Actor Shashikumar: ನಟ ಶಶಿ ಕುಮಾರ್‌ ಪತ್ನಿ ಹೇಗಿದ್ದಾರೆ ಗೊತ್ತಾ? ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆ ಇವರು!!

Actor Shashikumar Wife: ಡ್ಯಾನ್ಸ್‌, ನಟನೆ, ಒಳ್ಳೆಯ ಸಂಭಾಷಣೆ ಮುಂತಾದ ಪರಿಣಿತಿ ಪಡೆದು ಸಿನಿರಂಗಕ್ಕೆ ಕಾಲಿಟ್ಟ ಚಿಗುರುಮೀಸೆ ಕೆಂಬಣ್ಣದ ಹುಡುಗ ನಟ ಶಶಿಕುಮಾರ್..‌ ಆರಂಭದಲ್ಲಿ ವಿಲನ್‌ ಪಾತ್ರದಲ್ಲಿ ನಟಿಸಿದ್ದ ನಟ ತನ್ನ ಅದ್ಭುತ ನಟನೆಯಿಂದಲೇ ಬಹುಬೇಗನೆ ನಾಯಕನಾಗುವ ಅವಕಾಶ ಗಿಟ್ಟಿಸಿಕೊಂಡರು.. 

1 /5

ನಟ ಶಿಶಿಕುಮಾರ್‌ ಕಡಿಮೆ ಅವಧಿಯಲ್ಲೇ ದೊಡ್ಡ ಬೇಡಿಕೆಯ ನಟನಾಗಿ ಹೊರಹೊಮ್ಮಿದರು... ಹಲವಾರು ನಾಯಕಿಯರೊಂದಿಗೆ ತೆರೆಹಂಚಿಕೊಂಡು 90ರ ದಶಕದ ಟಾಪ್‌ ಹಿರೋ ಆದರು.. ಹೀಗೆ ಖ್ಯಾತಿಯ ಜೊತೆಗೆ ಇವರಿಗೆ ತೆಲುಗು, ತಮಿಳು, ಸಿನಿಮಾಗಳಲ್ಲಿ ಅವಕಾಶಗಳು ಒದಗಿಬಂದವು..   

2 /5

ಕನ್ನಡ ಸಿನಿರಂಗಕ್ಕೆ ಸುಪ್ರೀಂ ಹಿರೋ ಸಿಕ್ಕಿದ್ದಾರೆ ಎನ್ನುವ ಸಮಯದಲ್ಲೇ ನಟನ ಬಾಳಲ್ಲಿ ಘೋರ ದುರಂತವೇ ನಡೆದುಹೋಯಿತು.. ಶಾಪವೋ ದೃಷ್ಟಿಯೋ ಗೊತ್ತಿಲ್ಲ.. ರಸ್ತೆ ಅಪಘಾತಕ್ಕೆ ಸಿಕ್ಕಿ ಶಶಿಕುಮಾರ್‌ ಮುಖ ಛಿದ್ರ ಛಿದ್ರವಾಯಿತು.. ಆ ಆಘಾತದಲ್ಲಿ ಇವರು ಉಳಿದುಬಂದದ್ದೆ ಮ್ಯಾಜಿಕ್..‌ ಇದರಿಂದ ಅವರ ಮುಖದ ಅಂದವೇ ಕುಗ್ಗಿಹೋಯಿತು..   

3 /5

ಹತ್ತಾರು ವರ್ಷ ತಮ್ಮ ಅದ್ಭುತ ನಟನೆ ಹಾಗೂ ಮುದ್ದು ಮುಖದಿಂದ ಅಭಿಮಾನಿಗಳನ್ನು ರಂಜಿಸಿದ ನಟ ತಮ್ಮ ಮೂಲಕ ರೂಪವನ್ನೇ ಕಳೆದುಕೊಂಡರು.. ಯಶಸ್ಸಿನ ಉತ್ತುಂಗದಲ್ಲಿದ್ದ ನಟನ ಕೆರಿಯರ್‌ ನೆಲಕಚ್ಚಿದ್ದು ಆಗಲೇ..  ಕಡಿಮೆ ಸಮಯದಲ್ಲಿ ದೊಡ್ಡ ಖ್ಯಾತಿ ಗಳಿಸಿದ್ದ ಇವರ ಜೀವನವನ್ನು ಬದಲಿಸಿದ್ದು ಬೆಂಗಳೂರಿನ ಶಿವಾನಂದ ಸರ್ಕಲ್‌ನಲ್ಲಾದ ಅಪಘಾತ..   

4 /5

ಮುಂದೆ ಬರೋಬ್ಬರಿ 10 ಕೋಟಿಗೂ ಅಧಿಕ ಹಣ ಖರ್ಚುಮಾಡಿ ಇವರ ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಲಾಗಿತ್ತು.. ಇಂತಹ ಸಮಯದಲ್ಲಿ ಅವರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಶಕ್ತಿ ತುಂಬಿದ್ದು ಅವರ ಪತ್ನಿ ಸರಸ್ವತಿ.  

5 /5

ಕಾಲೇಜು ದಿನಗಳಲ್ಲಿ ಶಶಿಕುಮಾರ್‌ ಹಾಗೂ ಸರಸ್ವತಿ ಅವರ ಮಧ್ಯೆ ಪ್ರೀತಿ ಚಿಗುರಿ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದರು. ನಟ ಆಘಾತಕ್ಕೊಳಗಾದಾಗ ಸರಸ್ವತಿಯವರು ಅವರ ಆರ್ಥಿಕ ಪರಿಸ್ಥಿತಿಯಿಂದ ಹಿಡಿದು ಅವರ ಮನಸ್ಥಿತಿಯವರೆಗೂ ಎಲ್ಲವನ್ನು ಕಾಳಜಿಯಿಂದ ನೋಡಿಕೊಂಡರು..