ಹಿಂದೂ ಪಂಚಾಂಗದ ಪ್ರಕಾರ ಈ ವರ್ಷ ವಸಂತ ಪಂಚಮಿಯ ಶುಭ ಅವಸರದಂದು ಎರಡು ಶುಭ ಯೋಗಗಳು ಸೃಷ್ಟಿಯಾಗುತ್ತಿವೆ. ರವಿ ಯೋಗ ಹಾಗೂ ಅಮೃತ ಸಿದ್ಧಿ ಯೋಗ. - ವಸಂತ ಪಂಚಮಿ ತಿಥಿ ಪ್ರಾರಂಭ: 16 ಫೆಬ್ರುವರಿ ಬೆಳಗ್ಗೆ 3.36 - ವಸಂತ ಪಂಚಮಿ ತಿಥಿ ಮುಕ್ತಾಯ: 17 ಫೆಬ್ರವರಿ ಬೆಳಗ್ಗೆ 5.46 ರವರೆಗೆ. - ವಸಂತ ಪಂಚಮಿಯ ದಿನ ದೇವಿ ಸರಸ್ವತಿಗೆ ಪೂಜೆ ಸಲ್ಲಿಸಲು ಶುಭ ಮುಹೂರ್ತ: ಫೆಬ್ರುವರಿ 16, 2021 ರ ಬೆಳಗ್ಗೆ 11.30 ರಿಂದ ಮಧ್ಯಾಹ್ನ 12.30ರವರೆಗೆ.
ವಸಂತ ಪಂಚಮಿಯನ್ನು ನಿಸರ್ಗದ ಉತ್ಸವ ಎಂದೂ ಕೂಡ ಹೇಳಲಾಗುತ್ತದೆ ಹಾಗೂ ಇದೆ ಕಾರಣದಿಂದ ವಸಂತ ಋತುವನ್ನು ಋತುಗಳ ರಾಜ ಎಂದು ಕರೆಯಲಾಗುತ್ತದೆ. ಈ ದಿನ ಹಳದಿ ಬಣ್ಣಕ್ಕೆ ವಿಶೇಷ ಮಹತ್ವವಿದೆ. ಏಕೆಂದರೆ ದೇವಿ ಸರಸ್ವತಿಗೆ ಹಳದಿ ಬಣ್ಣ ತುಂಬಾ ಇಷ್ಟ. ಇಂದಿನ ದಿನ ಸರಸ್ವತಿ ಪೂಜೆ ಮಾಡುವ ವೇಳೆ ದೇವಿಗೆ ಹಳದಿ ಬಣ್ಣದ ವಸ್ತ್ರ ತೊಡಿಸಲಾಗುತ್ತದೆ ಜೊತೆಗೆ ಸಾಧಕರು ಕೂಡ ಹಳದಿ ಬಣ್ಣದ ವಸ್ತ್ರ ಧರಿಸುತ್ತಾರೆ. ಹಳದಿ ಬಣ್ಣ ಉತ್ಸಾಹ ಹಾಗೂ ಉಲಾಸಗಳ ಜೊತೆಗೆ ಮೆದುಳಿನ ಸಕ್ರೀಯತೆಯನ್ನು ಹೆಚ್ಚಿಸುವ ಬಣ್ಣವಾಗಿದೆ.
- ಇಂದಿನ ದಿನ ಹಳದಿ ಬಣ್ಣದ ವಸ್ತ್ರಕ್ಕೆ ವಿಶೇಷ ಮಹತ್ವವಿದೆ. ಹೀಗಾಗಿ ಈ ದಿನ ಬಣ್ಣ ಬಣ್ಣದ ಪೋಷಾಕು ಅದರಲ್ಲೂ ವಿಶೇಷವಾಗಿ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಡಿ. ಇದರಿಂದ ಸರಸ್ವತಿ ದೇವಿ ಮುನಿಸಿಕೊಳ್ಳುತ್ತಾಳೆ. - ಇಂದಿನ ದಿನ ಮರ ಕಡಿಯುವುದಾಗಲಿ ಅಥವಾ ಫಸಲು ತೆಗೆಯುವುದಾಗಲಿ ಮಾಡಬೇಡಿ. ಏಕೆಂದರೆ ಈ ದಿನ ವಸಂತ ಋತುವಿನ ಆಗಮನದ ದಿನ.
- ಇಂದು ದೇವಿ ಸರಸ್ವತಿ ಪೂಜೆ ಸಲ್ಲಿಸಲಾಗುತ್ತದೆ. ಹೀಗಾಗಿ ಈ ದಿನ ಸ್ನಾನ ಮಾಡದೆಯೇ ಭೋಜನ ಮಾಡಬಾರದು. ಇಂದು ಸ್ನಾನ ಮಾಡಿ ವೃತ ಕೈಗೊಂಡು, ದೇವಿ ಸರಸ್ವತಿಗೆ ಪೂಜೆ ಸಲ್ಲಿಸಿದ ಬಳಿಕವೇ ಊಟ ಮಾಡಬೇಕು. - ವಸಂತ ಪಂಚಮಿಯ ದಿನ ಅಪ್ಪಿ-ತಪ್ಪಿಯೂ ಕೂಡ ಕೋಪಿಸಿಕೊಳ್ಳಬೇಡಿ. ಕೋಪದಲ್ಲಿ ಯಾರ ಮೇಲೂ ಕೂಡ ತಪ್ಪಾದ ಭಾಷೆಯ ಬಳಕೆ ಮಾಡಬೇಡಿ. ಮನೆಯಲ್ಲಿ ಜಗಳ ಮಾಡುವುದರಿಂದಲೂ ಕೂಡ ದೂರ ಉಳಿಯಿರಿ. ನಿಮ್ಮ ಕುರಿತಾಗಲಿ ಅಥವಾ ಬೇರೆಯವರ ಕುರಿತಾಗಲಿ ಮನಸ್ಸಿನಲ್ಲಿ ಕೆಟ್ಟ ಯೋಚನೆಗಳನ್ನು ತರಬೇಡಿ. ಕೇವಲ ಶುಭ ವಿಚಾರಗಳನ್ನೇ ಮಾಡಿ. - ಅಪ್ಪಿತಪ್ಪಿಯೂ ಕೂಡ ಈ ದಿನ ಮಾಂಸ, ಮದ್ಯಪಾನ ಮಾಡಬೇಡಿ. ಬ್ರಹ್ಮಚರ್ಯ ಪಾಲಿಸಿ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಅಗೌರವಿಸಬೇಡಿ.