Punjab Election 2022: ಚುನಾವಣಾ ಕಣಕ್ಕೆ ಧುಮುಕಿದ Navjot Singh Sidhu ಪುತ್ರಿ, 'ಅಪ್ಪ ಗೆದ್ದ ನಂತರವೇ ನನ್ನ ಮದುವೆ' ಎಂದ Rabia Sidhu

Punjab Election 2022: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರ ಪುತ್ರಿ ಕೂಡ ಈಗ ಚರ್ಚೆಯಲ್ಲಿದ್ದಾರೆ. ನಿಜ ಹೇಳುವುದಾದರೆ ರಬಿಯಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ಆದರೆ ಖಂಡಿತವಾಗಿಯೂ ತಮ್ಮ ತಂದೆಯ ಪರವಾಗಿ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. 

Punjab Election 2022: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರ ಪುತ್ರಿ ಕೂಡ ಈಗ ಚರ್ಚೆಯಲ್ಲಿದ್ದಾರೆ. ನಿಜ ಹೇಳುವುದಾದರೆ ರಬಿಯಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ, ಆದರೆ ಖಂಡಿತವಾಗಿಯೂ ತಮ್ಮ ತಂದೆಯ ಪರವಾಗಿ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ನವಜೋತ್ ಸಿಂಗ್ ಸಿಧು (Navjot Singh Sidhu) ಅವರ ಪುತ್ರಿ ರಬಿಯಾ(Rabia Sidhu) ತಂದೆಯ ಕ್ಷೇತ್ರದ ಚುನಾವಣಾ ಪ್ರಚಾರದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈ ವೇಳೆ ಅವರ ಹೇಳಿಕೆಗಳು ಭಾರಿ ಸುದ್ದಿಯಾಗುತ್ತಿವೆ.

 

ಇದನ್ನೂ ಓದಿ-ಕೇಂದ್ರ ಸರ್ಕಾರದ ಗಮನ ಈಗ ಕೈಗಾರಿಕೋದ್ಯಮಿ ಸ್ನೇಹಿತರಿಗೆ ಲಾಭ ಮಾಡುವುದಾಗಿದೆ: ಪ್ರಿಯಾಂಕಾ ಗಾಂಧಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಮನೆ ಮನೆಗೆ ತೆರಳಿ ಪ್ರಚಾರ -ನವಜೋತ್ ಸಿಂಗ್ ಸಿಧು ಅವರು ಪಂಜಾಬ್‌ನ ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಬಿಯಾ ತನ್ನ ತಂದೆಯ ಪರವಾಗಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ನವಜೋತ್ ಸಿಂಗ್ ಸಿಧುಗೆ ಅಕಾಲಿದಳದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ವಿಕ್ರಮ್ ಸಿಂಗ್ ಮಜಿಥಿಯಾ ತೀವ್ರ ಪೈಪೋಟಿ ನೀಡುತ್ತಿದ್ದಾರೆ.

2 /5

2. ಚರಣಜೀತ್ ಸಿಂಗ್ ಚನ್ನಿ ಗುರಿಯಾಗಿಸಿದ ರಬಿಯಾ - ತಮ್ಮ ಚುನಾವಣಾ ಪ್ರಚಾರದ ವೇಳೆ ರಬಿಯಾ ಚರಣ್‌ಜಿತ್ ಸಿಂಗ್ ಚನ್ನಿ (Charanjit Singh Channi) ಅವರನ್ನು ಗುರಿಯಾಗಿಸಿದ್ದಾರೆ. ಚನ್ನಿ ಖಾತೆಯಲ್ಲಿ 133 ಕೋಟಿ ರೂ. ಗಳಿವೆ ಆದರೆ, ನನ್ನ ತಂದೆ ಪಂಜಾಬ್‌ನ (Punjab) ಅಭ್ಯುದಯಕ್ಕಾಗಿ ಶ್ರಮಿಸುತ್ತಿದ್ದಾರೆ, ಅವರನ್ನು ಗೌರವಿಸಬೇಕು ಎಂದು ರಬಿಯಾ ಹೇಳಿದ್ದಾಳೆ. 

3 /5

3. ಸತ್ಯದ ಪರವಾಗಿದ್ದಾರೆ ನನ್ನ ತಂದೆ - ಈ ಹಿಂದೆ ನಡೆದ ಎಲ್ಲಾ ವಿವಾದಗಳ ಬಗ್ಗೆ ಮಾತನಾಡಿರುವ ರಬಿಯಾ, 'ನನ್ನ ತಂದೆ ಸತ್ಯದ ಪರವಾಗಿದ್ದಾರೆ.  ಕಷ್ಟಗಳು ಸತ್ಯದ ದಾರಿಯಲ್ಲಿ ಬರುತ್ತವೆ, ಆದ್ದರಿಂದ ಅವರು ಮುಂದೆ ಸಾಗಲು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಸಿಧು ಪುತ್ರಿ ಹೇಳಿದ್ದಾಳೆ.

4 /5

4. ತಂದೆಯ ಗೆಲುವಿನ ಬಳಿಕವೇ ವಿವಾಹ - ಚುನಾವಣಾ ಪ್ರಚಾರದ ವೇಳೆ ಮದುವೆ ವಿಚಾರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ರಬಿಯಾ 'ತಂದೆ ಗೆಲ್ಲುವವರೆಗೂ ನಾನು ಮದುವೆಯಾಗುವುದಿಲ್ಲ' ಎಂದು ಹೇಳಿದ್ದರೆ, ಕೆಲವರು ಇದನ್ನು ರಾಜಕೀಯ ಸ್ಟಂಟ್ ಎಂದೂ ಕರೆಯುತ್ತಿದ್ದಾರೆ.

5 /5

5. ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರೀಯಳಾಗಿರುತ್ತಾಳೆ ರಬಿಯಾ-ಆದರೆ ಸಿಧು ಮಾತ್ರ ಇದುವರೆಗೆ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ತಮ್ಮ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪಂಜಾಬ್ ನಲ್ಲಿ ಫೆಬ್ರುವರಿ 20ರಂದು ಮತದಾನ ನಡೆಯಲಿದೆ. ರಬಿಯಾ, ಸಿಧು ಅವರ ರಾಜಕೀಯಕ್ಕೆ ನೇರ ಸಂಬಂಧ ಹೊಂದಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರೀಯಳಾಗಿರುವ ರಬಿಯಾ, ಆಗಾಗ್ಗ ತನ್ನ ಮನಮೋಹಕ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಾಳೆ.