ಕೇವಲ 900 ರುಪಾಯಿಗೆ ಸಿಗುತ್ತಿದೆ 200Mbps ಇಂಟರ್ನೆಟ್ ಸ್ಪೀಡ್..
ನವದೆಹಲಿ : ಇತ್ತೀಚಿನ ದಿನಗಳಲ್ಲಿ ಸೂಪರ್ ಫಾಸ್ಟ್ ಇಂಟರ್ನೆಟ್ ನ ಬೇಡಿಕೆ ಹೆಚ್ಚಾಗಿದೆ. ಒಂದು ಸಮಯದಲ್ಲಿ, 50Mbps ಸ್ಪೀಡ್ ಸಿಕ್ಕಿದರೆ ಅದುವೇ ಸಾಕಾಗುತ್ತಿತ್ತು. ನಂತರ ಕ್ರಮೇಣ 100Mbpsನ ಇಂಟರ್ನೆಟ್ ವೇಗವೂ ಕಡಿಮೆ ಅನ್ನಿಸುವುದಕ್ಕೆ ಶುರುವಾಯಿತು. ಈ ನಡುವೆ, ಕಂಪನಿಯು ಗ್ರಾಹಕರನ್ನು ಆಕರ್ಷಿಸಲು 200Mbps ಯೋಜನೆಯನ್ನು ಅಗ್ಗವಾಗಿ ನೀಡಿದೆ. (Photo: Freepik)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಖಾಸಗಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಕಂಪನಿ Siti Broadband ಭರ್ಜರಿ ಪ್ಲಾನ್ ತಂದಿದೆ. ಟೆಲಿಕಾಂಟಾಕ್ ಪ್ರಕಾರ, ಕಂಪನಿಯು ಗ್ರಾಹಕರನ್ನು ಸೆಳೆಯಲು ಸೂಪರ್ ಫಾಸ್ಟ್ ಇಂಟರ್ನೆಟ್ ಆಫರ್ ನೀಡುತ್ತಿದೆ.
ಸಿಟಿ ಬ್ರಾಡ್‌ಬ್ಯಾಂಡ್ ''Mega' ಹೆಸರಿನ ಹೊಸ 200Mbps ಫೈಬರ್ ಬ್ರಾಡ್‌ಬ್ಯಾಂಡ್ ಪ್ಲಾನ್ ಅನ್ನು ಲಾಂಚ್ ಮಾಡಿದೆ.
ಮಾಹಿತಿಯ ಪ್ರಕಾರ, ಈ ಪ್ಲಾನ್ ಗಾಗಿ ಬಳಕೆದಾರರು ಕೇವಲ 899 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಸಿಟಿ ಬ್ರಾಡ್‌ಬ್ಯಾಂಡ್ ದೇಶದ ಒಂಬತ್ತು ರಾಜ್ಯಗಳಲ್ಲಿ ತನ್ನ ಸೇವೆಗಳನ್ನು ನೀಡುತ್ತಿದೆ. ದೆಹಲಿ, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಒಡಿಶಾ, ಉತ್ತರಾಖಂಡ ಮತ್ತು ತೆಲಂಗಾಣಗಳಲ್ಲಿ ಕಂಪನಿಯ ಬ್ರಾಡ್‌ಬ್ಯಾಂಡ್ ಸೇವೆ ಲಭ್ಯವಿದೆ.
ಅಸ್ತಿತ್ವದಲ್ಲಿರುವ ಖಾಸಗಿ ಟೆಲಿಕಾಂ ಕಂಪನಿಗಳು ಪ್ರಸ್ತುತ 100Mbps ಸ್ಪೀಡ್ ಗಾಗಿ, ಗ್ರಾಹಕರಿಂದ 600-900 ರೂಪಾಯಿಗಳಷ್ಟು ಚಾರ್ಜ್ ಮಾಡುತ್ತದೆ.