ಎಟಿಎಂನಿಂದ ಹಣ ವಿಡ್ರಾ ಮಾಡುವ ನಿಯಮದಲ್ಲಿ ಬದಲಾವಣೆ.! ಸಂಕಷ್ಟದಲ್ಲಿ ಗ್ರಾಹಕರು

ಎಸ್‌ಬಿಐ ತನ್ನ ಗ್ರಾಹಕರಿಗೆ ಹೊಸ ಮಾರ್ಗಸೂಚಿಯನ್ನು  ಬಿಡುಗಡೆ ಮಾಡಿದೆ. 

 ಬೆಂಗಳೂರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿರುವವರಿಗೆ ಇದು ಮಹತ್ವದ ಸುದ್ದಿಯಾಗಿದೆ. ಎಟಿಎಂನಿಂದ ಹಣವನ್ನು ವಿಡ್ರಾ ಮಾಡುವ ನಿಯಮವನ್ನು ಬ್ಯಾಂಕ್ ಬದಲಾಯಿಸಿದೆ. ಇದಕ್ಕೆ ಸಂಬಂಧಿಸಿದಂತೆ ಎಸ್‌ಬಿಐ ತನ್ನ ಗ್ರಾಹಕರಿಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ ಹಣ  ವಿಡ್ರಾ ಮಾಡುವ ನಿಯಮವನ್ನು ಬದಲಾಯಿಸಿದೆ.  ನೀವು ಕೂಡಾ ಎಸ್ ಬಿಐ ಗ್ರಾಹಕರಾಗಿದ್ದರೆ ಈ ಹೊಸ ನಿಯಮವನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ.  

2 /5

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಒಟಿಪಿ ಆಧಾರದ ಮೇಲೆ ನಗದು ಡ್ರಾ ಮಾಡುವ ಸೌಲಭ್ಯವನ್ನು ನೀಡುತ್ತಿದೆ.  ಹೀಗಾಗಿ ಗ್ರಾಹಕರು, ಹಣ ಡ್ರಾ ಮಾಡುವ ವೇಳೆ ತಮ್ಮ ಫೋನ್ ಅನ್ನು  ತೆಗೆದುಕೊಂಡು ಹೋಗಬೇಕಾಗುತ್ತದೆ. 

3 /5

ನೊಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುವುದರಿಂದ,  ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಿಮ್ಮೊಂದಿಗೆ ಇಟ್ಟುಕೊಂಡಿರಬೇಕು. OTP ಹಾಕಿದ ನಂತರವೇ ಎಟಿಎಂ ನಿಂದ   ಹಣವನ್ನು  ಡ್ರಾ ಮಾಡುವುದು ಸಾಧ್ಯವಾಗುತ್ತದೆ. 

4 /5

10,000 ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಡ್ರಾ ಮಾಡಬೇಕಾದರೆ   OTP ಹಾಕಬೇಕಾಗುತ್ತದೆ. 10,000  ಕ್ಕಿಂತ ಕಡಿಮೆ ಹಣ ಡ್ರಾ ಮಾಡಬೇಕಾದರೆ  OTP ಅಗತ್ಯವಿಲ್ಲ.  

5 /5

ಎಟಿಎಂನಿಂದ ಹಣ ತೆಗೆಯಲು ಹೋದಾಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಇದಾದ ನಂತರ ನಿಮ್ಮ ಫೋನ್‌ಗೆ OTP ಬರುತ್ತದೆ.  ಈ ಕೋಡ್ ಕೇವಲ ಒಂದು ವಹಿವಾಟಿಗೆ ಮಾತ್ರ ಮಾನ್ಯವಾಗಿರುತ್ತದೆ.