹಾರವನ್ನು ಶೇ.28 ರಷ್ಟು ಹಣದುಬ್ಬರವನ್ನು ಪರಿಗಣಿಸಿ ನೀಡಬೇಕು ಎಂದು ಹೇಳಿದೆ.
ಕಳೆದ ವರ್ಷ ಅಂದರೆ ಏಪ್ರಿಲ್ 2020 ರಿಂದ ವಿತ್ತ ಸಚಿವಾಲಯ ಈ ಕೇಂದ್ರ ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರಿಗೆ ಸಿಗುವ ತುಟ್ಟಿಭತ್ಯೆ ಹಾಗೂ ಪರಿಹಾರಕ್ಕೆ ತಡೆ ನೀಡಿತ್ತು. ಕೊರೊನಾ ಪ್ರಕೋಪದ ಕಾರಣ ಉದ್ಭವಿಸಿದ್ದ ಕಠಿಣ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಣಯ ಕೈಗೊಂಡಿತ್ತು. ಸರ್ಕಾರ ಜುಲೈ 2021ರ ವರೆಗೆ ಇದರ ಮೇಲೆ ತಡೆ ನೀಡಿದೆ. ಹೀಗಾಗಿ ಬರುವ ಜುಲೈನಿಂದ ಸರ್ಕಾರ ಈ ತಡೆಯನ್ನು ತೆರವುಗೊಳಿಸಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಲಾಗುತ್ತಿದೆ.
ಕೊರೊನಾ ಕಾಲದಲ್ಲಿ ಔದ್ಯೋಗಿಕ ಉತ್ಪಾದನೆ ಶೇ.57ರಷ್ಟು ಕುಸಿದಿತ್ತು. ಕಳೆದ ವರ್ಷ ಅಕ್ಟೋಬರ್ ನಲ್ಲಿ ಇದು ಶೇ.3.6 ರಷ್ಟು ಏರಿಕೆಯಾಗಿತ್ತು. ಇದಲ್ಲದೆ GST ಕಲೆಕ್ಷನ್ ಕೂಡ ಮಾರ್ಚ್ 2020 ರಲ್ಲಿನ 97,597 ಕೋಟಿ ರೂ.ಗಳ ಹೋಲಿಕೆಯಲ್ಲಿ ಡಿಸೆಂಬರ್ 2020ರಲ್ಲಿ 1,15,000 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಈ ಸಂಗತಿಯನ್ನು ಸರ್ಕಾರದ ಮುಂದೆ ಪ್ರಸ್ತುತಪಡಿಸಿರುವ ಅಸೋಸಿಯೇಶನ್, ತುಟ್ಟಿ ಭತ್ಯೆ ಹಾಗೂ ಪರಿಹಾರ ಪರಿಷ್ಕರಣೆಗಾಗಿ ಜುಲೈ 2021ರವರೆಗೆ ಕಾಯದೆ ಕೂಡಲೇ ಪರಿಷ್ಕರಿಸಬೇಕು ಎಂದು ಹೇಳಿದೆ.
ಕೊರೊನಾ ಮಹಾಮಾರಿಯ ಪ್ರಕೋಪದ ಹಿನ್ನೆಲೆ ಜನವರಿ 1, 2020ರಿಂದ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಸಿಗುತ್ತಿದ್ದ ಹೆಚ್ಚುವರಿ ಭತ್ಯೆಗೆ ತಡೆ ನೀಡಿತ್ತು. ಈ ಕುರಿತು ಮೆಮೊರೆಂಡಂ ಜಾರಿಗೊಳಿಸಿದ್ದ ಖರ್ಚು ವಿಭಾಗ ಜುಲೈ 1, 2020 ಹಾಗೂ ಜನವರಿ 1, 2021ರಿಂದ ಸುಗುವ ಭತ್ಯೆಯ ಮುಂದಿನ ಕಂತನ್ನು ನೀಡಲಾಗುವುದಿಲ್ಲ. ಆದರೆ, ಕಾಲಕಾಲಕ್ಕೆ ತಕ್ಕಂತೆ ಇರುವ ಹಣದುಬ್ಬರ ಆಧರಿಸಿ ನೌಕರರ DA ಹಾಗೂ DR ಪಾವತಿ ಮುಂದುವರೆಸಲಾಗುವುದು ಎಂದು ನೆಲಿತ್ತು. ಕೇಂದ್ರ ಸರ್ಕಾರದ ಕ್ಯಾಬಿನೆಟ್ ಈಗಾಗಲೇ ನೌಕರರ ತುಟ್ಟಿಭತ್ಯೆಯಲ್ಲಿ ಶೇ.4ರಷ್ಟು ವೃದ್ಧಿಗೆ ಅನುಮೊಂದನೆ ನೀಡಿದೆ. ಅಂದರೆ ನೌಕರರ ಹಾಗೂ ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ. 17 ರಿಂದ ಶೇ.21ಕ್ಕೆ ಏರಿಸಲಾಗಿದೆ.
PTI ಸುದ್ದಿಸಂಸ್ಥೆ ಪ್ರಕಟಿಸಿದ ವರದಿಯೊಂದರ ಪ್ರಕಾರ ಕೇಂದ್ರ ಸರ್ಕಾರದ ನೌಕರರ ತುಟ್ಟಿ ಭತ್ಯೆ ಹಾಗೂ ಪರಿಹಾರದ ಕಂತನ್ನು ತಡೆಹಿಡಿದ ಕಾರಣ ವರ್ಷ 2021-22 ರ ಹಾಗೂ ಅದರ ಹಿಂದಿನ ವರ್ಷದ ಕಂತು ಸೇರಿದಂತೆ ಸರ್ಕಾರಕ್ಕೆ 37,530 ಕೋಟಿ ರೂ. ಉಳಿತಾಯವಾಗಿತ್ತು. PTI ಪ್ರಕಾರ ರಾಜ್ಯ ಸರ್ಕಾರಗಳು ಕೂಡ ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಆದೇಶದಂತೆಯೇ ತಮ್ಮ ನಿರ್ಣಯಗಳು ಕೈಗೊಳ್ಳುತ್ತವೆ. ಒಂದು ಅಂದಾಜಿನ ಪ್ರಕಾರ DA ಹಾಗೂ DR ಕಂತುಗಳನ್ನು ತಡೆ ಹಿಡಿದ ಕಾರಣ ರಾಜ್ಯ ಸರ್ಕಾರಗಳಿಗೂ ಕೂಡ 82,566 ಕೋಟಿ ರೂ.ಗಳ ಉಳಿತಾಯವಾಗಿತ್ತು.