ಈ ಫೋಟೋದಲ್ಲಿರುವ ಪುಟ್ಟ ಯುವತಿ ಖ್ಯಾತ ಸ್ಟಾರ್‌ ನಟಿ! ಯಾರು ಗೊತ್ತಾ? ಗೆಸ್‌ ಮಾಡಿ ನೊಡೋಣ

Raadhika Sarathkumar: ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತ ನಟಿಯರಿದ್ದಾರೆ, ಅದರಲ್ಲೂ 80-90ರ ದಶಕದಲ್ಲಿ ಸಿನಿಮಾ ಇಂಡಿಸ್ಟ್ರಿಯನ್ನು ತಮ್ಮ ನಟನೆಯಿಂದ ಅಷ್ಟೆ ಅಲ್ಲದೆ ತಮ್ಮ ಸೌಂದರ್ಯದಿಂದ ಆಳಿದ ನಟಿಯರ ಸಂಖ್ಯೆಗೇನು ಕಡಿಮೆ ಇಲ್ಲ. ಅದರಲ್ಲಿ ಈ ಫೋಟೋದಲ್ಲಿ ಕಾಣುವ ಪುಟ್ಟ ಯುವತಿ ಕೂಡ ಒಬ್ಬರು. ಯಾರದು ಗೆಸ್‌ ಮಾಡಿದ್ರಾ? ಇಲ್ಲವಾದರೆ ಈ ಸ್ಟೋರಿ ಓದಿ...
 

1 /11

 ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತ ನಟಿಯರಿದ್ದಾರೆ, ಅದರಲ್ಲೂ 80-90ರ ದಶಕದಲ್ಲಿ ಸಿನಿಮಾ ಇಂಡಿಸ್ಟ್ರಿಯನ್ನು ತಮ್ಮ ನಟನೆಯಿಂದ ಅಷ್ಟೆ ಅಲ್ಲದೆ ತಮ್ಮ ಸೌಂದರ್ಯದಿಂದ ಆಳಿದ ನಟಿಯರ ಸಂಖ್ಯೆಗೇನು ಕಡಿಮೆ ಇಲ್ಲ. ಅದರಲ್ಲಿ ಈ ಫೋಟೋದಲ್ಲಿ ಕಾಣುವ ಪುಟ್ಟ ಯುವತಿ ಕೂಡ ಒಬ್ಬರು. ಯಾರದು ಗೆಸ್‌ ಮಾಡಿದ್ರಾ? ಇಲ್ಲವಾದರೆ ಈ ಸ್ಟೋರಿ ಓದಿ...

2 /11

80, 90ರ ದಶಕದಲ್ಲಿ ಬ್ಯುಸಿ ಹೀರೋಯಿನ್ ಆಗಿದ್ದ ಈ ನಟಿ, ಈಗಲೂ ಕೂಡ ಸಿನಿಮಾಗಳಲ್ಲಿ ಸಕ್ರಿಯವಾಗಿದ್ದಾರೆ. ಸೌತ್‌ ಇಂಡಸ್ಟ್ರಿಯ ಸ್ಟಾರ್‌ ನಟರೊಂದಿಗೆ ತೆರೆ ಹಂಚಿಕೊಂಡಿರುವ ಈಕೆ ತೆಲುಗು, ತಮಿಳು, ಮಲಯಾಳಂ ಅಷ್ಟೆ ಅಲ್ಲದೆ ಕನ್ನಡ ಭಾಷೆಯಲ್ಲಿಯೂ ಸಹ ನಟಿಸಿದ್ದಾರೆ.  

3 /11

ಆಗಿನ ಕಾಲದಲ್ಲಿ ನಾಯಕಿಯಾಗಿ ಪ್ರೇಕ್ಷಕರ ಮನ ಗೆದ್ದಿದ್ದ ನಟಿ ಸದೈ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದ ಹೊರತಾಗಿ ಈ ನಟಿ ಇತ್ತೀಚೆಗೆ ರಾಜಕೀಯದಲ್ಲೂ ಸದ್ದು ಮಾಡುತ್ತಿದ್ದಾರೆ.   

