2022ರಲ್ಲಿ ಕೆಲವು ಷೇರುಗಳು ಹೂಡಿಕೆದಾರರಿಗೆ ದೊಟ್ಟಮಟ್ಟದ ನಷ್ಟವನ್ನುಂಟು ಮಾಡಿದೆ. ಬಂಪರ್ ಲಾಭದ ನಿರೀಕ್ಷೆಯಿಂದ ಈ ಷೇರುಗಳಲ್ಲಿ ಹೂಡಿಕೆ ಮಾಡಿದ ಜನರು ಕೈಸುಟ್ಟುಕೊಂಡು ನಿರಾಸೆ ಅನುಭವಿಸಿದ್ದಾರೆ.
ನವದೆಹಲಿ: 2021ರಲ್ಲಿ ಹೂಡಿಕೆದಾರರಿಗೆ ಬಂಪರ್ ಲಾಭವನ್ನು ತಂದುಕೊಟ್ಟ ಹಲವಾರು ಷೇರುಗಳಿವೆ. ಆದರೆ 2022ರಲ್ಲಿ ಅನೇಕ ಸ್ಟಾಕ್‍ಗಳು ನಿರೀಕ್ಷಿತ ಲಾಭ ತಂದುಕೊಡದೆ ನಿರಾಸೆ ಮೂಡಿಸಿವೆ. 2021ರಲ್ಲಿ ಕೆಲವು ಷೇರುಗಳು ಹೂಡಿಕೆದಾರರನ್ನು ಶ್ರೀಮಂತರನ್ನಾಗಿ ಮಾಡಿದ್ರೆ, 2022ರಲ್ಲಿ ಕೆಲವು ಷೇರುಗಳು ಹೂಡಿಕೆದಾರರಿಗೆ ದೊಡ್ಡ ನಷ್ಟವನ್ನುಂಟು ಮಾಡಿವೆ. ಇಂತಹ ಕೆಲವು ಷೇರುಗಳ ಬಗ್ಗೆ ಇಲ್ಲಿದೆ ಮಾಹಿತಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
Paytm ಷೇರು 2021ರ ನವೆಂಬರ್ ತಿಂಗಳಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಯಿತು. 1 ರೂ. ಮುಖಬೆಲೆಯ ಈ ಷೇರು 2080-2150 ರೂ. ದರದಲ್ಲಿ ಐಪಿಒಗೆ ಬಂದಿತ್ತು. ಆದರೆ ಈ ಷೇರು ಹೂಡಿಕೆದಾರರಿಗೆ ದೊಡ್ಡಮಟ್ಟದ ನಷ್ಟವನ್ನುಂಟು ಮಾಡಿದೆ. ಈ ಷೇರು ಒಂದು ಬಾರಿ 1,955 ರೂ.ಗೆ ಏರಿತ್ತು. ಆ ಸಮಯದಲ್ಲಿ ಈ ಷೇರಿನಲ್ಲಿ ಹೂಡಿಕೆ ಮಾಡಿದವರಿಗೆ ದೊಡ್ಡಮಟ್ಟದ ನಷ್ಟವಾಗಿದೆ. Paytm ಷೇರು ಶುಕ್ರವಾರದಂದು 6.60 ರೂ. ಏರಿಕೆ ಕಂಡು 546.40 ರೂ.ಗೆ ತಲುಪಿದೆ. ಈ ಷೇರಿನಲ್ಲಿ 1 ಲಕ್ಷ ಹೂಡಿಕೆ ಮಾಡಿದವರಿಗೆ ಶೇ.60ರಷ್ಟು ಅಂದರೆ 60 ಸಾವಿರ ರೂ. ನಷ್ಟವುಂಟಾಗಿದೆ.
Dhani Services ಸ್ಟಾಕ್‌ನ ಸ್ಥಿತಿಯೂ ಉತ್ತಮವಾಗಿಲ್ಲ. ಫೆಬ್ರವರಿ 2021ರಲ್ಲಿ Life Time High 268 ರೂ.ಗೆ ತಲುಪಿದ್ದ ಈ ಷೇರು ಈಗ 48 ರೂ.ಗೆ ಕುಸಿದಿದೆ. ಈ ಸ್ಟಾಕ್‌ನ 52 ವಾರಗಳ ಗರಿಷ್ಠ ಮಟ್ಟವು 180.90 ರೂ. ಇದೆ. ಇದರಲ್ಲಿ ಹೂಡಿಕೆ ಮಾಡಿದ ಜನರು ಕೈಸುಟ್ಟುಕೊಂಡಿದ್ದಾರೆ.
ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ 3I Infotech ಷೇರು 42 ರೂ. ತಲುಪಿದೆ. ಡಿಸೆಂಬರ್ 2021ರಲ್ಲಿ ಈ ಷೇರಿನ Life Time High 119.30 ರೂ. ಇತ್ತು. ಆದರೆ ಈಗ ಈ ಷೇರು ಶೇ.52ರಷ್ಟು ಕುಸಿತ ಕಂಡಿದ್ದು, ಹೂಡಿಕೆದಾರರಿಗೆ ದೊಡ್ಡಮಟ್ಟದ ನಷ್ಟವನ್ನುಂಟು ಮಾಡಿದೆ.
ಅಕ್ಟೋಬರ್ 2021ರಲ್ಲಿ 1279.26 ರೂ. ಇದ್ದ IRCTC ಷೇರು ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ 718 ರೂ.ಗೆ ಬಂದು ತಲುಪಿದೆ. 52 ವಾರಗಳ ಈ ಸ್ಟಾಕ್‌ನ ಉನ್ನತ ಮಟ್ಟ(Life Time High)ವು 919.70 ರೂ.ಇದೆ. ಈ ಷೇರಿನಲ್ಲಿ ಹೂಡಿಕೆ ಮಾಡಿದವರು ಇಂದು ದೊಡ್ಡಮಟ್ಟದ ನಷ್ಟವನ್ನು ಅನುಭವಿಸಿದ್ದಾರೆ.
7,465.40 ರೂ. lifetime highಗೆ ತಲುಪಿದ ನಂತರ Info Edge india ಷೇರು ಇದೀಗ ಕೊಂಚ ಚೇತರಿಕೆ ಹಂತಕ್ಕೆ ಬಂದು ನಿಂತಿದೆ. ಈ ಷೇರು ನಿರಂತರವಾಗಿ ಕುಸಿತ ಕಾಣುವ ಮೂಲಕ 3,900 ರೂ.ಗೆ ಬಂದು ತಲುಪಿದೆ. ಕೇವಲ ಒಂದೇ ವರ್ಷದಲ್ಲಿ ಈ ಷೇರು ಹೂಡಿಕೆದಾರರಿಗೆ ಸುಮಾರು ಶೇ.36ರಷ್ಟು ನಷ್ಟವನ್ನುಂಟು ಮಾಡಿದೆ.