Diwali 2020: ಈ 4 ರಾಶಿ ಜನರ ಪಾಲಿಗೆ 'ಅಚ್ಛೆ ದೀನ್'ಗಳು ಆರಂಭ, ನಿಮ್ಮ ರಾಶಿ ಯಾವುದು?

14 ನವೆಂಬರ್ 2020 ರಂದು ಅಂದರೆ ಶನಿವಾರ ದೀಪಾವಳಿಯ ಪವಿತ್ರ ಹಬ್ಬವನ್ನು ಆಚರಿಸಲಾಗುವುದು. ದೀಪಗಳ ಈ ಹಬ್ಬ ಕೆಲ ರಾಶಿಚಕ್ರದ ಜನರ ಪಾಲಿಗೆ ಅದೃಷ್ಟದ ಜೊತೆಗೆ ಸುಖ-ಸಂತೋಷಗಳನ್ನು ಹೊತ್ತು ತರಲಿದೆ.

  • Nov 10, 2020, 12:57 PM IST

ನವದೆಹಲಿ: ದೀಪಾವಳಿಯ (Diwali 2020) ಹಬ್ಬವನ್ನು ಈ ವರ್ಷದ ನವೆಂಬರ್ 14 ರಂದು ಅಂದರೆ ಶನಿವಾರ ಆಚರಿಸಲಾಗುವುದು. ಜ್ಯೋತಿಷಿಗಳ ಪ್ರಕಾರ, ದೀಪಾವಳಿಯ ಅತ್ಯಂತ ಶುಭ ಸಂದರ್ಭದಲ್ಲಿ, ಕೆಲವು ರಾಶಿಚಕ್ರ ಚಿಹ್ನೆಗಳ ಅದೃಷ್ಟದ ನಕ್ಷತ್ರವು ಇತರರಿಗಿಂತ ಹೆಚ್ಚು ಬೆಳಗಲಿದೆ. ಅವರ ಜೀವನದಲ್ಲಿ ಸಂತೋಷ ಮತ್ತು ಸಂಪತ್ತಿನ ಸಂವಹನವಾಗಲಿದ್ದು, ಅವರ ಎಲ್ಲಾ ತೊಂದರೆಗಳು ನಿವಾರನೆಯಾಗಳಿವೆ ಎನ್ನಲಾಗಿದೆ. ದೀಪಗಳ ಈ ಹಬ್ಬದಲ್ಲಿ ಸಂತೋಷವಾಗಿರಿ ಮತ್ತು ಸಂತೋಷವನ್ನು ಹಂಚಿಕೊಳ್ಳಿ. ಈ ಬಾರಿಯ ದೀಪಾವಳಿ ಯಾವ ರಾಶಿಯ ಜನರಿಗೆ ಒಳ್ಳೆಯ ದಿನಗಳನ್ನು ಹೊತ್ತುತರಲಿದೆ ಎಂಬುದನ್ನೊಮ್ಮೆ ತಿಳಿಯೋಣ ಬನ್ನಿ.

ಇದನ್ನು ಓದಿ- ಈ ಬಾರಿಯ ಧನತ್ರಯೋದಶಿಯಂದು ನಿಮ್ಮ ರಾಶಿಗೆ ಅನುಗುಣವಾಗಿ ಖರೀದಿ ಮಾಡಿ, ಸಿಗಲಿದೆ ಶುಭ ಲಾಭ

 

 

