Big News On New Wage Code - ಇದೆ ಏಪ್ರಿಲ್ 1 ರಿಂದ ನೂತನ ವೆಜ್ ಕೋಡ್ (New Wage Code) ಜಾರಿಗೆ ಬರಬೇಕಿತ್ತು. ಆದರೆ ಇದೀಗ ಅದಕ್ಕೆ ತಡೆ ನೀಡಲಾಗಿದೆ.
ನವದೆಹಲಿ: Big News On New Wage Code - ದೇಶಾದ್ಯಂತ ಇರುವ ನೌಕರ ವರ್ಗಕ್ಕೆ ಇದೆ ಏಪ್ರಿಲ್ 1 ರಿಂದ ನೂತನ ವೇತನ ಸಂಹಿತೆ (New Wage Code) ಜಾರಿಗೆ ಬರಬೇಕಿತ್ತು. ಆದರೆ, ಇದೀಗ ಅದನ್ನು ಸ್ಥಗಿತಗೊಳಿಸಲಾಗಿದೆ. ಕೇಂದ್ರ ಕಾರ್ಮಿಕ ಸಚಿವಾಲಯದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ನೂತನ ವೇತನ ಸಂಹಿತೆ ಜಾರಿಯನ್ನು ಸ್ವಲ್ಪ ಸಮಯದವರೆಗೆ ಮುಂದೂಡಲಾಗಿದೆ ಎನ್ನಲಾಗಿದೆ. ಇದರಿಂದ ವೇತನ ಪಡೆಯುವ ನೌಕರರ ವೇತನ ರಚನೆ (Salary Structrue)ಯಥಾಸ್ಥಿತಿ ಮುಂದುವರೆಯಲಿದ್ದು, ಅದರಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ.
ಇದನ್ನೂ ಓದಿ- PF ಗೆ ಸಂಬಂಧಿಸಿದ ಸಮಸ್ಯೆಗೆ ಇನ್ಮುಂದೆ WhatsApp ನಲ್ಲಿ ಸಿಗಲಿದೆ ಪರಿಹಾರ!
ಈ ಕುರಿತು ಮಾಹಿತಿ ನೀಡಿರುವ EPFO ಮಂಡಳಿ ಸದಸ್ಯರಾಗಿರುವ ವಿಜಯ್ ಉಪಾಧ್ಯಾಯ್ ನೂತನ ವೇತನ ಸಂಹಿತೆಗೆ ತಡೆ ನೀಡಿರುವ ಸುದ್ದಿಯನ್ನು ಪುಷ್ಟೀಕರಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ನೂತನ ವೇತನ ಸಂಹಿತೆಯ ಕುರಿತು ಹೆಚ್ಚಿನ ಪರಾಮರ್ಶೆಯನ್ನು ಸದ್ಯಕ್ಕೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿಯೇ ಈ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ- EPFO New Guidelines : PF ಖಾತೆಯಲ್ಲಿ ಹೆಸರು, ಜನ್ಮ ದಿನಾಂಕ ತಪ್ಪಾಗಿದ್ದರೆ ಸರಿಪಡಿಸುವುದು ಸುಲಭವಲ್ಲ
ಕಳೆದ ಹಲವು ದಿನಗಳಿಂದ ಮಾಧ್ಯಮಗಳಲ್ಲಿ ನೂತನ ವೇತನ ಸಂಹಿತೆ ಭಾರಿ ಹೆಡ್ಲೈನ್ ಗೆ ಕಾರಣವಾಗಿದೆ. ಈ ವರದಿಗಳಲ್ಲಿ ಏಪ್ರಿಲ್ 1 ರಿಂದ ನೂತನ ವೇತನ ಸಂಹಿತೆ ಜಾರಿಗೆ ಬರುವ ಸಾಧ್ಯತೆಗಳನ್ನು ವರ್ತಿಸಲಾಗಿತ್ತು. ಆದರೆ, ಇದುವರೆಗೆ ಸರ್ಕಾರದ ವತಿಯಿಂದ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಒಂದೆಡೆ ಕೆಲವರು ನೂತನ ವೇತನ ಕೋಡ್ ಜಾರಿಯ ಬಂದ ಕುರಿತು ಕೆಲವರು ವರದಿ ಮಾಡಿದ್ದರೆ, ಇನ್ನೊಂದೆಡೆ ಈ ನೂತನ ವೇತನ ಸಂಹಿತೆ ದೋಷಗಳಿಂದ ಕೂಡಿದೆ ಎಂದು ಇನ್ನೂ ಕೆಲವರು ಹೇಳಿದ್ದಾರೆ. ಹೀಗಾಗಿ ಸದ್ಯದ ಮಟ್ಟಿಗೆ ಅದರ ಜಾರಿಗೆ ತಡೆ ನೀಡಲಾಗಿದೆ.
