ಫೇಶಿಯಲ್‌ಗಿಂತಲೂ ಅಧಿಕ ಹೊಳಪನ್ನು ಬಯಸುತ್ತಿದ್ದೀರಾ? ಹಾಗಾದರೆ ಸಿಂಪಲ್‌ ಯೋಗಾಸನಗಳು ನಿಮಗಾಗಿ

Yoga for Glowing skin: ಯೋಗದಿಂದ ರೋಗ ಮುಕ್ತಿ ಎನ್ನುವ ಮಾತಿನಂತೆ ನಮ್ಮ ಬಹುತೇಕ ಸಮಸ್ಯೆಗಳಿಗೆ ಯೋಗದಲ್ಲಿಯೇ ಪರಿಹಾರವಿದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದರಿಂದ ಹಿಡಿದು ದೇಹವನ್ನು ಫಿಟ್‌ ಆಗಿಸುವವರೆಗೂ ಯೋಗಾಸನಗಳು ನಮಗೆ ಉಪಯುಕ್ತವಾಗಿದೆ. ಇದಷ್ಟೇ ಅಲ್ಲ ಮುಖದ ಕಾಂತಿ ಹೆಚ್ಚಿಸುವಲ್ಲಿಯೂ ಯೋಗಾಸನಗಳು ಪ್ರಮುಖ ಪಾತ್ರವಹಿಸುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಅದನ್ನು ಇಲ್ಲಿ ತಿಳಿಯಿರಿ
 

1 /6

ಧನುರ್ಸಾನ: ಈ ಧನುರ್ಸಾನ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುವುದು. ಈ ಭಂಗಿಯ ನಿಯಮಿತ ಅಭ್ಯಾಸ ತ್ವೆಚೆಯ ಹಲವಾರು ಸಮಸ್ಯೆಗಳಿಂದ ಕ್ರಮೇಣ ಮುಕ್ತಿ ನೀಡುತ್ತದೆ. ಈ ಆಸನವು ದೇಹದಲ್ಲಿನ ಕೊಳಕು ಅಥವಾ ಕಲ್ಮಷವನ್ನು ಹೊರಹಾಕಿ ದೇಹವನ್ನು ಡಿಟಾಕ್ಸ್ ಮಾಡುತ್ತದೆ.   

2 /6

ಮತ್ಸ್ಯಾಸನ: ಈ ಭಂಗಿಯನ್ನು ಮಾಡುವುದರಿಂದ ಆರೋಗ್ಯ ಮತ್ತು ಚರ್ಮದ ಕಾಂತಿಯನ್ನು ಸುಧಾರಿಸಬಹುದು. ಇದು ಥೈರಾಯ್ಡ್ ಗ್ರಂಥಿ ಸರಳವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಇದರಿಂದ ಹಲವಾರು ತ್ವಚೆಯ ಸಮಸ್ಯೆಗಳು ನಿಮ್ಮಿಂದ ದೂರವಿರುತ್ತವೆ.   

3 /6

ಸರ್ವಾಂಗಾಸನ: ದೇಹದಲ್ಲಿ ರಕ್ತಚಲನವಲನವನ್ನು ಸುಧಾರಿಸಲು ಈ ಆಸನ ಸಹಕಾರಿ. ರಕ್ತ ಸಂಚಾರ ಸುಧಾರಿಸಿದರೇ ನಿಮ್ಮ ತ್ವಚೆಯೂ ಉತ್ತಮವಾಗಿರುತ್ತದೆ. ಆದರೆ ಈ ಆಸನವನ್ನು ಮಾಡುವ ಮುನ್ನ ಅಭ್ಯಾಸ ಮಾಡಿ.   

4 /6

ಶವಾಸನ: ಈ ಸರಳವಾದ ಶವಾಸನ ದೇಹಕ್ಕೆ ತುಂಬಾ ಪ್ರಯೋಜಕಾರಿಯಾಗಿದೆ. ಈ ಆಸನ ಮಾಡುವುದರಿಂದ ನಿಮ್ಮ ಒತ್ತಡ ನಿಯಂತ್ರಣವಾಗುವುದಲ್ಲದೇ ತ್ವಚೆಯ ಸಮಸ್ಯೆಗಳೂ ಮಾಯವಾಗುತ್ತವೆ.   

5 /6

ಅದೋಮುಖ ಶ್ವಾನಾಸನ: ಈ ಆಸನದ ನಿಯಮಿತ ಅಭ್ಯಾಸ ನಿಮ್ಮ ದೇಹ ಮತ್ತು ತ್ವಚೆ ಎರಡಕ್ಕೂ ಒಳ್ಳೆಯದು. ಈ ಭಂಗಿಯನ್ನು ಮಾಡುವುದರಿಂದ ನಿಮ್ಮ ದೇಹದಲ್ಲಿ ರಕ್ತದ ಚಲನೆ ಉತ್ತಮವಾಗುತ್ತದೆ.   

6 /6

ಪಶ್ಚಿಮೋತ್ತಾಸನ: ಈ ಆಸನ ತ್ವಚೆಯ ಕಾಂತಿಯನ್ನು ಹೆಚ್ಚಿಸುವುದಲ್ಲದೇ ಮಾನಸಿಕ ಒತ್ತಡವನ್ನೂ ಕಡಿಮೆ ಮಾಡುತ್ತದೆ. ಸಾಮಾನ್ಯವಾಗಿ ಮನುಷ್ಯನಿಗೆ ಒತ್ತಡ ಹೆಚ್ಚಾದಾಗ ಮೊಡವೆ, ಸುಕ್ಕು ಸೇರಿದಂತೆ ಮುಂತಾದ ಚರ್ಮ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ. ಅವುಗಳಿಂದ ಮುಕ್ತಿ ಪಡೆಯಲು ಉತ್ತಮ ಮಾರ್ಗವೆಂದರೇ ಯೋಗಾಸನಗಳನ್ನು ಮಾಡುವುದು.