Tata Nexon EV ಕಾರ್ ಬುಕ್ ಮಾಡುವ ಗ್ರಾಹಕರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಹಲವು ಆಕರ್ಷಕ ಕೊಡುಗೆಗಳನ್ನು ನೀಡುತ್ತಿದೆ.
ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI)ತನ್ನಗ್ರಾಹಕರಿಗೆ ಒಳ್ಳೆಯ ಸುದ್ದಿಯೊಂದನ್ನು ಪ್ರಕಟಿಸಿದೆ. ವಾಹನ ಸಾಲ ಗ್ರಾಹಕರನ್ನು ಆಕರ್ಷಿಸಲು ಎಸ್‌ಬಿಐ ಉತ್ತಮ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ. ಈ ಯೋಜನೆಯ ಅಡಿ ನೀವು ಟಾಟಾ ಮೋಟರ್ಸ್ ಕಂಪನಿಯ ಎಲೆಕ್ಟ್ರಿಕ್ ಕಾರನ್ನು ಖರೀದಿಸುವ ಮೂಲಕ ಉಚಿತ ಹೋಮ್ ಚಾರ್ಜರ್ ಪಡೆಯಬಹುದು.
ಈ ಕುರಿತು ತನ್ನ ಟ್ವಿಟ್ಟರ್ ಖಾತೆಯ ಮೂಲಕ ಭಾರತೀಯ ಸ್ಟೇಟ್ ಬ್ಯಾಂಕ್ ಮಾಹಿತಿ ನೀಡಿದ್ದು. ಒಂದು ವೇಳೆ ನೀವು Tata Nexon EV ವಾಹನ ಬುಕ್ ಮಾಡಿದರೆ, ನಿಮಗೆ ಹಲವು ಆಕರ್ಷಕ ಕೊಡುಗೆಗಳ ಲಾಭ ಸಿಗಲಿದೆ. ಇದರ ಅಡಿ ಗ್ರಾಹಕರಿಗೆ ಅವರ ಮನೆಯಲ್ಲಿಯೇ ಉಚಿತವಾಗಿ ಹೋಮ್ ಚಾರ್ಜರ್ ಇನ್ಸ್ಟಾಲ್ ಮಾಡಿ ಕೊಡಲಾಗುವುದು ಎಂದು ಬ್ಯಾಂಕ್ ಹೇಳಿದೆ.
ಸಾಮಾನ್ಯವಾಗಿ ಯಾವುದೇ ಒಂದು ಇಲೆಕ್ಟ್ರಿಕ್ ಕಾರ್ ಬ್ಯಾಟರಿಯನ್ನು ಚಾರ್ಜ್ ಮಾಡಲು ಚಾರ್ಜಿಂಗ್ ಸ್ಟೇಷನ್ ಗೆ ಭೇಟಿ ನೀಡಬೇಕು. ಆದರೆ, ಒಂದು ವೇಳೆ ಚಾರ್ಜಿಂಗ್ ಸೌಲಭ್ಯ ಮನೆಯಲ್ಲಿಯೇ ಲಭಿಸಿದರೆ, ಹೊರಗಡೆ ಹೋಗಿ ಚಾರ್ಜಿಂಗ್ ಮಾಡುವುದರ ನಿಮ್ಮ ತಾಪತ್ರಯ ತಪ್ಪಲಿದೆ.
ವಾಹನ ಖರೀದಿಸುವ ಗ್ರಾಹಕರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ಆಕರ್ಷಕ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಬ್ಯಾಂಕ್ Tata Nexon EV ಮತ್ತು ಇತರೆ ವಾಹನ ಖರೀದಿಸಲು ಬಯಸುವ ಗ್ರಾಹಕರಿಗೆ ಶೇ.7.50ರಷ್ಟು ಬಡ್ಡಿ ದರದಲ್ಲಿ ಆಟೋ ಲೋನ್ ಆಫರ್ ನೀಡುತ್ತಿದೆ. ಶೀಘ್ರದಲ್ಲಿಯೇ ಆಟೋ ಸಾಲ ಪಡೆಯಲು ನೀವು SBIYONO ಮೂಲಕ ಅಪ್ಲೈ ಮಾಡಬಹುದು. ಇಲ್ಲಿ ಇನ್ನೊಂದು ಮಹತ್ವದ ವಿಷಯ ಎಂದರೆ ಇದರಲ್ಲಿ ನಿಮಗೆ ಝೀರೋ ಪ್ರೊಸೆಸಿಂಗ್ ಫೀಸ್ ಮೇಲೆ ಸಾಲ ಲಭಿಸುತ್ತದೆ.
Tata Nexon EV ಬುಕಿಂಗ್ ಮಾಡಲು ಮೊದಲು ನೀವು ಯೋನೋ (YONO) ಆಪ್ ಮೂಲಕ ಲಾಗಿನ್ ಆಗಬೇಕು. ಇದೀಗ ನೀವು ಆಟೋಮೊಬೈಲ್ ಆಪ್ಶನ್ ಮೇಲೆ ಕ್ಲಿಕ್ಕಿಸಬೇಕು. ಬಳಿಕ ಟಾಟಾ ಮೋಟರ್ಸ್ ಆಪ್ಶನ್ ಆಯ್ಕೆ ಮಾಡಬೇಕು. ಅಲ್ಲಿ ನೀವು Tata Nexon EV ಆಯ್ಕೆ ಮಾಡಬೇಕು.
Next Gallery