ಕನಸಿನಲ್ಲಿ ಇವುಗಳನ್ನು ಕಂಡರೆ ಶೀಘ್ರದಲ್ಲೇ ನಿಮ್ಮ ಅದೃಷ್ಟ ಬದಲಾಗಲಿದೆ ಎಂದರ್ಥ

                              

ಸಪ್ನ ಶಾಸ್ತ್ರದಲ್ಲಿ ಕನಸಿನ ಅರ್ಥಗಳ ಬಗ್ಗೆ ಉಲ್ಲೇಖವಿದೆ. ಕನಸಿನ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಕನಸಿನಲ್ಲಿ ಕಾಣುವ ಕೆಲವು ಘಟನೆಗಳು ಮುಂದಾಗುವ ಶುಭ-ಅಶುಭ ಘಟನೆಗಳನ್ನು ಸೂಚಿಸುತ್ತವೆ ಎಂದು ನಂಬಲಾಗಿದೆ. ಕೆಲವು ವಸ್ತುಗಳನ್ನು ಕನಸಿನಲ್ಲಿ ಕಂಡರೆ ಶೀಘ್ರದಲ್ಲೇ ನಿಮ್ಮ ಅದೃಷ್ಟದ ಬಾಗಿಲು ತೆರೆಯಲಿದೆ ಎಂಬುದರ ಸಂಕೇತ ಎನ್ನಲಾಗುತ್ತದೆ. ಹಾಗಿದ್ದರೆ ಕನಸಿನಲ್ಲಿ ಯಾವ ವಸುಗಳನ್ನು ಕಂಡರೆ ಶುಭ ಎಂದು ತಿಳಿಯೋಣ... 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಪ್ರೀತಿ-ಪ್ರೇಮದ ಸಂಕೇತ ಎಂದು ಬಣ್ಣಿಸಲ್ಪಡುವ ಗುಲಾಬಿ ಹೂವುಗಳನ್ನು ಕನಸಿನಲ್ಲಿ ತುಂಬಾ ಶುಭ ಎಂದು ಹೇಳಲಾಗುತ್ತದೆ. ಇದು ಶೀಘ್ರದಲ್ಲೇ ಸಂಪತ್ತಿನ ಅಧಿದೇವತೆ ತಾಯಿ ಲಕ್ಷ್ಮಿಯ ಕೃಪೆ ನಿಮ್ಮ ಮೇಲೆ ಬೀಳಲಿದೆ ಎಂಬುದರ ಸಂಕೇತವಾಗಿದೆ. 

2 /5

ನೀವು ಕನಸಿನಲ್ಲಿ ಜೋರು ಮಳೆ ಬರುತ್ತಿರುವುದನ್ನು ಕಂಡರೆ ನಿಮ್ಮ ಹಳೆ ಸಾಲಗಳಿಂದ ಮುಕ್ತಿ ದೊರೆಯಲಿದೆ. ನೀವು ಆರ್ಥಿಕವಾಗಿ ಬಲಿಷ್ಠರಾಗುವಿರಿ ಎಂಬುದನ್ನು ಇದು ಸೂಚಿಸುತ್ತದೆ. 

3 /5

ಧರ್ಮ ಗ್ರಂಥಗಳಲ್ಲಿ, ಪೊರಕೆಯನ್ನು ಲಕ್ಷ್ಮಿ ದೇವಿಯ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ನೀವು ಕನಸಿನಲ್ಲಿ ಪೊರಕೆಯನ್ನು ಕಂಡರೆ ಶೀಘ್ರದಲ್ಲೇ ನಿಮಗೆ ಸಿರಿವಂತರಾಗುವ ಯೋಗವಿದೆ ಎಂಬುದರ ಸಂಕೇತವಾಗಿದೆ. 

4 /5

ಕನಸಿನಲ್ಲಿ ಚಂದ್ರನನ್ನು ನೋಡಿದರೆ ಅದೂ ಕೂಡ ಲಕ್ಷ್ಮಿ ದೇವಿ ನಿಮ್ಮ ಮನೆ ಪ್ರವೇಶಿಸುವಳು ಎಂಬುದರ ಸಂಕೇತವಾಗಿದೆ. 

5 /5

ಹಣ್ಣುಗಳಿಂದ ತುಂಬಿದ ಮರವನ್ನು ಕನಸಿನಲ್ಲಿ ಕಂಡರೆ ಅದು ಶೀಘ್ರದಲ್ಲೇ ನಿಮ್ಮ ಅದೃಷ್ಟ ಬದಲಾಗಲಿದೆ. ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಪಡೆಯಲಿದ್ದೀರಿ ಎಂಬುದನ್ನೂ ಸೂಚಿಸುತ್ತದೆ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.