PV Sindhu marriage : ಒಲಿಂಪಿಕ್ ಡಬಲ್ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಖ್ಯಾತ ಪೋಸಿಡೆಕ್ಸ್ ಟೆಕ್ನಾಲಜಿ ಇಡಿ ವೆಂಕಟ ದತ್ತಾ ಸಾಯಿ ಅವರೊಂದಿಗೆ ರಿಂಗ್ ಬದಲಾಯಿಸಿಕೊಂಡಿದ್ದಾರೆ. ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಇಂದು ವೆಂಕಟ ದತ್ತ ಸಾಯಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೇ ತಿಂಗಳ 22 ರಂದು ಉದಯಪುರದಲ್ಲಿ ಸಪ್ತಪದಿ ತುಳಿಯಲಿದ್ದಾರೆ.
ಡಿಸೆಂಬರ್ 14 ಶುಕ್ರವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಪಿವಿ ಸಿಂಧು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ... ಭಾವಿ ಪತಿ ಜೊತೆಗಿನ ನಿಶ್ಚಿತಾರ್ಥದ ಫೋಟೋವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಪಿವಿ ಸಿಂಧು ಅವರು ಪೋಸಿಡೆಕ್ಸ್ ಟೆಕ್ನಾಲಜಿ ಇಡಿ ವೆಂಕಟ ದತ್ತ ಸಾಯಿ ಅವರ ಕೈ ಹಿಡಿಯಲಿದ್ದಾರೆ. ವೆಂಕಟ ದತ್ತ ಅವರು ಸಿಂಧು ಕುಟುಂಬದ ಆತ್ಮೀಯ ಸ್ನೇಹಿತರೂ ಹೌದು..
ವೆಂಕಟ ದತ್ತ ಸಾಯಿ ಮತ್ತು ಪಿವಿ ಸಿಂಧು ಅವರ ವಿವಾಹ ಡಿಸೆಂಬರ್ 22 ರಂದು ಉದಯಪುರದಲ್ಲಿ ನಡೆಯಲಿದೆ. ಇದಾದ ಬಳಿಕ ಹೈದರಾಬಾದ್‌ನಲ್ಲಿ 24ರಂದು ಆರತಕ್ಷತೆ ನಡೆಯಲಿದೆ.
ಜನವರಿ ತಿಂಗಳಲ್ಲೂ ಪಿವಿ ಸಿಂಧು ಭಾರತಕ್ಕಾಗಿ ಕೆಲವು ಟೂರ್ನಿಗಳನ್ನು ಆಡಬೇಕಾಗಿದೆ. ಮದುವೆಯ ನಂತರವೂ ಈ ಬ್ಯಾಡ್ಮಿಂಟನ್ ತಾರೆ ಆಟಗಳಲ್ಲಿ ಬ್ಯುಸಿಯಾಗಲಿದ್ದಾರಂತೆ.