1 /4

ಈ ರಾಶಿಯ ಜನರ ಪಾಲಿಗೆ ಈ ಬಾರಿಯ ದೀಪಾವಳಿ ಶುಭ ದಿನಗಳನ್ನು ಹೊತ್ತು ತರಲಿದೆ. ದೇವಿ ಲಕ್ಷ್ಮಿಯ ಕೃಪಾ ವೃಷ್ಟಿ ನಿಮ್ಮ ಮೇಲಾಗಲಿದೆ. ನೌಕರಿಯ ಶುಭ ಸಂಯೋಗ ಸೃಷ್ಟಿಯಾಗುತ್ತಿದೆ. ತಂದೆ-ತಾಯಿಯರ ಆರೋಗ್ಯದಲ್ಲಿಯೂ ಕೂಡ ಸುಧಾರಣೆಯಾಗಲಿದೆ. ವ್ಯಾಪಾರದಲ್ಲಿ ಲಾಭ ಉಂಟಾಗಲಿದೆ. ಕಚೇರಿಯಲ್ಲಿ ನಿಮ್ಮ ಮೇಲಾಧಿಕಾರಿಗಳ ಜೊತೆ ಕಹಿ ದೂರವಾಗಲಿದೆ. ಮದುವೆಯ ಯೋಗ ಕೂಡ ನಿರ್ಮಾಣಗೊಳ್ಳುತ್ತದೆ.

2 /4

ಈ ರಾಶಿಚಕ್ರದ ಜನರಿಗೆ ಯಾವಾಗಲು ಅದೃಷ್ಟದ ಧಣಿಗಳು ಎಂದು ಹೇಳಲಾಗುತ್ತದೆ. ಆದರೆ, ಕಳೆದ ಸುಮಾರು 6 ತಿಂಗಳುಗಳ ಕಾಲದಿಂದ ತುಲಾ ಜಾತಕದವರ ಅದೃಷ್ಟ ಅವರಿಗೆ ಸಾಥ್ ನೀಡುತ್ತಿಲ್ಲ. ಈ ಬಾರಿಯ ದೀಪಾವಳಿಯ ಶುಭದಿನದಿಂದ ಈ ರಾಶಿ ಚಕ್ರದ ಜನರ 'ಅಚ್ಛೆ ದೀನ್'ಗಳು ಮತ್ತೆ ಆರಂಭವಾಗಳಿವೆ. ಭೂಮಿಗೆ ಸಂಬಂಧಿಸಿದ ಪ್ರಕರಣ ಅಂತ್ಯವಾಗಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಹೊಸ ವಾಹನ ಖರೀದಿ ಹಾಗೂ ವಿದೇಶ ಯಾತ್ರೆಯ ಶುಭಯೋಗ ನಿರ್ಮಾಣಗೊಳ್ಳುತ್ತಿದೆ.

3 /4

ಈ ರಾಶಿಚಕ್ರದ ಜಾತಕ ಹೊಂದಿದವರ ಜನರ ಅದೃಷ್ಟದ ತಾರೆಗಳು ಹೊಳೆಯಲಿವೆ. ಮನೆಯಲ್ಲಿ ಬಾಲ ಅತಿಥಿಯ ಆಗಮನವಾಗಲಿದೆ. ಆರ್ಥಿಕ ಸಮಸ್ಯೆ ನಿವಾರಣೆಯಾಗಲಿದೆ. ಕಚೇರಿಯಲ್ಲಿ ಪ್ರಮೋಶನ್ ಸಿಗುವ ಯೋಗ ಕೂಡ ನಿರ್ಮಾಣವಾಗುತ್ತಿದೆ.

4 /4

ದೀಪಾವಲಿಯಿಂದ ಈ ರಾಶಿಚಕ್ರ ಜಾತಕ ಹೊಂದಿದವರ ಶುಭ ಸಮಯ ಆರಂಭವಾಗಲಿದೆ. ಕಳೆದ ಹಲವು ಸಮಯದಿಂದ ಸಿಲುಕಿಕೊಂಡ ಕಾರ್ಯಗಳು ಪೂರ್ಣಗೊಳ್ಳಲಿವೆ. ವ್ಯಾಪಾರದಲ್ಲಿ ಲಾಭ. ಮಕ್ಕಳ ಜೊತೆಗೆ ಸಂಬಂಧದಲ್ಲಿ ಮಧುರತೆ ನಿರ್ಮಾಣಗೊಳ್ಳಲಿದೆ.