Sanya Iyer: ಶೆಟ್ಟಿ ವಧು ಧರಿಸುವ ಒಡ್ಡುಂಗುರ ಸಾನ್ಯ ಅಯ್ಯರ್ ಕೈಯಲ್ಲಿ!! ಗುಟ್ಟಾಗಿ ಮದುವೆಯಾದ್ರಾ ಪುಟ್ಟ ಗೌರಿ?

Sanya Iyer: ಸ್ಯಾಂಡಲ್ವುಡ್ ನ ಅನೇಕ ಸಿನಿಮಾಗಳಲ್ಲಿ ಬಾಲನಟಿಯಾಗಿ ಬಣ್ಣಹಚ್ಚಿ, ಕಿರುತೆರೆಯಲ್ಲೂ ಮಿಂಚಿರುವ ಸಾನ್ಯ ಅಯ್ಯರ್ ಇದೀಗ ಒಂದು ಉಂಗುರದಿಂದಾಗಿ ಸಖತ್ ಸುದ್ದಿಯಲ್ಲಿದ್ದಾರೆ.

1 /5

ದಕ್ಷಿಣ ಕನ್ನಡ, ಮಂಗಳೂರಿನಲ್ಲಿ ಬಂಟ ಅಥವಾ ಶೆಟ್ಟಿ ಸಮುದಾಯದ ಮದುವೆಯಾದ ಮಹಿಳೆಯರು ತಾಳಿಯಷ್ಟೇ ಪವಿತ್ರ ಎಂದು ಆರಾಧಿಸಿ ಧರಿಸುವ ಉಂಗುರವನ್ನು ಸಾನ್ಯ ಅಯ್ಯರ್ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

2 /5

ಸಾನ್ಯ ಅಯ್ಯರ್ ಮತ್ತು ರೂಪೇಶ್ ಶೆಟ್ಟಿ ಇಬ್ಬರೂ ಬಿಗ್ ಬಾಸ್ ಸ್ಪರ್ಧಿಗಳು. ಅದರಲ್ಲೂ ರೂಪೇಶ್ ವಿನ್ನರ್ ಆಗಿ ಇತ್ತೀಚಿಗೆ ಹೊರಹೊಮ್ಮಿದ್ದಾರೆ. ಇವರಿಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

3 /5

ಇವೆಲ್ಲದರ ಮಧ್ಯೆ ಶೆಟ್ಟಿ ವಧು ಧರಿಸುವ ಒಡ್ಡುಂಗರ/ ಒಡ್ಡು ಉಂಗುರ/ ಒಡ್ಡಿ ಉಂಗಿಲವನ್ನು ಧರಿಸಿರುವುದು, ಸಾನ್ಯ ಅಯ್ಯರ್ ಗುಟ್ಟಾಗಿ ಮದುವೆಯಾಗಿದ್ದಾರೆಯೇ? ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತಿದೆ.

4 /5

ಈ ಒಡ್ಡು ಉಂಗುರ/ಒಡ್ಡು ಉಂಗುರ/ ಒಡ್ಡಿ ಉಂಗಿಲ/ ಒಡ್ಡಿಂಗಿಲ ಎಂದು ಕರೆಯಲ್ಪಡುವ ಉಂಗುರವನ್ನು ಬಂಟ ಸಮುದಾಯ ಅಥವಾ ಶೆಟ್ಟಿ ಸಮುದಾಯದ ವಿವಾಹಿತ ಮಹಿಳೆಯರು ಮಾತ್ರ ಧರಿಸುತ್ತಾರೆ. ತಾಳಿಯಷ್ಟೇ ಪ್ರಾಮುಖ್ಯತೆ ಪಡೆದಿರುವ, ವಿವಾಹವಾಗಿದೆ ಎಂಬುದನ್ನು ಸೂಚಿಸುವ ಉಂಗುರ ಇದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದನ್ನು ಫ್ಯಾಷನ್ ರೀತಿ ಅನೇಕರು ಬಳಸುತ್ತಾರೆ.

5 /5

ಮನೆಯಿಂದ ದಿಬ್ಬಣ ಹೊರಡುವ ಮುನ್ನ, ವಧುವಿನ ಅತ್ತಿಗೆ/ನಾದಿನಿ ಆದವಳು ಮದುಮಗಳಿಗೆ ತೊಡಿಸುವ ಪ್ರಮುಖ ಉಂಗುರ ಇದಾಗಿದೆ. ಮದುವೆಯಾಗಿ ಗಂಡನ ಮನೆಗೆ ಹೋದರೂ ಸಹ ಆಕೆಗೆ ತಾಯಿ ಮನೆಯ ನಂಟು ಇನ್ನೂ ಕೂಡ ಇದೆ ಎಂಬುದನ್ನು ಈ ಉಂಗುರ ಸೂಚಿಸುತ್ತದೆ.