ನವದೆಹಲಿ: ಲಖನೌ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿ, ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ತಮ್ಮ ಪಕ್ಷದ ಒತ್ತಡ ಕಾರಣ ಎಂದು ಹೇಳಿದ್ದಾರೆ.
'ಲಖೀಂಪುರ ಖೇರಿಯಲ್ಲಿನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಲ್ಲಿಗೆ ತಲುಪದಿದ್ದರೆ ಮತ್ತು ಪ್ರಕರಣದಲ್ಲಿ ಕ್ರಮಕ್ಕೆ ಒತ್ತಾಯಿಸಿ ಧರಣಿ ನಡೆಸದಿದ್ದರೆ ಯಾವುದೇ ಎಫ್‌ಐಆರ್ ದಾಖಲಾಗುತ್ತಿರಲಿಲ್ಲ" ಎಂದು ಪ್ರಿಯಾಂಕಾ ಅವರು ರಾಯ್ ಬರೇಲಿ ಸೇರಿದಂತೆ 70 ವಿಧಾನಸಭಾ ಕ್ಷೇತ್ರಗಳಲ್ಲಿ ಮೆಗಾ ವರ್ಚುವಲ್ ರ್ಯಾಲಿಯಲ್ಲಿ ಜನರನ್ನುದ್ದೇಶಿಸಿ ಹೇಳಿದರು.
ಇದನ್ನೂ ಓದಿ-10 Rupee Coin: 10 ರೂಪಾಯಿಯ ಯಾವ ನಾಣ್ಯ ಮಾನ್ಯವಾಗಿದೆ? ಗೊಂದಲ ನಿವಾರಿಸಿದ ಸರ್ಕಾರ
ಅಕ್ಟೋಬರ್ 3, 2021 ರಂದು ವಾಹನವೊಂದು ರೈತರನ್ನು ಹೊಡೆದುರುಳಿಸಿದಾಗ ಭುಗಿಲೆದ್ದ ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಆರೋಪಿಯಾಗಿರುವ ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಅವರ ರಾಜೀನಾಮೆಗೆ ಪ್ರಿಯಾಂಕಾ ಒತ್ತಾಯಿಸಿದ್ದರು."ನಿನ್ನೆ ಸಚಿವರ ಮಗನಿಗೆ ಜಾಮೀನು ಸಿಕ್ಕಿದೆ ಎಂಬ ವರದಿ ಬಂದಿತ್ತು. ಇದೇ ಸಚಿವರ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ವೇದಿಕೆ ಹಂಚಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಏಷ್ಯಾದ ಶ್ರೀಮಂತ ಕೈಗಾರಿಕೋದ್ಯಮಿಗಳ ಪಟ್ಟಿಯಲ್ಲಿ ಈಗ ಪ್ರಧಾನಿಯವರ ಇಬ್ಬರು ಸ್ನೇಹಿತರು ಅಗ್ರಸ್ಥಾನದಲ್ಲಿದ್ದಾರೆ ಎಂದು ಪ್ರಿಯಾಂಕಾ ಹೇಳಿದರು.ಕೇಂದ್ರ ಸರ್ಕಾರದ ಗಮನವು ರೈಲ್ವೆ, ಬಂದರುಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಖಾಸಗೀಕರಣದ ಮೂಲಕ ಅವರಿಗೆ ಲಾಭದಾಯಕವಾಗಿದೆ ಎಂದು ಅವರು ಕಿಡಿ ಕಾರಿದರು.
ಇದನ್ನೂ ಓದಿ-#JamesTeaser: ದೊಡ್ಮನೆ ಅಭಿಮಾನಿಗಳಿಗೆ ಬಿಗ್ ಗಿಫ್ಟ್; ಬಹುನಿರೀಕ್ಷಿತ 'ಜೇಮ್ಸ್' ಚಿತ್ರದ ಟೀಸರ್ ರಿಲೀಸ್
ಕಾಂಗ್ರೆಸ್‌ನ ಮೂರು ಪ್ರಣಾಳಿಕೆಗಳಲ್ಲಿ ಪಟ್ಟಿ ಮಾಡಲಾದ ಭರವಸೆಗಳನ್ನು ಅವರು ಓದಿದರು ಮತ್ತು ಎಲ್ಲಾ ಭರವಸೆಗಳನ್ನು ಈಡೇರಿಸಲು ತಮ್ಮ ಪಕ್ಷವು ಬದ್ಧವಾಗಿದೆ ಎಂದು ಹೇಳಿದರು.ಛತ್ತೀಸ್‌ಗಢದ ಕಾಂಗ್ರೆಸ್ ಸರ್ಕಾರವು ಸ್ಥಾಪನೆಯಾದ ಮೂರು ಗಂಟೆಗಳಲ್ಲಿ ರೈತರ ಸಾಲವನ್ನು ಹೇಗೆ ಮನ್ನಾ ಮಾಡಲು ಪ್ರಾರಂಭಿಸಿತು ಎಂಬುದಕ್ಕೆ ಪ್ರಿಯಾಂಕಾ ಗಾಂಧಿ ಉದಾಹರಣೆ ನೀಡಿದರು.ಅಲ್ಲಿ ಹಸುಗಳು ಮತ್ತು ರೈತರ ಕಲ್ಯಾಣಕ್ಕಾಗಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕುರಿತು ಅವರು ಮಾತನಾಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.