ಇದನ್ನೂ ಓದಿ-EPFO : ಲಕ್ಷಾಂತರ ಪಿಂಚಣಿದಾರರಿಗೆ ಸಿಗಲಿದೆ ಈ ಪ್ರಯೋಜನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನೂತನ ವೇತನ ಸಂಹಿತೆ - ವೇತನ ಸಂಹಿತೆ (Wage Code Act) 2019ರ ಪ್ರಕಾರ, ಯಾವುದೇ ಓರ್ವ ನೌಕರನ ಬೇಸಿಕ್ ವೇತನ ಕಂಪನಿಯ CTCಯ ಶೇ.50 ಕ್ಕಿಂತ ಕಡಿಮೆಯಾಗಬಾರದು ಎನ್ನಲಾಗಿದೆ. ಪ್ರಸ್ತುತ ಸಾಕಷ್ಟು ಕಂಪನಿಗಳು ಬೇಸಿಕ್ ವೇತನವನ್ನು (Basic Salary) ಇಳಿಕೆ ಮಾಡಿ, ಭತ್ಯೆಗಳನ್ನು ಹೆಚ್ಚಾಗಿ ನೀಡುತ್ತವೆ. ಇದರಿಂದ ಕಂಪನಿಯ ಮೇಲೆ ಹೊರೆ ಕಡಿಮೆಯಾಗಬೇಕು ಎಂಬುದು ಅವುಗಳ ಉದ್ದೇಶ.
2. ನೂತನ ವೇತನ ಸಂಹಿತೆಯಿಂದ ಬದಲಾಗಳಿಗೆ ಸ್ಯಾಲರಿ ಸ್ಟ್ರಕ್ಚರ್ - ವೆಜ್ ಕೋಡ್ (Wage Code Act), 2019 ಜಾರಿಗೆ ಬಂದ ಬಳಿಕ ನೌಕರರ ಸ್ಯಾಲರಿ ಸ್ಟ್ರಕ್ಚರ್ ಸಂಪೂರ್ಣ ಬದಲಾಗಲಿದೆ. ಇದರಿಂದ ನೌಕರರ ಕೈಗೆ ಸೇರುವ ಸಂಬಳ (Take Home Salary) ಕಡಿಮೆಯಾಗಲಿದೆ. ಏಕೆಂದರೆ ಬೇಸಿಕ್ ಸ್ಯಾಲರಿ ಹೆಚ್ಚಾಗುವುದರಿಂದ ಭವಿಷ್ಯ ನಿಧಿ ಖಾತೆಗೆ ಹೆಚ್ಚಿನ ಹಣ ಸೇರಲಿದ್ದು, ನೌಕರರ ಭವಿಷ್ಯ ಮತ್ತಷ್ಟು ಸುರಕ್ಷಿತವಾಗಲಿದೆ. ಪಿಎಫ್ ಜೊತೆಗೆ ಗ್ರ್ಯಾಚುಟಿಯಲ್ಲಿ (Monthly Gratuity) ನೌಕರರ ಕೊಡುಗೆ ಕೂಡ ಹೆಚ್ಚಾಗಲಿದೆ. ಈ ರೀತಿ ನೌಕರರ ಟೇಕ್ ಹೋಮ್ ಸ್ಯಾಲರಿ ಕಡಿಮೆಯಾಗಲಿದ್ದು, ನೌರರರಿಗೆ ನಿವೃತ್ತಿಯ ಬಳಿಕ ಹೆಚ್ಚಿನ ಹಣ ಸಿಗಲಿದೆ.
3. ಇದರ ಜೊತೆಗೆ ಉಳಿದ ಕೋಡ್ ಕೂಡ ಜಾರಿಗೆ ಬರುವುದಿಲ್ಲ - ನೂತನ ವೆಜ್ ಕೋಡ್ ಜೊತೆಗೆ ಸಾಮಾಜಿಕ ಭದ್ರತೆ ಸಂಹಿತೆ (social security code), ಇಂಡಸ್ಟ್ರಿಯಲ್ ರಿಲೇಶನ್ ಕೋಡ್ (code on industrial relations) ಹಾಗೂ ಆಕ್ಯುಪೇಶನಲ್ ಸೇಫ್ಟಿ ಕೋಡ್, ಹೆಲ್ತ್ ಅಂಡ್ ವರ್ಕಿಂಗ್ ಕಂಡಿಶನ್ಸ್ ಕೋಡ್ (code on occupational safety, health and working conditions) ಗಳು ಕೂಡ ಏಪ್ರಿಲ್ 1 ಕ್ಕೆ ಜಾರಿಗೆ ಬರುತ್ತಿಲ್ಲ.
4. ಸಾಮಾಜಿಕ ಭದ್ರತೆ ಸಂಹಿತೆ (social security code) - ಯಾವುದೇ ಓರ್ವ ನೌಕರ ಯಾವುದೇ ಒಂದು ಕಂಪನಿಯಲ್ಲಿನ ಗುತ್ತಿಗೆ ಎಷ್ಟೇ ಅವಧಿಯದ್ದಾಗಿದ್ದರೂ ಕೂಡ ಆತ ಗ್ರ್ಯಾಚುಟಿ ಪಡೆಯಲು ಅರ್ಹನಾಗಿರುವ ವ್ಯವಸ್ಥೆಯನ್ನು ಈ ಸಂಹಿತೆಯಲ್ಲಿ ಮಾಡಿಕೊಡಲಾಗಿದೆ. ಇದುವರೆಗೆ ಯಾವುದೇ ನೌಕರ ಕಂಪನಿಯೊಂದರಲ್ಲಿ 5 ವರ್ಷ ಸೇವೆ ಪೂರ್ಣಗೊಳಿಸಿದಾಗ ಮಾತ್ರ ಗ್ರ್ಯಾಚುಟಿಗೆ ಅರ್ಹನಾಗಲಿದ್ದಾನೆ ಎಂಬ ನಿಯಮವಿತ್ತು.