4 /11

ಕಾಶ್ಮೀರಿ ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ಬಾಲಕಿಯ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿವೆ.   

5 /11

ಕೆಲ ವರ್ಷಗಳ ಹಿಂದೆ ನಟಿಯಾಗಿ ವೃತ್ತಿ ಜೀವನ ಆರಂಭಿಸಿದ ಈ ಹುಡುಗಿ ಈಗ ದಕ್ಷಿಣ ಭಾರತದ ನೆಚ್ಚಿನ ನಾಯಕಿ. 80, 90ರ ದಶಕದಲ್ಲಿ ಬ್ಯುಸಿ ಹೀರೋಯಿನ್ ಆಗಿದ್ದ ಈಕೆ, ಸದ್ಯ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  

6 /11

ಅವರು ಬೇರೆ ಯಾರು ಅಲ್ಲ ಹಿರಿಯ ನಾಯಕಿ ರಾಧಿಕಾ ಶರತ್ ಕುಮಾರ್. ರಾಧಿಕಾ ತಮಿಳು ಚಲನಚಿತ್ರ ನಟ ಮತ್ತು ಹಾಸ್ಯನಟ ಎಂಆರ್ ರಾಧಾ ಅವರ ಪುತ್ರಿ.  

7 /11

1978 ರಲ್ಲಿ, ಅವರು ಭಾರತಿರಾಜ ನಿರ್ದೇಶನದ ಇಷ್ಕಿಷ್ಕೆ ಪೋಮಿಯಾ ರೈಲ್ ಚಲನಚಿತ್ರದೊಂದಿಗೆ ತಮಿಳಿನಲ್ಲಿ ತಮ್ಮ ಮೊದಲ ಸಿನಿಮಾದ ಮೂಲಕ ಪ್ರವೇಸ ಮಾಡಿದ ಇವರು, ನಂತರ ತೆಲುಗು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿಸಿದ್ದಾರೆ.  

8 /11

ರಾಧಿಕಾ ಹೆಚ್ಚಾಗಿ  ಚಿರಂಜೀವಿ, ಕಮಲ್ ಹಾಸನ್ ಮತ್ತು ರಜನಿಕಾಂತ್ ಅವರಂತಹ ಸ್ಟಾರ್ ಹೀರೋಗಳೊಂದಿಗೆ ತೆರೆ ಹಂಚಿಕೊಂಡಿದ್ದಾರೆ.  

9 /11

ತಮಿಳಿನ ಖ್ಯಾತ ನಟ ಶರತ್‌ಕುಮಾರ್‌ ಅವರನ್ನು ರಾಧಿಕಾ  ಫೆಬ್ರವರಿ 4, 2001 ರಂದು ವಿವಾಹವಾದರು. ರಾಧಿಕಾ ಹಾಗೂ ಶರತ್‌ಕುಮಾರ್‌ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.  

10 /11

ಕೇವಲ ನಾಯಕಿಯಾಗಿ ಅಷ್ಟೆ ಅಲ್ಲ, ಪೋಷಕ ಪಾತ್ರದಲ್ಲಿ ಮಾತ್ರವಲ್ಲ. ರಾಧಿಕಾ ನಿರ್ದೇಶಕಿ ಹಾಗೂ ನಿರ್ಮಾಪಕಿಯಾಗಿಯೂ ಸಿಕ್ಕಾಪಟ್ಟೆ ಸದ್ದು ಮಾಡಿದ್ದಾರೆ.  

11 /11

ರಾಧಿಕಾ ರೇಡಾನ್ ಮೀಡಿಯಾ ವರ್ಕ್ಸ್ ಇಂಡಿಯಾ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದು, ಒಂದು ರಾಷ್ಟ್ರೀಯ ಪ್ರಶಸ್ತಿ, ಆರು ಫಿಲಂಫೇರ್ ಪ್ರಶಸ್ತಿಗಳು, ಎರಡು ನಂದಿ ಪ್ರಶಸ್ತಿಗಳು ಮತ್ತು ತಮಿಳುನಾಡು ಸರ್ಕಾರದ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಮೂರು ಬಾರಿ ಗೆದ್ದಿದ್ದಾರೆ.