2023ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ 63-ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಮತದಾರರ ಮತದಾನ ಹೆಚ್ಚಿಸುವ ಮತ್ತು ಗಮನಸೆಳೆಯುವಂತ ನಾಲ್ಕು ಪಿಂಕ್, ಒಂದು ವಿಶಿಷ್ಟಚೇತನ ಹಾಗೂ ಐದು ಮಾದರಿ ಮತಗಟ್ಟೆಗಳನ್ನು ನಿರ್ಮಿಸಿದ್ದು, ಈ ಕೇಂದ್ರಗಳು ಮತದಾರರ ಗಮನ ಸೆಳೆಯುವಂತಿವೆ.
ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಘೋಷಣೆಗಳನ್ನು ಅಲ್ಲಿ ಬರೆಸಲಾಗಿದ್ದು, ಮತದಾರರ ಗಮನ ಸೆಳೆಯುವಂತಿವೆ.
ವಿಶಿಷ್ಟಚೇತನ ಮತಗಟ್ಟೆಯು ಕೂಡ ಯಲಬುರ್ಗಾ ಪಟ್ಟಣದಲ್ಲಿ ಸಿದ್ದಪಡಿಸಿದ್ದು, ವಿಶೇಷವಾಗಿದೆ. ಹಾಗೇ ಮುಧೋಳ ಮತ್ತು ತುಮ್ಮರಗುದ್ದಿಯಲ್ಲಿನ ಮಾದರಿ ಮತಗಟ್ಟೆಗಳು ಸಂಪೂರ್ಣ ವರ್ಲಿ ಕಲೆಯಲ್ಲಿ ಬಣ್ಣ ಬಳಿದು ಆಕರ್ಷಣಿಯ ಚಿತ್ರಗಳನ್ನು ಬಿಡಿಸಲಾಗಿದೆ.
ಯಲಬುರ್ಗಾ ಪಟ್ಟಣದ ಪಟ್ಟಣ ಪಂಚಾಯತಿ ಹಾಗೂ ಸರ್ಕಾರಿ ಮಾದರಿ ಶಾಲೆಯಲ್ಲಿ ಪಿಂಕ್ ಮತಗಟ್ಟೆಯಾಗಿ ನಿರ್ಮಾಣ ಮಾಡಲಾಗಿದ್ದು, ಈಗ ಬಣ್ಣದಿಂದ ಕಂಗೊಳಿಸುತ್ತಿದೆ. ಇಲ್ಲಿ ವಿಶೇಷವಾಗಿ ಮಹಿಳೆಯರು ಬಂದು ಮತದಾನ ಮಾಡಲಿದ್ದು, ಅವರಿಗೆ ಈ ಬಾರಿ ವಿಶೇಷ ಆದ್ಯತೆ ನೀಡಿದಂತಿದೆ.
ಯಲಬುರ್ಗಾ ತಾಲೂಕಿನ ಬೇವೂರ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಮಾದರಿ ಹಾಗೂ ಪಿಂಕ್ ಮತಗಟ್ಟೆ ವರ್ಲಿ ಚಿತ್ರಗಳು ಮತದಾರರ ಗಮನ ಸೆಳೆಯುತ್ತಿದ್ದರೆ ಮಹಿಳೆಯರಿಗಾಗಿಯೇ ವಿಶೇಷವಾಗಿ ನಿರ್ಮಿಸಿರುವ ಪಿಂಕ್ ಮತಗಟ್ಟೆ ಬಣ್ಣ ಬಣ್ಣದಿಂದ ಕೂಡಿದ್ದು ಮಹಿಳೆಯ ಆಕರ್ಷಣಿಯ ಕೇಂದ್ರವಾಗಲಿದೆ.