Hina Khan cancer : ನಟ-ನಟಿಯರು ಸ್ಕ್ರೀನ್ ಮೇಲೆ ನಗು ನಗುತ್ತಲೇ ಇರುತ್ತಾರೆ, ಅದರೆ, ಅವರು ತಮ್ಮ ಜೀವನದಲ್ಲಿ ಹಲವಾರು ಸೋವುಗಳನ್ನು ಅನುಭವಿಸುತ್ತಿರುತ್ತಾರೆ.. ಅದರಂತೆ ತಮ್ಮ ನಟನೆಯಿಂದ ಖ್ಯಾತಿ ಗಳಿಸಿದ್ದ ನಟಿ ಇದೀಗ ತಮಗೆ ಕ್ಯಾನ್ಸರ್ ಇರುವ ವಿಚಾರವನ್ನು ಮೊದಲ ಬಾರಿಗೆ ಅಭಿಮಾನಿಗಳ ಮುಂದೆ ಬಹಿರಂಗ ಪಡಿಸಿದ್ದಾರೆ.. ಯಾರು ಆ ನಟಿ..? ಬನ್ನಿ ತಿಳಿಯೋಣ..
ಬಾಲಿವುಡ್ ಚಿತ್ರರಂಗದಲ್ಲಿ ಕೆಲವು ಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆಗಿರುವ ನಟಿ ಹಿನಾ ಖಾನ್ ತಮಗೆ ಸ್ತನ ಕ್ಯಾನ್ಸರ್ ಇರುವುದು ನಿಜ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ದೃಢಪಡಿಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
ಇತ್ತೀಚೆಗೆ ಅನೇಕ ನಟಿಯರು ತಮ್ಮ ಜೀವನದ ಬಗ್ಗೆ ಮಾತ್ರವಲ್ಲದೆ ತಮ್ಮ ಆರೋಗ್ಯದ ಬಗ್ಗೆಯೂ ಅಭಿಮಾನಿಗಳ ಮುಂದೆ ಹೇಳಿಕೊಳ್ಳುತ್ತಿದ್ದಾರೆ. ಏಕೆಂದರೆ ಹಲವಾರು ವದಂತಿಗಳು ಹರಡುವ ಮುನ್ನ ತಮ್ಮ ಸಮಸ್ಯೆಗಳ ಕುರಿತು ತಾವೇ ಹೇಳಿಕೊಂಡರೆ ಒಳ್ಳೆಯದು ಎನ್ನುವುದು ಅವರ ಅಭಿಪ್ರಾಯ..
ಸಧ್ಯ 36 ವರ್ಷದ ಬಾಲಿವುಡ್ ನಟಿ ಹಿನಾ ಖಾನ್ ತಾವು ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಬಹಿರಂಗ ಪಡಿಸಿದ್ದಾರೆ. ಈ ವಿಚಾರ ತಿಳಿದು ಆಕೆಯ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ, ಇನ್ನೂ ಕೆಲವರು ಧೈರ್ಯವಾಗಿರುವಂತೆ ಕೋರಿದ್ದಾರೆ..
ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಹಿನಾ.. "ಎಲ್ಲರಿಗೂ ನಮಸ್ಕಾರ, ಇತ್ತೀಚಿನ ವದಂತಿಗಳಿಗೆ ಮುಕ್ತಿ ನೀಡಲು ಈ ಪೋಸ್ಟ್ ಹಂಚಿಕೊಂಡಿದ್ದೇನೆ, ನನಗೆ ಹಂತ III ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಈ ಸವಾಲಿನ ಸಮಯದಲ್ಲಿಯೂ, ನಾನು ಚೆನ್ನಾಗಿಯೇ ಇದ್ದೇನೆ." ನಾನು ಈ ರೋಗವನ್ನು ಜಯಿಸಲು ದೃಢನಿಶ್ಚಯ ಮತ್ತು ದೃಢಸಂಕಲ್ಪ ಮಾಡಿದ್ದೇನೆ.. ಈಗಾಗಲೇ ಚಿಕಿತ್ಸೆ ಪ್ರಾರಂಭವಾಗಿದ್ದು, ಇದರಿಂದ ಹೊರಬರಲು ನಾನು ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ ಎಂದು ಹಿನಾ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ..
ಅಲ್ಲದೆ, ಈ ಸಮಯದಲ್ಲಿ ನಿಮ್ಮ ಪ್ರೀತಿ, ಶಕ್ತಿ ಮತ್ತು ಆಶೀರ್ವಾದ ನನಗೆ ಮುಖ್ಯ.. ಆದಷ್ಟು ಬೇಗ ನಾನು ಈ ಸವಾಲನ್ನು ಜಯಿಸುತ್ತೇನೆ, ಸಂಪೂರ್ಣವಾಗಿ ಆರೋಗ್ಯವಾಗಿರುತ್ತೇನೆ. ನಿಮ್ಮ ಪ್ರಾರ್ಥನೆ, ಆಶೀರ್ವಾದ ಮತ್ತು ಪ್ರೀತಿ ನನ್ನ ಮೇಲೆ ಇರಲಿ ಅಂತ ಹಿನಾ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.
ಈ ಪೋಸ್ಟ್ ಹಿನಾ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದೆ... ಈಗ ತಾನೆ ಚೇತರಿಸಿಕೊಂಡಿದ್ದೇನೆ ಎಂದು ಹೀನಾ ಮಾಹಿತಿ ನೀಡಿ ಸಾಂತ್ವನ ಹೇಳಿದ್ದಾರೆ. ಚಲನಚಿತ್ರಗಳು ಮತ್ತು ಧಾರಾವಾಹಿಗಳ ಹೊರತಾಗಿ, ಹಿನಾ ಖಾನ್ ವೆಬ್ ಸರಣಿ ಮತ್ತು ಹಿಂದಿ ಬಿಗ್ ಬಾಸ್ ಸೀಸನ್ 11 ನಲ್ಲಿಯೂ ಕಾಣಿಸಿಕೊಂಡಿದ್ದಾರೆ.